ಚೆಟ್ಟಳ್ಳಿ, ಏ. ೨೦: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ತಾ. ೧೫ ರಂದು ನಡೆದ ಪಟ್ಟಣಿ ಹಬ್ಬದಂದು ಊರಿನವರು ದೇವಾಲಯದ ತಕ್ಕಮುಖ್ಯಸ್ಥರಾದ ಮುಳ್ಳಂಡ ಐನ್‌ಮನೆಯಿಂದ ದೇವ ಭಂಡಾರವನ್ನು ಎತ್ತ್ಪೋರ್ ದುಡಿಕೊಟ್ಟ್ ಹಾಡಿನೊಂದಿಗೆ ಭಗವತಿ ದೇವಾಲಯಕ್ಕೆ ತರಲಾಯಿತು. ದೇವ ಭಂಡಾರವನ್ನು ದೇವರನೆಲೆಯಲ್ಲಿ ಒಪ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಬೊಳಕಾಟ್ ನೆರವೇರಿಸಲಾಯಿತು. ಊರಿನವರು, ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ತೀರ್ಥ ಪ್ರಸಾದ ಪಡೆದರು.

ತಾ. ೧೬ ರಂದು ನಡೆದ ದೊಡ್ದ ಹಬ್ಬದಂದು ದೇವ ಭಂಡಾರವನ್ನು ದೇವಾಲಯಕ್ಕೆ ಒಪ್ಪಿಸಿ ದೇವಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ದೇವರ ನೆಲೆಯಲ್ಲಿ ಕೋವಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ದೇವರ ಹಬ್ಬದ ಕಟ್ಟು ಮುರಿಯಲಾಯಿತು. ಬೊಳಕ್ ಮರವನ್ನು ತೆಗೆದು ದೇವರ ಸನ್ನಿದಿಯಲ್ಲಿ ಇಡಲಾಯಿತು.