ಸುAಟಿಕೊಪ್ಪ, ಏ. ೨೧: ಕೊಡಗು ಗೌಡ ನಿವೃತ ನೌಕರರ ಸಂಘದÀ ವತಿಯಿಂದÀ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷಿಕ ವಧು-ವರರ ಸಂದರ್ಶನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚೊಕ್ಕಾಡಿ ಅಪ್ಪಯ್ಯ ಉದ್ಘಾಟಿಸಿ ಮಾತನಾಡಿದ ಅವರು ಕೊಡಗು ಗೌಡ ನಿವೃತ್ತ ನೌಕರರ ಸಂಘದÀ ವತಿಯಿಂದ ಅರೆಭಾಷಿಕ ವಧು-ವರರ ಸಂದರ್ಶನ ಕಾರ್ಯಕ್ರಮ ಶ್ಲಾಘನೀಯ ಎಂದರು. ವಧು-ವರರ ಆಯ್ಕೆ ಸಂದರ್ಭ ಪೋಷಕರು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡು ಆಯ್ಕೆ ಮಾಡಿದ್ದಲ್ಲಿ ಅಂತಹ ಜೋಡಿಗಳ ಮುಂದಿನ ಜೀವನ ಸುಖಮಯವಾಗಲಿದೆ. ಪ್ರತಿಯೊಬ್ಬರಲ್ಲೂ ಅವರದೇ ಆದಂತಹ ವೈವಾಹಿಕ ಜೀವನದ ಕನಸು ನನಸಾಗಲು ಇಂತಹ ಕಾರ್ಯಕ್ರಮ ಸೂಕ್ತವಾಗಿದೆ. ಹುಡುಗ-ಹುಡುಗಿಯರು ಹಿಂಜರಿಕೆ ಬಿಟ್ಟು ಇಂತಹ ಸಂದರ್ಶನದಲ್ಲಿ ಪಾಲ್ಗೊಂಡು ಆದರ್ಶ ದಂಪತಿಗಳಾಗಿ ಜನಾಂಗದ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು. ವ್ಯಕ್ತಿತ್ವಕ್ಕೆ ತಕ್ಕಂತೆ ಹುಡುಗ-ಹುಡುಗಿಯರ ಆಯ್ಕೆ ಮಾಡಿಕೊಂಡು ಉತ್ತಮ ಜೀವನ ನಡೆಸಿ ಎಂದರು.

ಮತೋರ್ವ ಅತಿಥಿ ನಿವೃತ್ತ ಪ್ರೊಫೆಸÀರ್ ದಂಬೆಕೋಡಿ ಸುಶೀಲ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಪೋಷಕರಿಗೆ ಹುಡುಗಿಗೆ ಸರಿಯಾದ ಹುಡುಗನನ್ನು ಆಯ್ಕೆ ಮಾಡಲು ಬಹಳ ಕಷ್ಟದ ಕೆಲಸ. ಹಿಂದಿನ ಕಾಲದಲ್ಲಿ ಹಿರಿಯರು ನೋಡಿದ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈಗಿನ ಕಾಲದಲ್ಲಿ ಹತ್ತು ಮದುವೆಯಾದರೆ ಒಂಭತ್ತು ವಿಚ್ಛೇದನÀವಾಗಿರುತ್ತದೆ. ಇದಕ್ಕೆ ಹೊಂದಾಣಿಕೆಯ ಕೊರತೆ ಕಾರಣವಾಗಿದೆ. ಮದುವೆಯಾದ ನಂತರ ಪತಿ-ಪತ್ನಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡದೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು. ವಧು-ವರರ ಆಯ್ಕೆ ಸಂದರ್ಭ ಮೂಢನಂಬಿಕೆಗೆ ಒಳಗಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಉಳಿಯುವಂತಾಗಿದೆ. ಇಂತಹ ಸಂದರ್ಶನದÀಲ್ಲಿ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಸÀಂಬAಧ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ಮಾತನಾಡಿ; ಕಳೆದ ೧೪ ವರ್ಷಗಳಿಂದ ಕೊಡಗು ಗೌಡ ನಿವೃತ ನೌಕರರ ಸಂಘದÀ ವತಿಯಿಂದÀ ಉಚಿತ ದಂತ ಚಿಕಿತ್ಸಾ ಶಿಬಿರ, ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಹಲವಾರು ಜನಸೇವಾ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ಗೌಡ ಸಂಘದ ಎಲ್ಲಾ ಸದಸ್ಯರ ಬೆಂಬಲದಿAದ ಸಾಧ್ಯವಾಗಿದೆ. ಮುಂದೆಯು ಜನಾಂಗದ ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು. ವಧು-ವರರ ಸಂದರ್ಶನದಲ್ಲಿ ೭೫ ಜೋಡಿಗಳು ಭಾಗವಹಿಸಿದ್ದು ಇವರನ್ನು ಪಟ್ಟಡ ಶಿವಕುಮಾರ್ ವೇದಿಕೆಗೆ ಬರಮಾಡಿ ಸಭೆಗೆ ಪರಿಚಯಿಸಿದರು.

ಕುದುಪಜೆ ಶಾರದ ಪ್ರಾರ್ಥಿಸಿ, ಬಾರಿಕೆ ಅಯ್ಯಪ್ಪ ವಂದಿಸಿದರು. ಈ ಸಂದರ್ಭ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ. ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ, ಜಂಟಿ ಕಾರ್ಯದರ್ಶಿ ಅತ್ತೇಡಿ ಕೃಷ್ಣಪ್ಪ, ಖಜಾಂಚಿ ಕರ್ಣಯನ ನಾಗೇಶ್, ನಿರ್ದೇಶಕರಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ಸೂದನ ಮೋಹಿನಿ, ತಳೂರು ಕೆ. ಕಾಳಪ್ಪ, ಹೊಸೋಕ್ಲು ಟಿ. ಪೊನ್ನಪ್ಪ, ಕೂಡಕಂಡಿ ಉಮಾದೇವಿ, ಗೊದೇಟಿರ ರಾಮಯ್ಯ, ಕುಲ್ಲಚೆಟ್ಟಿ ಎಂ. ಪೂವಯ್ಯ, ಉಪಸ್ಥಿತರಿದ್ದರು.