ಚೆಯ್ಯಂಡಾಣೆ, ಏ. ೧೭: ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮದ ಭಗವತಿ ದೇವರ ವಾರ್ಷಿಕ ಉತ್ಸವವು ತಾ. ೨೧ರ ತನಕ ನಡೆಯಲಿದೆ. ತಾ. ೧೭ರ ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ತರುವ ಮೂಲಕ ಚಾಲನೆ ನೀಡಲಾಗಿದೆ.
ತಾ. ೧೮ ರಂದು (ಇಂದು) ಚಂಡಿಕಾ ಹೋಮ, ೧೯ ರಂದು ದೊಡ್ಡ ಹಬ್ಬ, ಅಲಂಕಾರ ಪೂಜೆ, ದೇವರ ಅವಭೃತ ಸ್ನಾನ, ನೃತ್ಯ ಬಲಿ ನಡೆಯಲಿದ್ದು, ತಾ. ೨೦ ರಂದು ಸಂಜೆ ಕ್ಷೇತ್ರ ಪಾಲ ತೆರೆ, ತಾ. ೨೧ ರಂದು ವಿಷ್ಣುಮೂರ್ತಿ ಕೋಲ ನಡೆಯಲಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.