ಸಿದ್ದಾಪುರ, ಏ. ೨೦: ಅಂಬೇಡ್ಕರ್ ಜಯಂತಿ ಅಂಗವಾಗಿ ಸಿದ್ದಾಪುರ ಸಮೀಪದ ಹೊಳಮಾಳದಲ್ಲಿ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಯಿತು.

ಅಂಬೇಡ್ಕರ್ ಯುವಕ ಸಂಘ ಹೊಳಮಾಳ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಕೊಂಡAಗೇರಿ ಅಧ್ಯಕ್ಷತೆಯಲ್ಲಿ ಹೊಳಮಾಳದ ರೋಜಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಸದಸ್ಯ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮುಖ್ಯ ಭಾಷಣ ಮಾಡಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಮಡಿಕೇರಿ ಹಾಗೂ ದಲಿತ ಮುಖಂಡರಾದ ಮಹದೇವ್, ಜಾನಕಿ ಪ್ರಮುಖರಾದ ಬಶೀರ್ ಅಹಮದ್, ಅಬು ಹೊದವಾಡ, ಯೂಸುಫ್ ಹುಂಡಿ, ರೋಶನ್ ಗೋಣಿಕೊಪ್ಪಲು, ಅಂದ್ರು ಹೊಳಮಾಳ ಮತ್ತಿತರರು ಇದ್ದರು. ಇಬ್ರಾಹಿಂ ಗೋಣಿಕೊಪ್ಪಲು ಸ್ವಾಗತಿಸಿ, ಫೈಸಲ್ ಪಾಲಿಬೆಟ್ಟ ವಂದಿಸಿದರು.