ಗೋಣಿಕೊಪ್ಪಲು, ಏ. ೧೭: ದ.ಕೊಡಗಿನ ಗಡಿ ಭಾಗವಾದ ಕುಟ್ಟ ಪಟ್ಟಣದಲ್ಲಿ ತಾ. ೧೮ ರಂದು (ಇಂದು) ಹಿಂದೂ ಸಮಾಜೋತ್ಸವ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ವೇದಿಕೆ ಸಜ್ಜುಗೊಂಡಿದ್ದು, ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಯೋಜಕರಾದ ಪಂದ್ಯAಡ ಹರೀಶ್ ಹಾಗೂ ಅಮ್ಮತ್ತಿರ ಸುರೇಶ್ ತಿಳಿಸಿದ್ದಾರೆ.
ಬೆಳಿಗ್ಗೆ ೧೦.೩೦ಕ್ಕೆ ಸರಿಯಾಗಿ ಸಮೀಪದ ಕೊಡವ ಸಮಾಜದ ಆವರಣದಿಂದ ಮೆರವಣಿಗೆ ಹೊರಡಲಿದ್ದು, ಚಂಡೆ ವಾದ್ಯ ಹಾಗೂ ಕೊಡವ ವಾಲಗ ಮೆರಗು ನೀಡಲಿದೆ. ಸಿಂಕೋನ ಬಳಿಯವರೆಗೆ ಶೋಭ ಯಾತ್ರೆ ಸಾಗಲಿದ್ದು, ನಂತರ ಬಸ್ ನಿಲ್ದಾಣದಲ್ಲಿ ಸಮಾಗಮಗೊಳ್ಳಲಿದೆ.
ವಿಶ್ವ ಹಿಂದೂ ಪರಿಷತ್ ಭಜರಂಗದಳ ದುರ್ಗಾವಾಹಿನಿ ಮಾತೃಶಕ್ತಿ ಪೊನ್ನಂಪೇಟೆ ಪ್ರಖಂಡ ಇವರ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷದ್ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯAಡ ಹರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ತತ್ವರೂಪನಂದ ಸ್ವಾಮೀಜಿ, ಕುಟ್ಟ ವಿ.ಎಸ್.ಎಸ್.ಎನ್. ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ ಆಗಮಿಸಲಿದ್ದಾರೆ. ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಭಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಘು ಜಿ. ಸಕಲೇಶಪುರ ಇವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ.
ಸೂಕ್ತ ಭದ್ರತೆ: ಕುಟ್ಟ ಗ್ರಾಮದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಪೊಲೀಸರು ಸೂಕ್ತ ಭದ್ರತೆ ಕೈಗೊಂಡಿದ್ದಾರೆ.
ಎರಡು ಡಿವೈಎಸ್ಪಿ ಮುಂದಾಳತ್ವದಲ್ಲಿ ಆರು ಸರ್ಕಲ್ ಇನ್ಸ್ಪೆಕ್ಟರ್, ಸೇರಿದಂತೆ ೨೬೦ ಪೊಲೀಸ್ ಸಿಬ್ಬಂದಿಗಳು, ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲಾಗಿದೆ. ಎಸ್ಪಿ ಎಂ.ಎ. ಅಯ್ಯಪ್ಪ ಕುಟ್ಟ ಗ್ರಾಮಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
-ಹೆಚ್.ಕೆ. ಜಗದೀಶ್