ಕುಶಾಲನಗರ, ಏ. ೧೭: ಕುಶಾಲನಗರ ಗಣಪತಿ ದೇವಾಲಯಕ್ಕೆ ದಾನಿಗಳು ದೇವರ ಬೆಳ್ಳಿಯ ದ್ವಿಮುಖ ಕವಚವನ್ನು ಅರ್ಪಿಸಿದ್ದಾರೆ.

ಸ್ಥಳೀಯ ವಕೀಲ ಸುರೇಶ್ ಬಬ್ಲಿ ಮತ್ತು ಉದ್ಯಮಿ ಪ್ರೇಮಚಂದ್ ಕುಟುಂಬ ಸದಸ್ಯರು ಬೆಳ್ಳಿ ಕವಚವನ್ನು ಕೊಡುಗೆಯಾಗಿ ನೀಡಿದ್ದಾರೆ.

ಪೂಜಾ ವಿಧಿ ವಿಧಾನಗಳೊಂದಿಗೆ ಅರ್ಪಿಸಿದ ಸಂದರ್ಭ ದೇವಾಲಯದ ಮುಖ್ಯ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ಮತ್ತು ಅರ್ಚಕರು ಇದ್ದರು.