ಕುಶಾಲನಗರ, ಏ. ೨೦: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಶ್ರೀ ರಾಮ ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ೨೨ನೇ ವರ್ಷದ ರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಸೀತಾ ಕಲ್ಯಾಣ ಪೂಜಾ ಕಾರ್ಯಕ್ರಮ ನಡೆಯಿತು.

ರಾಮೋತ್ಸವ ಅಂಗವಾಗಿ ತಾ. ೧೦ ರಿಂದ ೨೦ ರವೆರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಕುಶಾಲನಗರ ರಥಬೀದಿಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸೀತಾ ಕಲ್ಯಾಣ ನಂತರ ಮಹಿಳೆಯರಿಂದ ಭಜನೆ, ಕೀರ್ತನೆ ಬಳಿಕ ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಉಪಾಧ್ಯಕ್ಷ ಸುಬ್ಬುರಾಮ್, ಕಾರ್ಯದರ್ಶಿ ಅನಿಲ್ ಶೇಷಾದ್ರಿ, ಖಜಾಂಚಿ ಶ್ರೀದೇವಿ, ಶ್ರೀರಾಮ ಸೇವಾ ಸಮಿತಿಯ ಕೆ.ಎಸ್. ಭಟ್ ಮತ್ತು ಪ್ರಮುಖರಾದ ನಾರಾಯಣ್, ಮೋಹನ್ ಕುಮಾರ್, ವಿಜಯೇಂದ್ರ, ರಜಿನಿ ಪ್ರದೀಪ್, ರಮಾ ವಿಜಯೇಂದ್ರ, ಸತೀಶ್, ಹರ್ಷ ಮತ್ತಿತರರು ಇದ್ದರು.