ಮಡಿಕೇರಿ, ಏ. ೨೦: ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಪೊನ್ನಂಪೇಟೆಯಲ್ಲಿ ನಡೆದ ಆರೋಗ್ಯ ಮೇಳ ಯಶಸ್ವಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಮೇಳಕ್ಕೆ ಆಗಮಿಸಿ ವೈದ್ಯರ ಸಲಹೆ ಜೊತೆಗೆ ಅಗತ್ಯ ಔಷಧಿ ಪಡೆದುಕೊಂಡರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಆರೋಗ್ಯ ಅಭಿಯಾನ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ವತಿಯಿಂದ ೭೫ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆ ತನಕ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆ ಸರಕಾರಿ ಪ್ರೌಢಶಾಲೆ, ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣಗಳಲ್ಲ್ಲಿ ಆರೋಗ್ಯ ಮೇಳ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು ೪,೫೦೦ಕ್ಕೂ ಹೆಚ್ಚು ರೋಗಿಗಳು ಆಗಮಿಸಿ ತಪಾಸಣೆಗೆ ಒಳಪಟ್ಟರು. ಅಲ್ಲದೆ ೬೫೦ಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಕಾರ್ಡ್ ನೋಂದಣಿಗೆ ಮುಂದಾದರು. ಮಾನಸಿಕ, ದಂತ, ಮೂಳೆ, ಇ.ಎನ್.ಟಿ,

(ಮೊದಲ ಪುಟದಿಂದ) ಹೃದ್ರೋಗ, ನೇತ್ರ, ಶಸ್ತç ಚಿಕಿತ್ಸಾ, ಸಾಮಾನ್ಯ ರೋಗಗಳ ತಪಾಸಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆದವು. ಆಯುಷ್ ಆಸ್ಪತ್ರೆಯ ವಿಭಾಗ ಕೂಡ ಕಾರ್ಯ ನಿರ್ವಹಿಸಿತು. ಉಚಿತ ಇ.ಸಿ.ಜಿ. ತಪಾಸಣೆಯೂ ನಡೆಯಿತು. ಒಂದೆ ಸೂರಿನಡಿ ಎಲ್ಲಾ ವಿಧದ ಕಾಯಿಲೆಗಳಿಗೆ ಚಿಕಿತ್ಸೆ ದೊರಕಿರುವುದು ಮೆಚ್ಚುಗೆಗೆ ಪಾತ್ರವಾಯಿತು.

ದೇಹದಾನ - ನೇತ್ರದಾನ

ಮಡಿಕೇರಿಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ೫ ಮಂದಿ ದೇಹದಾನ ಹಾಗೂ ೧೬ ಮಂದಿ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು. ಆರೋಗ್ಯ ಮೇಳದಲ್ಲಿ ಇದಕ್ಕೂ ಕೂಡ ಅವಕಾಶ ಕಲ್ಪಿಸಲಾಗಿತ್ತು.

ಇದರೊಂದಿಗೆ ಆಹಾರ ಗುಣಮಟ್ಟದ ಪರೀಕ್ಷೆಯ ವ್ಯವಸ್ಥೆ ಇತ್ತು. ಆಯುಷ್ ಹಾಗೂ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿತ್ತು.

ಮಡಿಕೇರಿ ತಾಲೂಕು ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದಡಿ ೨೦೭ ಮಂದಿ ಆರೋಗ್ಯ ಕಾರ್ಡ್ಗಾಗಿ, ಯೂನಿಕ್ ಹೆಲ್ತ್ ಕಾರ್ಡ್ಗೆ ೧೩೨ ಮಂದಿ ನೋಂದಣಿ ಮಾಡಿಸಿಕೊಂಡರು. ೧೦೦೫ ರೋಗಿಗಳು ಮೇಳದಲ್ಲಿ ತಪಾಸಣೆಗೆ ಒಳಪಟ್ಟರು.

ಕುಶಾಲನಗರದಲ್ಲಿ ೨,೧೫೬ ಮಂದಿ ತಪಾಸಣೆಗೆ ಆಗಮಿಸಿದ್ದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ಗೆ ೨೫೭ ಮಂದಿ, ೧೫೦ ಮಂದಿ ಆರೋಗ್ಯ ಕಾರ್ಡ್ಗೆ ನೋಂದಣಿ ಮಾಡಿಕೊಂಡಿದ್ದಾರೆ.

ಹಾಗೆಯೇ ಪೊನ್ನಂಪೇಟೆಯಲ್ಲಿ ೧೨೦೬ ಮಂದಿ ತಪಾಸಣೆಗೆ ನೋಂದಣಿ ಮಾಡಿಕೊಂಡಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ಗೆ ೩೦೦ ಮಂದಿ ನೋಂದಣಿ ಮಾಡಿಕೊಂಡಿದಾರೆ.

ವೈದ್ಯಕೀಯ ತಂಡ

ಜಿಲ್ಲೆಯ ವೈದ್ಯರುಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳು ಆರೋಗ್ಯ ಮೇಳದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ ಎಂಬ ಆರೋಪ ನಡುವೆ ದೊಡ್ಡ ಮಟ್ಟದ ವೈದ್ಯರ ತಂಡ ಇಂದು ವಿವಿಧೆಡೆ ನಡೆದ ಮೇಳದಲ್ಲಿ ಕಾರ್ಯನಿರ್ವಹಿಸಿತು. ಇವರೊಂದಿಗೆ ಪ್ರಶಿಕ್ಷಣಾರ್ಥಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ರೋಗಿಗಳ ತಪಾಸಣೆ ನಡೆಸಿದರು.

ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ರೋಗಿಗಳನ್ನು ಯಾವ ವೈದ್ಯರ ಬಳಿ ಕರೆದೊಯ್ಯಬೇಕೆಂಬ ನಿಟ್ಟಿನಲ್ಲಿ ಸಹಾಯ ಮಾಡಿದರು. ವೈದ್ಯಕೀಯ ಸಿಬ್ಬಂದಿಗಳು ರೋಗಿಗಳ ಪ್ರವೇಶ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಡೆದ ಆರೋಗ್ಯ ಮೇಳವನ್ನು ಜನರು ಸದ್ಭಳಕೆ ಮಾಡಿಕೊಂಡರು.