ಪೆರಾಜೆ, ಏ. ೨೦: ನಿಡ್ಯಮಲೆಯಲ್ಲಿ ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಅದು ಕುಸಿದು ಬಿದ್ದ ಪರಿಣಾಮ ಮನೆ ಯಜಮಾನ ಮೃತಪಟ್ಟ ಘಟನೆ ನಡೆದಿದೆ. ನಾಗಪ್ಪ ನಾಯ್ಕ ಮೃತ ದುರ್ದೈವಿ. ನಾಗಪ್ಪ ನಾಯ್ಕ ಹಾಗೂ ಅವರ ಮಗ ದರ್ಶನ್ ತಮ್ಮ ಹಳೆಮನೆಯ ಗೋಡೆಗಳನ್ನು ತೆರವುಗೊಳಿಸುವ ಕೆಲಸ ಮಾಡುತಿದ್ದಾಗ ಕೆಡವುತ್ತಿದ್ದ ಗೋಡೆ ಜರಿದು ಬಿತ್ತೆನ್ನಲಾಗಿದೆ.

ಪರಿಣಾಮ ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗಪ್ಪ ನಾಯ್ಕ ಅವರು ಅರ್ಧ ದೇಹ ಗೋಡೆ ಮತ್ತು ಮಣ್ಣಿನಡಿ ಸಿಲುಕಿಕೊಂಡಿತ್ತು. ಜೊತೆಗೆ ಕೆಲಸ ಮಾಡುತ್ತಿದ್ದ ಅವರ ಮಗ ಹಾಗೂ ಸ್ಥಳೀಯರು ಸೇರಿ ನಾಗಪ್ಪ ನಾಯ್ಕ ಅವರನ್ನು ಮಣ್ಣಿನಿಂದ ಹೊರತೆಗೆದು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಸಾಗಿಸುವ ವೇಳೆಗೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.