ಮಡಿಕೇರಿ, ಏ. ೨೧: ಇಬ್ನಿವಳ ವಾಡಿ (ನೀರುಕೊಲ್ಲಿ) ವಿಜು ಮಾಲೇರ, ಮಾಜಿ ಸೈನಿಕ ಪ್ರಭಾಕರ್ ಅವರ ಮುಂದಾಳತ್ವದಲ್ಲಿ ಇಬ್ನಿವಳ ವಾಡಿ ಪ್ರೀಮಿಯರ್ ಲೀಗ್ ಸೀಸನ್ ೨ ಕಡಗದಾಳುವಿನ ಮುಕ್ಕಾಟಿರ ಬಲ್ಯ ಬೇಲ್ ಮೈದಾನದಲ್ಲಿ ಆಯೋಜನೆ ಮಾಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಐಪಿಎಲ್ ಸಮಿತಿಯ ಅಧ್ಯಕ್ಷ ನವೀನ್ ಚೆಟ್ರಂಡ, ಕಡಗದಾಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಿಕಾ, ಮರಗೋಡು ಪಂಚಾಯಿತಿ ಸದಸ್ಯ ಪರಿಚನ ಶರತ್, ಕಡಗದಾಳು ಪಂಚಾಯಿತಿ ಸದಸ್ಯ ಶಂಭಯ್ಯ, ಭಾರತಿ ಪಿ.ಬಿ. ಇಬ್ನಿವಳವಾಡಿ ಸಮುದಾಯ ಆರೋಗ್ಯ ಅಧಿಕಾರಿ ಕಾರ್ತಿಕ್, ಗುತ್ತಿಗೆದಾರ ಕಿರಣ್, ಕೆಸಿಎಲ್ ಅಧ್ಯಕ್ಷ ಲೋಕೇಶ್ ರೈ ಹಾಜರಿದ್ದರು. ಪ್ರಥಮ ದಿನದ ಪಂದ್ಯಾಟ ಸಮಯದಲ್ಲಿ ಮಳೆಬಂದ ಕಾರಣ ಪಂದ್ಯಾವಳಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಸಲಾಯಿತು. ಒಟ್ಟು ೧೫೦ ಆಟಗಾರರನ್ನು ೧೨ ಫ್ರಾಂಚೈಸಿ ಅವರು ಹರಾಜಿನ ಮುಖಾಂತರ ಖರೀದಿಸಲಾಗಿತ್ತು.

ಟೀಮ್ ವಿರಾಟ್, ಟೀಮ್ ಲೂಸರ್ಸ್, ಟೀಮ್ ಕ್ಯಾಪ್ಟನ್ಸ್, ಎಸ್‌ಎಂಎಸ್ ಬ್ರದರ್ಸ್, ಚೀತಾ ಪೈಟರ್ಸ್, ಕಡಗದಾಳು ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಕಡಗದಾಳು, ಗೋಲ್ಡನ್ ಸ್ಟಾರ್ಸ್, ಆರ್‌ಸಿಬಿ, ಕೊಂಬನ್, ಬಿಎನ್‌ಕೆ, ಟೀಮ್ ಜಾಗ್ವರ್ ಪಾಲ್ಗೊಂಡಿದ್ದವು. ಫೈನಲ್ ಪಂದ್ಯ ಟೀಮ್ ಲೂಸರ್ಸ್ ಮತ್ತು ಟೀಮ್ ವಿರಾಟ್ ತಂಡ ನಡುವೆ ನಡೆಯಿತು. ಟೀಮ್ ವಿರಾಟ್ ತಂಡ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲೂಸರ್ಸ್ ತಂಡ ನಿಗದಿತ ೫ ಓವರಿಗೆ ೪೨ ರನ್ ಹೊಡೆದು, ೪೩ ರನ್ ಗುರಿಯನ್ನು ಬೆನ್ನಟ್ಟಿದ ಟೀಮ್ ವಿರಾಟ್ ತಂಡ ೯ ವಿಕೆಟ್ ಕಳೆದುಕೊಂಡು ಕೊನೆಯ ಬಾಲ್‌ನವರೆಗೂ ರೋಚಕವಾದ ಪಂದ್ಯ ನಡೆಯಿತು. ಒಂದು ಎಸೆತಕ್ಕೆ ನಾಲ್ಕು ರನ್‌ನ ಅವಶ್ಯಕವಿದ್ದಾಗ ಟೀಮ್ ವಿರಾಟ್ ತಂಡದ ಕಿಸಾನ್, ಸಿಕ್ಸರ್ ಹೊಡಿಯುವ ಮುಖಾಂತರ ತಂಡದ ಗೆಲುವಿಗೆ ಕಾರಣರಾದರು. ವಿಜೇತ ತಂಡಕ್ಕೆ ೫೦,೦೦೦ ನಗದು, ದ್ವಿತೀಯ ಸ್ಥಾನ ೩೦,೦೦೦ ಸಾವಿರ ನಗದು ತೃತೀಯ ಸ್ಥಾನ ಪಡೆದ ಟೀಮ್ ಕ್ಯಾಪ್ಟನ್ಸ್ ೧೫,೦೦೦ ಸಾವಿರ ನಗದು, ಟೀಮ್ ಎಸ್ ಎಂ ಎಸ್ ತಂಡ ಚತುರ್ಥ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಪಡೆಯಿತು

ಫೈನಲ್ ಪಂದ್ಯದ ಮ್ಯಾನ್ ಅಫ್ ದಿ ಮ್ಯಾಚ್ ಕಿಸಾನ್ ಪಡೆದು ಕೊಂಡರು, ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಆಲ್ ರೌಂಡರ್ ಪ್ರದರ್ಶನ ನೀಡಿದ ಲೂಸರ್ಸ್ ತಂಡ ರಾಜೇಶ್ ಅವರಿಗೆ ಪಂದ್ಯಪುರು ಷೋತ್ತಮ ದೊರಕಿತು. ಒ

ಂದು ಓವರಿಗೆ ೬ ಸಿಕ್ಸರ್ ಭಾರಿಸಿ ಒಟ್ಟು ೨೨ ಸಿಕ್ಸರ್ ಹೊಡೆದು ಉತ್ತಮ ಬ್ಯಾಟ್ಸ್ಮನ್ ಲೂಸರ್ಸ್ ತಂಡದ ಸಂದೀಪ್ ಪಡೆದರು, ಉತ್ತಮ ಬೌಲಾರ್ ಲೂಸರ್ಸ್ ತಂಡದ ಜಯಂತ್ ಪಡೆದರು.

ಪಂದ್ಯಾವಳಿಯಲ್ಲಿ ವೈಯಕ್ತಿಕ ೫೦ ರನ್ ಹೊಡೆದ ಟೀಮ್ ಕ್ಯಾಪ್ಟನ್ಸ್ ತಂಡದ ವಿಶ್ವ ಉತ್ತಮ ಕ್ಯಾಚ್ ಪಡೆದರು, ಉತ್ತಮ ಕೀಪರ್ ಟೀಮ್ ಕ್ಯಾಪ್ಟನ್ಸ್ ತಂಡದ ವಿವೇಕ್ ಮೊಗೇರ, ಉತ್ತಮ ಕ್ಷೇತ್ರರಕ್ಷಣೆ ಚೀತಾ ತಂಡದ ಸುನಿಲ್, ಉದಯೋನ್ಮುಖ ಆಟಗಾರ ಟೀಮ್ ವಿರಾಟ್ ತಂಡದ ರಾಮಚಂದ್ರ ಪಡೆದರು. ಸಮಾರೋಪ ಸಮಾರಂಭ ನೀರುಕೊಲ್ಲಿಯ ಶಾಲೆಯಲ್ಲಿ ನಡೆಯಿತು. ಮಾಜಿ ಸೈನಿಕ ಸಿ.ಕೆ. ಪ್ರಭಾಕರ್, ವಿನಾಯಕ ಅವರಿಗೆ ಸನ್ಮಾನ ಮಾಡಲಾಯಿತು.

ಪ್ರಥಮ ಆಕರ್ಷಕ ಟ್ರೋಫಿ ಯನ್ನು ದಿನು ಸೋಮಣ್ಣ, ದ್ವಿತೀಯ ಆಕರ್ಷಕ ಟ್ರೋಫಿ ಪಿ.ಪಿ. ಶ್ರೀಧರ ನೀರುಕೊಲ್ಲಿ, ತೃತೀಯ ಆಕರ್ಷಕ ಟ್ರೋಫಿ ಮಾಲೇರ ರಾಮಪ್ಪ ಜ್ಞಾಪಕಾರ್ಥವಾಗಿ ನೀಡಲಾಯಿತು.