ಶಾಸಕ ಬೋಪಯ್ಯ
*ಗೋಣಿಕೊಪ್ಪಲು, ಏ. ೧೭: ಮನಸ್ಸಿಗೆ ಶಾಂತಿ, ನೆಮ್ಮದಿ ನೆಲೆಸಲು ದೇವಾಲಯಗಳ ದರ್ಶನದಿಂದ ಸಾಧ್ಯವಿದೆ. ಈ ಉದ್ದೇಶದಿಂದ ದೇವಸ್ಥಾನಗಳ ಅಭಿವೃದ್ಧ್ದಿಗೆ ಕ್ಷೇತ್ರವಾರು ಹೆಚ್ಚಿನ ಅನುದಾನವನ್ನು ನೀಡುವ ಚಿಂತನೆ ಹೊಂದಲಾಗಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದರು.
ಹುದಿಕೇರಿ ಮಹಾದೇವರ ದೇವಸ್ಥಾನಕ್ಕೆ ರೂ. ೫ ಲಕ್ಷ ಅನುದಾನದಲ್ಲಿ ಡಾಂಬರೀಕರಣ ಗೊಂಡ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು. ದೇವಾಲಯಗಳು ಮನುಷ್ಯನಿಗೆ ನೆಮ್ಮದಿಯನ್ನು ಕಲ್ಪಿಸುವ ತಾಣವಾಗಿದೆ. ಪ್ರಾರ್ಥನೆಯಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ದೇವಾಲಯಗಳು ಆನಂದಮಯದ ಕ್ಷೇತ್ರಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭ ಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಪೊಡಮಾಡ ಧಮಯಂತಿ, ಸದಸ್ಯರುಗಳಾದ ಮಂಡಚAಡ ಪೊನ್ನಪ್ಪ, ಚೇಂದಿರ ತಂಗಮ್ಮ, ಮೈನಾ, ಕಾವೇರಿ, ಕೆ. ಗಣಪತಿ, ವಾಸುಬಿದ್ದಪ್ಪ, ಸುನೀಲ್, ರೇವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದ್, ದೇವಸ್ಥಾನದ ಅಧ್ಯಕ್ಷ ಚಂಗುಲAಡ ಕರುಂಬಯ್ಯ, ಪ್ರಮುಖರಾದ ಐಪುಮಾಡ ರೋನಿ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.