ಕೂಡಿಗೆ: ತಲಕಾವೇರಿಯಲ್ಲಿ ಚಾಲನೆಗೊಂಡ ಜೆಡಿಎಸ್ನ ಜನತಾ ಜಲಧಾರೆ ರಥವು ಹಾರಂಗಿಯ ಅಣೆಕಟ್ಟೆಯಿಂದ ಜಲ ಸಂಗ್ರಹ ಮಾಡುವ ಮೂಲಕ ನದಿಗೆ ಪೂಜೆ ಸಲ್ಲಿಸಿ ನಂತರ ರಥಕ್ಕೆ ನೀರು ತುಂಬಿಸಿ ಮುಂದೆ ಸಾಗಿತು.
ಜಿಲ್ಲಾ ಜನತಾ ದಳದ ಅಧ್ಯಕ್ಷ ಕೆ.ಎಂ. ಗಣೇಶ್, ಜೆಡಿಎಸ್ ಪ್ರಮುಖರಾದ ನಾಪಂಡ ಮುತ್ತಪ್ಪ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ.ರವಿ, ಪ್ರಮುಖರಾದ ಇಸಾಖ್ ಖಾನ್, ರಾಮಚಂದ್ರ, ಶರೀಫ್, ಶಿವದಾಸ್, ರುಬೀನ, ತ್ರಿನೇಶ್ ಸೇರಿದಂತೆ ತಾಲೂಕು ಮತ್ತು ಹೋಬಳಿ ವ್ಯಾಪ್ತಿಯ ವಿವಿಧ ಘಟಕ ಪದಾಧಿಕಾರಿಗಳು ಹಾಗೂ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ರಥವು ಹಾರಂಗಿಯಿAದ ಯಡವನಾಡು ಮಾರ್ಗವಾಗಿ ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ ತೆರಳಿತು.ಶನಿವಾರಸಂತೆ: ಕರ್ನಾಟಕದಾದ್ಯಂತ ಜೆ.ಡಿ.ಎಸ್. ವತಿಯಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥವು ಕೊಡಗಿನಾದ್ಯಂತ ಸಂಚರಿಸಿ ಶನಿವಾರಸಂತೆಗೆ ಆಗಮಿಸಿದ ಸಂದರ್ಭ ಜೆ.ಡಿ.ಎಸ್. ಮುಖಂಡರಾದ ಬಿ.ಎನ್. ಮುತ್ತೇಗೌಡ, ಎಂ.ಎ. ಆದಿಲ್ ಪಾಷ, ಡಿ.ಪಿ. ಬೋಜಪ್ಪ ಹಾಗೂ ಅವರೇದಾಳು ಪಾಪಣ್ಣ ಅವರು ರಥಕ್ಕೆ ಹೂವಿನ ಮಾಲೆ ಹಾಕುವುದರ ಮೂಲಕ ಸ್ವಾಗತಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಮುಖಂಡ ನಾಪಂಡ ಮುತ್ತಪ್ಪ, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಜೆ.ಡಿ.ಎಸ್. ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರಾಜ್ಯದ ಜನರ ಜೀವನಮಟ್ಟ ಸುಧಾರಿಸುವುದಲ್ಲದೇ ರಾಜ್ಯದ ರೈತ ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬದುಕುವಂತಾಗುತ್ತದೆ. ಪ್ರತಿಯೊಂದು ಗ್ರಾಮದ ರೈತರ ತೋಟ, ಹೊಲ, ಗದ್ದೆಗಳಿಗೆ ನೀರಾವರಿ ಸೌಲಭ್ಯ ದಕ್ಕುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಬಿ.ಎನ್. ಮತ್ತೇಗೌಡ, ಡಿ.ಪಿ. ಬೋಜಪ್ಪ, ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿದರು. ಪಾಪಣ್ಣ ಸ್ವಾಗತಿಸಿ, ವಂದಿಸಿದರು. ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಸಂದರ್ಭ ಪ್ರಮುಖರಾದ ಪಿ.ಡಿ. ರವಿಕುಮಾರ್, ಶಂಬಣ್ಣ, ಹಂಡ್ಲಿ ರಮೇಶ್, ವೀರೇಶ್, ಚಿಕ್ಕಣ್ಣ, ಕುಸುಮಾ ಸುಧಾಕರ್, ಮಹಿಳಾ ಅಧ್ಯಕ್ಷೆ ರುಭೀನಾ, ಮಹೇಂದ್ರ, ಆರ್.ಎಂ.ಸಿ. ಸದಸ್ಯರಾದ ವಜಯ, ರಾಮಚಂದ್ರ, ಹೂವಣ್ಣ, ಚಂದ್ರಕಾAತ್, ಮೊಹಸೀನ್, ಅಬ್ದುಲ್ ಶುಕೂರ್ ಮುಂತಾದ ಮುಖಂಡರು ಭಾಗಿಯಾಗಿದ್ದರು.ಸುಂಟಿಕೊಪ್ಪ: ಜನತಾ ಜಲಧಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದೆ ಎಂದು ರಾಜ್ಯ ಜೆಡಿಎಸ್ ಮುಖಂಡ ಎಂ.ಎA. ಶರೀಫ್ ಹೇಳಿದರು.
ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಜಾತ್ಯತೀತ ಜನತಾದಳದ ಜನತಾ ಜಲಧಾರೆಯ ೨ನೇ ದಿನದ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಮತ್ತೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. ಜನತಾ ಜಲಧಾರೆಯ ೨ನೇ ದಿನದ ಕುಶಾಲನಗರ ತಾಲೂಕು ಜಲಧಾರೆ ರಥಯಾತ್ರೆಗೆ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ಉಸ್ತುವಾರಿಯಲ್ಲಿ ಸುಂಟಿಕೊಪ್ಪ ಪಟ್ಟಣಕ್ಕೆ ಆಗಮಿಸಿದ್ದ ರಥಕ್ಕೆ ಜೆಡಿಎಸ್ ಕಾರ್ಯಕರ್ತರು ಸ್ವಾಗತ ಕೋರಿದರು.
ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಸಲುವಾಗಿ ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಇ. ಕರೀಂ ಹೇಳಿದರು.
ಈ ಸಂದರ್ಭ ಹಿರಿಯ ಮುಖಂಡರಾದ ನಾಪಂಡ ಮುತ್ತಪ್ಪ, ಜೆಡಿಎಸ್ ಕಾರ್ಯಕರ್ತರಾದ ಗ್ರಾ.ಪಂ. ಸದಸ್ಯ ಜೀನಾಸುದ್ದೀನ್, ಶಬೀರ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ಖಾನ್, ಸುಂಟಿಕೊಪ್ಪ ಜೆಡಿಎಸ್ ನಗರಾಧ್ಯಕ್ಷ ಕೆ.ಎಚ್. ಶರೀಫ್, ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಫೆಲಿಕ್ಸ್ ಡಿಸೋಜ, ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಹೆಚ್.ಇ. ಶರೀಫ್ ಹಾಗೂ ಕಾರ್ಯಕರ್ತರು ಇದ್ದರು.ಕೂಡಿಗೆ: ಕುಶಾಲನಗರ ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನತಾ ಜಲಧಾರೆಯ ರಥಕ್ಕೆ ತೀರ್ಥ ತುಂಬಿಸಲಾಯಿತು.
ತಲಕಾವೇರಿಯಲ್ಲಿ ಶಾಸಕ ಸಾರಾ ಮಹೇಶ್ ಹಾಗೂ ಪಿರಿಯಾಪಟ್ಟಣ ಶಾಸಕ ಕೆ. ಮಹಾದೇವ ಅವರ ನೇತೃತ್ವದಲ್ಲಿ ತೀರ್ಥ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಜನತಾ ಜಲಧಾರೆಯ ರಥ ಇಂದು ಕಣಿವೆ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮತ್ತು ಇತರರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿ ಹಳ್ಳಿಹಳ್ಳಿಗೂ ರಥ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಖಚಿತ ಎಂಬ ಸಂದೇಶವನ್ನು ಜೆಡಿಎಸ್ ಕಾರ್ಯಕರ್ತರು ಸಾರಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಅವರು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕನಸಾದ ಜನತಾ ಜಲಧಾರೆ ಕಾರ್ಯಕ್ರಮವು ಯಶಸ್ವಿಯಾಗಿ ಸಾಗುತ್ತಿದ್ದು, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸರ್ಕಾರ ರಚಿಸುವÀಲ್ಲಿ ಯಾವುದೇ ರೀತಿಯ ಸಂದೇಹವೂ ಇಲ್ಲ ಎಂದು ತಿಳಿಸಿದರು. ಈಗಾಗಲೇ ನೂತನವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂದಿನ ದಿನಗಳಲ್ಲಿ ನಾನು ನನ್ನ ಕ್ಷೇತ್ರದ ಜನತೆಗೆ ಜೆಡಿಎಸ್ ಪಕ್ಷದ ಉದ್ದೇಶಗಳು ಹಾಗೂ ಸಾಧನೆಗಳ ಬಗ್ಗೆ ಮನವರಿಕೆ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. ಇದೇ ಸಂದರ್ಭ ಕೊಡಗು ಜಿಲ್ಲೆಯ ಜೆಡಿಎಸ್ ಮುಖಂಡರುಗಳು, ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಸೋಮವಾರಪೇಟೆ: ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ನದಿ ನೀರಿನ ಸಮರ್ಪಕ ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸುವುದರೊಂದಿಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆಯು ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಮುಖಂಡರು ಬರಮಾಡಿಕೊಂಡರು.
ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಬಳಿಯಲ್ಲಿ ರಥವನ್ನು ಸ್ವಾಗತಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ನಂತರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕರ್ನಾಟಕದ ಅಭಿವೃದ್ಧಿಯ ಹರಿಕಾರ ಕುಮಾರಸ್ವಾಮಿ- ಮತ್ತೊಮ್ಮೆ ರಾಜ್ಯಕ್ಕೆ ಕುಮಾರಣ್ಣ ಎಂಬಿತ್ಯಾದಿ ಘೋಷಣೆ ಗಳನ್ನು ಮೊಳಗಿಸಿದ ಕಾರ್ಯಕರ್ತರು, ಜೆಡಿಎಸ್ನ ಕುಮಾರಸ್ವಾಮಿ ಅವರಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು. ನಂತರ ಇಲ್ಲಿನ ಜೇಸೀ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪಕ್ಷದ ಮುಖಂಡರುಗಳು, ರಥಯಾತ್ರೆಯ ಉದ್ದೇಶದ ಬಗ್ಗೆ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಮುಖಂಡರಾದ ನಾಪಂಡ ಮುತ್ತಪ್ಪ, ಅಲ್ಪಸಂಖ್ಯಾತ ಘಟದ ಜಿಲ್ಲಾಧ್ಯಕ್ಷ ಇಸಾಕ್ಖಾನ್, ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್, ಮುಖಂಡರಾದ ಸ್ವಾಗತ್ ಗೌಡ, ಪ್ರವೀಣ್, ತ್ರಿಶೂಲ್, ಆದರ್ಶ ತಮ್ಮಯ್ಯ, ಎಂ.ಎ. ರುಬೀನಾ, ಪುಷ್ಪ, ರವಿ, ಜಯಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗುಡ್ಡೆಹೊಸೂರು: ತಲಕಾವೇರಿಯಿಂದ ಪ್ರಾರಂಭವಾದ ಜನತಾ ಜಲಧಾರೆ ರಥವು ಗುಡ್ಡೆಹೊಸೂರಿಗೆ ಆಗಮಿಸಿದ ಸಂದರ್ಭ ಇಲ್ಲಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹಾಜರಿದ್ದು, ಸ್ವಾಗತಿಸಿದರು.
ಈ ಸಂದರ್ಭ ಪಕ್ಷದ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ ಸ್ವಾಗತಿಸಿದರು. ಪಕ್ಷದ ಮುಖಂಡ ನಾಪಂಡ ಮುತ್ತಪ್ಪ ಮತ್ತು ವಿವಿಧ ಘಟಕದ ಪ್ರಮುಖರು ಈ ಸಂದರ್ಭ ಹಾಜರಿದ್ದರು. ಅಲ್ಲದೆ ಗ್ರಾಮ ಪಂಚಾಯ್ತಿ ಸದಸ್ಯ ಶಿವಪ್ಪ, ಭರತ್, ಎ.ಟಿ. ರಾಜ ಮುಂತಾದವರು ಹಾಜರಿದ್ದರು.