ನಾಪೋಕ್ಲು, ಏ. ೧೭: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತ್ತು.

ಕರಿಚಾಮುAಡಿ, ಮುಂಜೌAಡಿ, ಚೌಂಡಿ, ಅಯ್ಯಪ್ಪ ಮತ್ತಿತ್ತರ ದೇವತೆಗಳು ಮೈಮೇಲೆ ಬಂದು ಜೋಡಿ ಕತ್ತಿಯಿಂದ ತಲೆಗೆ ಕಡಿದುಕೊಳ್ಳುವ ದೃಶ್ಯ ಭಯಭೀತರನ್ನಾಗಿ ಮಾಡುತ್ತದೆ, ತಲೆಗೆ ಗಾಯವಾಗಿ ರಕ್ತ ಚಿಮ್ಮುತ್ತಿರುತ್ತದೆ. ನಂತರ ದೇವಾಲಯದಲ್ಲಿ ತಲೆಗೆ ದೇವರ ಎಣ್ಣೆಯನ್ನು ಹಾಕಿದರೆ, ಈ ಗಾಯವು ೨-೩ ದಿನದಲ್ಲಿ ಮಾಯವಾಗುವುದೆಂದು ಪ್ರತೀತಿ ಇದೆ.

ಮೊದಲ ದಿನ ಕೊಡೆಯನ್ನು ದೇವಾಲಯದ ಪ್ರದಕ್ಷಿಣೆ ಬರಲಾಯಿತು. ಎರಡನೇ ದಿನ ಕುರುಂದ ಹಬ್ಬ ಈ ಹಬ್ಬದಲ್ಲಿ ತಲೆಗೆ ತೆಂಗಿನಕಾಯಿಯನ್ನು ಕುಟ್ಟಿ ಹೊಡೆಯುವುದು ಭಕ್ತರನ್ನ ಮೂಕ ಪ್ರೇಕ್ಷಕರನ್ನಾಗಿ ಮಾಡಿತು. ನಂತರ ದೇವರ ಬಲಿ ಕಾರ್ಯನಡೆದು ಹಬ್ಬವು ಸಂಪನ್ನಗೊAಡಿತ್ತು.