ಚಂದ್ರಮೋಹನ್

ಕುಶಾಲನಗರ, ಏ. ೨೦: ಜೀವನದಿ ಕಾವೇರಿ ಸಂಗಮದಲ್ಲಿ ಕಲುಷಿತ ನೀರು ನದಿಗೆ ನೇರವಾಗಿ ಸೇರುವುದನ್ನು ತಪ್ಪಿಸಲು ಕಾರ್ಯ ಯೋಜನೆಯನ್ನು ರೂಪಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.

ಭಾಗಮಂಡಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯಿಂದ ನದಿ ಬಹುತೇಕ ಮಲೀನಗೊಳ್ಳುತ್ತಿದೆ. ನದಿ ಪಾತ್ರದಲ್ಲಿ ಚರಂಡಿ-ನೀರು ನದಿಗೆ ನೇರವಾಗಿ ಸೇರುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಅಲ್ಲಿನ ನಿವಾಸಿ ಜಯಂತ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎನ್.ಆರ್. ಕೃಷ್ಣಕುಮಾರ್ ಅವರ ಪೀಠ ಮಂಗಳವಾರ ವಿಚಾರಣೆ ನಡೆಸಿ ಆದೇಶ ನೀಡಿದೆ.

ಅರ್ಜಿದಾರ ಪರ ವಕೀಲ ಮೊಟ್ಟನ ರವಿಕುಮಾರ್ ಫೋಟೋ ಸಹಿತ ದಾಖಲೆಗಳನ್ನು ಸಲ್ಲಿಸಿ ಕಾವೇರಿ ಹಾಗೂ ಕನ್ನಿಕೆ ನದಿಗಳಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸುವ ಕಾರ್ಯವನ್ನು ಸಂಬAಧಿಸಿದ ಇಲಾಖೆ ಸಮರ್ಪಕವಾಗಿ ಮಾಡಿಲ್ಲ. ಗುತ್ತಿಗೆದಾರರು ಸರಿಯಾದ ಕೆಲಸ ನಿರ್ವಹಿಸದೇ ನದಿಪಾತ್ರದಲ್ಲಿ ಕಲುಷಿತ ನೀರು ಹರಿಯುತ್ತಿದ್ದು ಅದನ್ನು ತಡೆಯಬೇಕು ಹಾಗೂ ನದಿ ಪಾತ್ರದಲ್ಲಿನ ಮಾಲಿನ್ಯ ಸ್ವಚ್ಛತೆ ಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ನದಿಗೆ ಕಲುಷಿತ ನೀರು ಹರಿಯುವುದನ್ನು ತಪ್ಪಿಸಲು ಹಾಗೂ ನದಿ ಪಾತ್ರವನ್ನು ಸ್ವಚ್ಛ ಗೊಳಿಸಲು ಅಧಿಕಾರಿಗಳು ತುರ್ತಾಗಿ ಗಮನ

(ಮೊದಲ ಪುಟದಿಂದ) ಹರಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ನದಿಗಳ ಪುನಶ್ಚೇತನ ಮತ್ತು ಸ್ವಚ್ಛತಾ ಕಾರ್ಯ ಹೊಣೆಹೊತ್ತಿರುವ ಕಾವೇರಿ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳು ಸಂಬAಧಪಟ್ಟ ಇತರ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ನದಿಪಾತ್ರ ಸ್ವಚ್ಛತೆಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ ಎರಡನೇ ವಾರಕ್ಕೆ ಮುಂದೂಡಿದೆ.

ಭಾಗಮAಡಲ ಬಳಿ ನಿರ್ಮಾಣಗೊಳ್ಳುತ್ತಿರುವ ಅಂದಾಜು ರೂ. ೨೮.೦೮ ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದು ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ತಲಕಾವೇರಿ ಮತ್ತು ಭಾಗಮಂಡಲಕ್ಕೆ ಬರುವ ಪ್ರವಾಸಿಗರಿಂದ ಕಾವೇರಿ, ಕನ್ನಿಕೆ ಹಾಗೂ ಗುಪ್ತಗಾಮಿನಿ ಸುಜ್ಯೋತಿ ನದಿಗಳು ಮಲೀನ ಆಗುತ್ತಿವೆ. ಚರಂಡಿಯ ಕಲುಷಿತ ನೀರನ್ನು ನದಿಗೆ ನೇರವಾಗಿ ಹರಿಸಲಾಗುತ್ತಿದೆ. ಕಾಮಗಾರಿಗಳು ಮತ್ತಷ್ಟು ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಆಕ್ಷೇಪ ಸಲ್ಲಿಸಿದ್ದರು.