ವೀರಾಜಪೇಟೆ, ಏ. ೨೦: ವಿಶ್ವದ ಉನ್ನತಿಗೆ ಶಾಂತಿಯ ಮಂತ್ರಪಟಿಸಿ ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮ ಜೀವನದತ್ತ ಸಾಗಿದ ಮಹಾನ್ ಜ್ಞಾನಿಯಾಗಿದ್ದ ಮಹಾವೀರರ ಸಿದ್ಧಾಂತಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕು ದÀಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ಆರ್. ಯೋಗಾನಂದ ಹೇಳಿದರು.
ವೀರಾಜಪೇಟೆ ನಗರದ ಜೈನರಬೀದಿಯ ಜೈನ್ ಮಿಲನ್ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಬಸವೇಶ್ವರ ದೇಗುಲದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ೨೬೨೧ನೇ ಕಲ್ಯಾಣ ಜನ್ಮ ಮಹೋತ್ಸವ ಆಚರಣೆ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ಆರ್. ಯೋಗಾನಂದ ತನ್ನ ೩೨ನೇ ವಯಸ್ಸಿನಲ್ಲಿ ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಿದವರು ಮಹಾವೀರರು. ಜೀವನ ಶೈಲಿಗೆ ಹೊಸ ದಿಕ್ಕು ತೋರಿಸಿದರು. ನಾವು ಗಳು ಮೋಹಗಳ ಹಿಂದೆ ಸಾಗುತ್ತಾ ಮನಸ್ಸಿನ ಶಾಂತಿ ಕಳೆದುಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಹಿಂಸೆ ಯನ್ನು ಸಾರುವ ಅನಿವಾರ್ಯತೆ ಇಂದು ಸಮಾಜಕ್ಕೆ ಬೇಕಿದೆ. ಯಾವ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಪರರನ್ನು ಕಷ್ಟಕ್ಕೆ ದೂಡದೆ ಬದುಕು ಸಾಗಿಸುತ್ತಾನೂ ಆತ ಉತ್ತಮ ಸಮಾಜ ರೂಪಿಸಬಲ್ಲ. ಮೋಹದ ಮಾರ್ಗವನ್ನು ಬಿಟ್ಟು ದೊರೆತಿರುವ ಸುಖದಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ವಿ.ಪಿ. ಸತೀಶ್ ಉಪನ್ಯಾಸ ನೀಡಿದರು. ಮಹಾವೀರ ತೀರ್ಥಂಕರರ ಭಾವಚಿತ್ರಕ್ಕೆ ಮುಖ್ಯ ಅತಿಥಿಗಳಿಂದ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಬಸವೇಶ್ವರ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಜಿ. ಕಾಮತ್, ಉಪ ತಹಶೀಲ್ದಾರ್ ಹೆಚ್. ಪೊನ್ನು, ಜೈನ್ ಮಿಲನ್ ಸಂಸ್ಥೆಯ ವೀರಾಜಪೇಟೆ ಘಟಕದ ಅಧ್ಯಕ್ಷ ಜೆ.ಎನ್. ಪುಷ್ಪರಾಜ್ ಉಪಸ್ಥಿತರಿ ದ್ದರು. ರೇಖಾ ಚಂದ್ರಪ್ರಸಾದ್ ಪ್ರಾರ್ಥಿಸಿ, ವಾಣಿ ಪುಷ್ಪರಾಜ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ ನಿರೂಪಿಸಿ, ಪದ್ಮಲತಾ ಅರುಣ್ ಕುಮಾರ್ ವಂದಿಸಿದರು.