ಪೊನ್ನAಪೇಟೆ, ಏ. ೨೦: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ಒಕ್ಕಲಿಗರ ಸುಗ್ಗಿ ಕ್ರೀಡೋತ್ಸವ ಸಮಾರೋಪಗೊಂಡಿತು.
ಐಪಿಎಲ್ ಮಾದರಿಯ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಹಾತೂರು ತಂಡ ಕೋತೂರು ಡ್ರೀಮ್ ಹಿಟ್ಟರ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು. ಗೆಲುವಿಗಾಗಿ ರೋಚಕ ಹೋರಾಟ ನೀಡಿದ ಕೋತೂರು ಡ್ರೀಮ್ ಹಿಟ್ಟರ್ಸ್ ತಂಡ ಕೊನೆಯ ಹಂತದಲ್ಲಿ ಎಡವಿದ ಪರಿಣಾಮ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕೋಟೆಕೊಪ್ಪ ಎ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಶಿಸ್ತು ಬದ್ದ ಆಟದ ಮೂಲಕ ಜನ ಮೆಚ್ಚುಗೆ ಪಡೆದ ಒಂಟಿ ಅಂಗಡಿ ಉತ್ತಮ ತಂಡ ಪ್ರಶಸ್ತಿ ಪಡೆದುಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹಾತೂರು ತಂಡದ ಚಿದು, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೋಟೆಕೊಪ್ಪ ತಂಡದ ಭರತ್ ಪಡೆದುಕೊಂಡರು. ಕೋತೂರು ಡ್ರೀಮ್ ಹಿಟ್ಟರ್ಸ್ ತಂಡದ ಜೀವನ್ ಬೆಸ್ಟ್ ಬ್ಯಾಟ್ಸ್ ಮನ್, ಚೇತನ್ ಬೆಸ್ಟ್ ಬೌಲರ್, ನಿತಿನ್ ಗೇಮ್ ಚೇಂಜರ್ ಪ್ರಶಸ್ತಿ ಪಡೆದು ಕೊಂಡರು.
ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಕೋತೂರು ಮಾರಮ್ಮ ಗ್ರೂಪ್ ಪ್ರಥಮ ಸ್ಥಾನ, ಕೈಕೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ಹಗ್ಗಜಗ್ಗಾಟದಲ್ಲಿ ಕೋತೂರು ಮಾರಮ್ಮ ಗ್ರೂಪ್ ಪ್ರಥಮ, ಒಂಟಿ ಅಂಗಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಆದರ್ಶ ದಂಪತಿ ಸ್ಪರ್ಧೆಯಲ್ಲಿ ಚನ್ನಂಗಿಯ ಶ್ರುತಿ ಆದರ್ಶ್ ದಂಪತಿ ಪ್ರಥಮ, ಕೋಟೆಕೊಪ್ಪದ ಅನುಷಾ ಪ್ರಸನ್ನ ದಂಪತಿ ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರಿಗಾಗಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಡಿ.ಪಿ.ರೇಷ್ಮ (ಪ್ರ), ವಿ.ಡಿ. ದೀಪು (ದ್ವಿ), ಶೂಟಿಂಗ್ ಸ್ಪರ್ಧೆಯಲ್ಲಿ ಕೊಟ್ಟಗೇರಿಯ ವಿ.ಆರ್. ಪ್ರಕಾಶ್ (ಪ್ರ), ತಿತಿಮತಿಯ ಸತೀಶ್ (ದ್ವಿ), ಮಕ್ಕಳಿಗಾಗಿ ನಡೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ೨ ರಿಂದ ೪ ವರ್ಷ ವಿಭಾಗದಲ್ಲಿ ಕಣ್ಣಂಗಾಲದ ಜಾಗ್ವಿ (ಪ್ರ), ಕೈಕೇರಿಯ ಅನ್ವಿಕ ಭರತ್ (ದ್ವಿ), ೫ ರಿಂದ ೭ ವರ್ಷ ವಿಭಾಗದಲ್ಲಿ ಕೈಕೇರಿ ಪುಣ್ಯ (ಪ್ರ), ಕೋಟೆಕೊಪ್ಪ ಭವಿತ್ (ದ್ವಿ), ಸೂಪರ್ ಮಿನಿಟ್ ಸ್ಪರ್ಧೆ ೮ ರಿಂದ ೧೨ ವರ್ಷ ವಿಭಾಗದಲ್ಲಿ ಪ್ರೀತಮ್ (ಪ್ರ), ನಿರೀಕ್ಷ (ದ್ವಿ), ೧೩ ರಿಂದ ೧೫ ವರ್ಷ ವಿಭಾಗದಲ್ಲಿ ಕೊಟ್ಟಗೇರಿ ಕರ್ಣ ಪ್ರಥಮ, ಕೈಕೇರಿ ನಿಖಿತ ದ್ವಿತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಹಾಗೂ ನಿವೃತ್ತಿ ಹೊಂದಿದ ಒಕ್ಕಲಿಗ ಸಮುದಾಯದ ಸದಸ್ಯರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸುವ ಮೂಲಕ ೫ ಚಿನ್ನದ ಪದಕಗಳನ್ನು ಪಡೆದುಕೊಂಡ ಕೋಟೆಕೊಪ್ಪದ ವಿ.ಆರ್. ಶಬರೀಶ್, ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಆಂಚನ ದಿನೇಶ್ ಹಾಗೂ ಕೃತಿಕ ಅವರಿಗೆ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಲೋಹಿತ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ದಾನಿಗಳಾದ ಬಿ.ಆರ್.ಚಂದ್ರೇಶ್, ಕೆ. ಆರ್. ಸತೀಶ್, ವಿ.ವಸಂತ, ವಿ.ಎನ್. ದಿನೇಶ್, ವಿ.ಜಿ.ಗೋಪಾಲಕೃಷ್ಣ, ವಿ.ಸಿ.ಸುನಿತ, ವಿ.ಇ.ರಘು, ವಿ.ಕೆ. ಉದಯ್, ಲೀಲಾ ಪ್ರಭು, ವಿ.ಜೆ.ದಿನೇಶ್, ಆನಂದ್, ವಿ.ವೈ.ಸಚಿನ್, ವಿ.ಇ.ಪ್ರವೀಣ್, ವಿ.ಎಲ್.ದೀಶ, ವಿಶಾಲಾಕ್ಷಿ ವೆಂಕಟೇಶ್, ವೇದಿಕೆಯ ಉಪಾಧ್ಯಕ್ಷ ವಿ. ಪಿ. ಡಾಲು, ಕಾರ್ಯದರ್ಶಿ ವಿ.ಎನ್. ಮಂಜುನಾಥ್, ಖಜಾಂಚಿ ಕೆ. ಬಿ. ಪವನ್ ಕುಮಾರ್, ಆಡಳಿತ ಮಂಡಳಿ ಪದಾಧಿಕಾರಿಗಳು, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳ ವಿವಿಧ ಗ್ರಾಮಗಳ ಒಕ್ಕಲಿಗರ ವೇದಿಕೆಯ ಅಧ್ಯಕ್ಷರು, ಸದಸ್ಯರು ಹಾಜರಿದ್ದರು. ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆಯನ್ನು ಚನ್ನನಾಯಕ ಹಾಗೂ ಪ್ರಮೋದ್ ನೀಡಿದರು.