ಸಿದ್ದಾಪುರ, ಏ. ೨೦: ವಿವಾಹ ಸಮಾರಂಭಕ್ಕೆ ತೆರಳಿದ್ದ ಜಿಲ್ಲೆಯ ಏಳು ಮಂದಿ ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇನ್ನೂ ಈರ್ವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಪಾಲಿಬೆಟ್ಟದ ಶಾಸ್ತಿçನಗರದ ನಿವಾಸಿ ಪಿಲಿಫ್ ಎಂಬವರ ಪುತ್ರ ಜಾನಿ ಎಂಬವರ ವಿವಾಹ ಮಹೋತ್ಸವ ಹುಣಸೂರಿನಲ್ಲಿ ಏರ್ಪಾಡಾಗಿತ್ತು. ಈ ಸಮಾರಂಭಕ್ಕೆ ಶಾಸ್ತಿçನಗರದ ಒಂಭತ್ತು ಮಂದಿ ಮಹೀಂದ್ರ ಬೊಲೆರೋ ವಾಹನದಲ್ಲಿ ತೆರಳಿದ್ದರು. ವಿವಾಹ ಕಾರ್ಯ ಮುಗಿಸಿ ಪಾಲಿಬೆಟ್ಟಕ್ಕೆ ಹಿಂತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಕಲ್ಲಹಳ್ಳಿ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ವಾಹನದ ಮುಖಭಾಗವೇ ಇಲ್ಲದಾಗಿದೆ. ವಾಹನ ಚಾಲಿಸುತ್ತಿದ್ದ ಚಾಲಕನಿಂದ ಹಿಡಿದು ಕುಳಿತಿದ್ದ ಒಂಭತ್ತು ಮಂದಿಯ ಪೈಕಿ ಆರು ಮಂದಿ ಕುಳಿತಲ್ಲಿಯೇ ಸಾವನ್ನಪ್ಪಿದ್ದಾರೆ. ವರನ ತಂದೆ ಪಿಲಿಫ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಈರ್ವರು ಮಹಿಳೆಯರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಬೆಟ್ಟ ಬಳಿಯ ಶಾಸ್ತಿçಹಳ್ಳಿ ನಿವಾಸಿ ಸಂತೋಷ್, ದಯಾನಂದ, ರಾಜೇಶ್, ಅನಿಲ್, ವಿನಿತ್, ಬಾಬು ಹಾಗೂ ಪಿಲಿಫ್ ಸಾವನ್ನಪ್ಪಿದ ದುರ್ದೈವಿಗಳು. ಪಿಲಿಫ್ ಅವರ ಪುತ್ರ ಜಾನಿ ಎಂಬವರ ವಿವಾಹ ಹುಣಸೂರಿನಲ್ಲಿ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ದಯಾನಂದ ಅವರ ಸಹೋದರ ಹರೀಶ್ ಎಂಬವರಿಗೆ ಸೇರಿದ ಬೊಲೆರೋ ವಾಹನದಲ್ಲಿ ಒಂಭತ್ತು ಮಂದಿ ತೆರಳಿದ್ದರು. ಮದುವೆ ಕಾರ್ಯ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.
ಬಸ್ ಚಾಲಕನಾಗಿದ್ದ ಸಂತೋಷ್ ವಾಹನ ಚಲಾಯಿ ಸುತ್ತಿದ್ದರು. ಕಲ್ಲಹಳ್ಳಿ ಬಳಿ ತಲಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ವೇಗದಲ್ಲಿದ್ದು ದರಿಂದ ಡಿಕ್ಕಿಯಾದ ರಭಸಕ್ಕೆ ವಾಹನದ ಅರ್ಧ ಭಾಗ ಪುಡಿ ಪುಡಿಯಾಗಿದೆ. ಸ್ಥಳದಲ್ಲೇ ಆರು ಮಂದಿ ಕುಳಿತಲ್ಲಿಯೇ ಹೆಣವಾಗಿದ್ದಾರೆ. ಪಿಲಿಫ್ ಸೇರಿದಂತೆ ವಾಹನದಲ್ಲಿದ್ದ ಈರ್ವರು ಮಹಿಳೆಯರನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವರನ ತಂದೆ ಪಿಲಿಫ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ವಿನಿತ್‌ಗೆ ಮದುವೆ ಇತ್ತು
ಅವಘಡದಲ್ಲಿ ದರ್ಮರಣ ಹೊಂದಿರುವ ವಿನಿತ್ ಅಮ್ಮತ್ತಿಯ ಖಾಸಗಿ ಶಾಲೆಯ ಬಸ್ ಚಾಲಕನಾಗಿದ್ದ. ಈತ ಗ್ರಾ.ಪಂ. ಸದಸ್ಯೆ ಲೀಲಾವತಿ ಅವರ ಪುತ್ರನಾಗಿದ್ದು ಈತನಿಗೆ ಮದುವೆ ನಿಶ್ಚಯವಾಗಿತ್ತು. ಇದೇ ತಾ. ೨೩ರಂದು ಆತನ ಮದುವೆ ನಡೆಯಬೇಕಿತ್ತು. ದುರ್ವಿಧಿ, ಕೇವಲ ಮೂರು ದಿನಗಳ ಅಂತರದಲ್ಲಿ ವಿಧಿವಶವಾಗಿದ್ದಾನೆ.
ನಿರ್ಗತಿಕ ಸಂತೋಷ್
ವಾಹನ ಚಾಲಿಸುತ್ತಿದ್ದ ಸಂತೋಷ್ ಖಾಸಗಿ ಬಸ್‌ನಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿದ್ದ ಈತ ಪೈಸಾರಿ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ಹಾಕಿ ನಿವೇಶನಕ್ಕಾಗಿ ಅಂಗಲಾಚಿಕೊAಡಿದ್ದ. ಮೊನ್ನೆ ಪಾಲಿಬೆಟ್ಟದಲ್ಲಿ ನಡೆದ ನಿವೇಶನ ರಹಿತರ ಹೋರಾಟದಲ್ಲಿ ಪಾಲ್ಗೊಂಡಿದ್ದ. ಇಂದಿನ ಅವಘಡದಲ್ಲಿ ಅಸುನೀಗಿದ್ದು, ಪತ್ನಿ ಹಾಗೂ ಈರ್ವರು ಪುಟಾಣಿ ಮಕ್ಕಳನ್ನು ಅಗಲಿದ್ದಾನೆ.
ಮತ್ತೋರ್ವ ದುರ್ದೈವಿ ಬಾಬು ಪಾಲಿಬೆಟ್ಟ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ರಾಜೇಶ್ ಹಾಗೂ ಅನಿಲ್ (ಮೊದಲ ಪುಟದಿಂದ) ಕೂಲಿ ಕೆಲಸ ಮಾಡಿಕೊಂಡವರಾಗಿದ್ದಾರೆ.
ಅಚಾತುರ್ಯದಿAದ ಸಂಭವಿ ಸಿದ ಅವಘಡದಲ್ಲಿ ಒಂದೇ ಗ್ರಾಮದ ಏಳು ಮಂದಿ ಇಹಲೋಕ ತ್ಯಜಿಸಿರುವುದರಿಂದ ಗ್ರಾಮದಲ್ಲಿ
ಶೋಕ ಮಡುಗಟ್ಟಿದೆ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ ವರದಿ : ವಾಸು ಆಚಾರ್ಯ.