*ಗೋಣಿಕೊಪ್ಪ, ಏ. ೧೯: ಫ್ರಾನ್ಸ್ ದೇಶದಲ್ಲಿ ನಡೆಯಲಿರುವ ೧೯ನೇ ವಿಶ್ವ ‘ಜಿಮ್ನಾಸಿಯಾಡ್ ಇಂಟರ್ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಫೆಡರೇಷನ್ನಲ್ಲಿ’ ಭಾರತದಿಂದ ಭಾಗವಹಿಸಲು ಕೊಡಗಿನ ತಿತಿಮತಿ, ನೊಖ್ಯ ಗ್ರಾಮದ ಚೆಪುö್ಪಡೀರ ಲತೀಶ ಮಂದಣ್ಣ ಆಯ್ಕೆಯಾಗಿದ್ದಾರೆ.
೨೦೨೨ನೇ ಸಾಲಿನಲ್ಲಿ ಮೇ ತಿಂಗಳಿನ ೧೪ ರಿಂದ ೨೨ ರವರೆಗೆ ಫ್ರಾನ್ಸ್ ದೇಶದ ನಾರ್ಮಂಡಿಯಲ್ಲಿ ವಿಶ್ವ ಶಾಲೆಗಳು ಒಲಂಪಿಕ್ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಲತೀಶ ಮಂದಣ್ಣ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ತಿತಿಮತಿ ಗ್ರಾಮದ ಚೆಪುö್ಪಡೀರ ತರುಣ್ ಹಾಗೂ ಶ್ವೇತ ದಂಪತಿ ಪುತ್ರಿಯಾಗಿರುವ ಲತೀಶ ಮಂದಣ್ಣ ಇತ್ತೀಚೆಗೆ ಪುಣೆಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಿದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಇವರು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.