ಶನಿವಾರಸAತೆ, ಏ. ೨೦: ಪಟ್ಟಣದಲ್ಲಿ ಬುಧವಾರ ಪರಿಸ್ಥಿತಿ ಶಾಂತವಾಗಿದ್ದAತೆ ಮೇಲ್ನೋಟಕ್ಕೆ ಕಂಡುಬAದರೂ ಬೂದಿ ಮುಚ್ಚಿದ ಕೆಂಡದAತೆ ಭಾಸವಾಗುತ್ತಿತ್ತು. ಮಂಗಳವಾರ ೨ ಕೋಮಿನ ಯುವಕರ ನಡುವೆ ಕ್ಷÄಲ್ಲಕ ಕಾರಣಕ್ಕೆ ಜಗಳವಾಗಿದ್ದು, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶ್ರೀರಾಮಮಂದಿರ, ಜಾಮೀಯಾ ಮಸೀದಿ, ಗುಡುಗಳಲೆ ಜಂಕ್ಷನ್, ದುಂಡಳ್ಳಿ, ಹಂಡ್ಲಿ, ಚೆಕ್‌ಪೋಸ್ಟ್ಗಳಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಮಡಿಕೇರಿ, ಕುಶಾಲನಗರ ದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದ್ದು, ಪಟ್ಟಣದ ಎಲ್ಲೆಡೆ ನಿಯೋಜಿಸಲಾಗಿದೆ.
ಪರಿಸ್ಥಿತಿ ಸಂಪೂರ್ಣ ಶಾಂತವಾಗಬೇಕೆAದರೆ ಪ್ರಕರಣ ದಾಖಲಿಸಿರುವ ೮ ಮಂದಿ ಆರೋಪಿ ಗಳನ್ನು ಶೀಘ್ರ ಬಂಧಿಸಲೇಬೇಕು ಎಂದು ಹಿಂದೂ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.