ಕಡಂಗ, ಏ. ೧೭: ಸ್ಥಳೀಯ ಎಸ್‌ಎಸ್‌ಎಫ್, ಎಸ್‌ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಕಡಂಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ರಂಜಾನ್ ತಿಂಗಳ ಪ್ರಯುಕ್ತ ಕಡಂಗದಲ್ಲಿರುವ ಕಡುಬಡವ ಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಕಡಂಗ ಶಾಖೆಯ ಅಧ್ಯಕ್ಷ ಸುಲೈಮಾನ್ ಸಿ.ಎಂ. ವಹಿಸಿದ್ದÀರು. ಬದ್ರಿಯಾ ಮಸೀದಿಯ ಖತೀಬ್ ರಿಯಾಜ್ ಫಾಳಿಲಿ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.

ಈ ಸಂದರ್ಭ ದಾನಿ ಹ್ಯಾರಿಸ್ ಹಾಜಿ, ಎಸ್‌ವೈಎಸ್ ಕೋಶಾಧಿಕಾರಿ ಸಿ.ಎ. ರಜಾಕ್, ಪ್ರಧಾನ ಕಾರ್ಯದರ್ಶಿ ಅಶ್ರಫ್, ಸಹ ಕಾರ್ಯದರ್ಶಿ ರಶೀದ್ ಐಬಿಎಂ, ಎಸ್‌ಎಸ್‌ಎಫ್ ಪದಾಧಿಕಾರಿಗಳಾದ ನೌಶಾದ್, ಶಮೀರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು ಹಾಜರಿದ್ದರು.