ಮಡಿಕೇರಿ, ಏ. ೧೭: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದೆ.
ನಗರದ ಕೊಹಿನೂರು ರಸ್ತೆಯಲ್ಲಿರುವ ವಾಣಿಜ್ಯೋದ್ಯಮಿ ಸಹಕಾರ ಸಂಘದ ಕಟ್ಟಡದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಒಟ್ಟು ೧೭ ಸ್ಥಾನಗಳ ಪೈಕಿ ೭ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ೧೦ ಸ್ಥಾನಗಳ ಪೈಕಿ ಒಟ್ಟು ೧೮ ಮಂದಿ ಚುನಾವಣಾ ಕಣದಲ್ಲಿದ್ದರು.
ಮಡಿಕೇರಿ ತಾಲೂಕು ಸಾಮಾನ್ಯ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ೮ ಮಂದಿ, ಸೋಮವಾರಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದ ಮೂರು ಸ್ಥಾನಗಳಿಗೆ ಐವರು, ಕೊಡಗು ಜಿಲ್ಲಾ ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿಗೆ ಮೂವರು, ಜಿಲ್ಲಾ ಹಿಂದುಳಿದ ‘ಬಿ’ ಪ್ರವರ್ಗ ಕ್ಷೇತ್ರದ ಒಂದು ಸ್ಥಾನಕ್ಕೆ ಈರ್ವರು ಸ್ಪರ್ಧೆ ಬಯಸಿದ್ದರು.
ಹಿಂದುಳಿದ ‘ಬಿ’ ಪ್ರವರ್ಗ ಕ್ಷೇತ್ರದ ಒಂದು ಸ್ಥಾನಕ್ಕೆ ೨೩೪ ಮತಗಳು ಚಲಾವಣೆಗೊಂಡವು ಇದರಲ್ಲಿ ಡೆನ್ನಿ ಬರೋಸ್ ೧೪೬ ಮತಗಳಿಂದ ಜಯ ಸಾಧಿಸಿದರು. ಪೂವಪ್ಪ ಸಿ.ಬಿ. ೮೬ ಮತಗಳನ್ನು ಪಡೆದು ಸೋಲು ಕಂಡರು. ೨ ಮತಗಳು ತಿರಸ್ಕೃತಗೊಂಡವು.
ಸೋಮವಾರಪೇಟೆ ತಾಲೂಕು ಕ್ಷೇತ್ರದ ೩ ಸ್ಥಾನಕ್ಕೆ ಐವರು ಸ್ಪರ್ಧಿಸಿದ್ದರು. ೬೦ ಮತಗಳ ಪೈಕಿ ಜನಾರ್ಧನ ಪ್ರಭು ಹಾಗೂ ನರಸಿಂಹ ಡಿ. ತಲಾ ೩೯ ಮತ, ಕೆ.ಎಸ್. ನಾಗೇಶ್ ೩೫ ಮತ ಪಡೆದು ಗೆಲುವಿನ ನಗೆ ಬೀರಿದರು. ಯತೀಶ್ ಹೆಚ್.ಸಿ. ೨೯, ವೀರರಾಜು ಎ.ಪಿ. ೨೮ ಮತಗಳನ್ನು ಪಡೆದು ಪರಾಜಯಗೊಂಡರು.
ಮಡಿಕೇರಿ ತಾಲೂಕು ಕ್ಷೇತ್ರದ ೪ ಸ್ಥಾನಗಳಿಗೆ ೮ ಮಂದಿ ಸ್ಪರ್ಧೆ ಬಯಸಿದ್ದರು ಅದರಲ್ಲಿ ಅನಿಲ್ ೧೨೧, ಬಾಬುಚಂದ್ರ ಉಳ್ಳಾಗಡ್ಡಿ ೧೩೬, ಮುನೀರ್ ಅಹಮ್ಮದ್ ೧೧೫, ಮ್ಯಾಥ್ಯು ಕೆ.ಇ. ೯೯ ಮತಗಳಿಂದ ವಿಜಯಶಾಲಿ ಗಳಾದರು. ಜಯಕುಮಾರ್ ೨೮, ಎ.ಕೆ. ಪಾಲಾಕ್ಷ ೩೮,
(ಮೊದಲ ಪುಟದಿಂದ) ಬಾಲಕೃಷ್ಣ ೫೨, ಬ್ರಿಜೇಶ್ ೨೪ ಮತ ಗಳಿಸಿ ಪ್ರಾಭವಗೊಂಡರು. ಒಟ್ಟು ೧೫೮ ಮತಗಳು ಚಲಾವಣೆಗೊಂಡವು.
ಜಿಲ್ಲಾ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿ.ಆರ್. ಸವಿತಾ ರೈ ೧೯೩, ಜಯಂತಿ ೧೪೮ ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡರು. ಬಿ.ಎ. ಸವಿತಾ ೯೨ ಮತಗಳನ್ನು ಪಡೆದು ಪರಾಭವಗೊಂಡರು. ಒಟ್ಟು ೨೩೪ ಮತದಾರರು ಮತದಾನ ಮಾಡಿದ್ದರು.
ಕೆ.ಎಂ.ಬಿ. ಗಣೇಶ್ ನೇತೃತ್ವದ ತಂಡದ ೭ ಮಂದಿ ಗೆಲುವು ಪಡೆದರೆ, ಸೋಮವಾರಪೇಟೆ ತಾಲೂಕಿನ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ.
ಅವಿರೋಧ ಆಯ್ಕೆಯಾದವರು
ಕೊಡಗು ಜಿಲ್ಲಾ ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ಕೆ.ಎಂ. ಗಣೇಶ್, ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ರಾಮಕೃಷ್ಣ, ಕೊಡಗು ಜಿಲ್ಲಾ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಪಿ. ಚಂದ್ರಶೇಖರ, ವೀರಾಜಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ಕೆ.ಬಿ. ಗಿರೀಶ್ ಗಣಪತಿ, ಮಾದಪಂಡ ಪಿ. ಕಾವೇರಪ್ಪ, ಎಂ. ಬಿಜೋಯ್ ಹಾಗೂ ನೂತನವಾಗಿ ಕೆ.ಕೆ. ಶ್ರೀನಿವಾಸ್ ಅವರುಗಳು ಆಯ್ಕೆಯಾಗಿದ್ದಾರೆ.
ಸಹಕಾರ ಇಲಾಖೆಯ ಮಾರಾಟಾಧಿಕಾರಿ ಎಸ್.ಎಂ. ರಘು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆಯ ತನಕ ಮತದಾನ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಉತ್ಸಾಹದಿಂದ ಸದಸ್ಯರು ಆಗಮಿಸಿ ಮತದಾನ ಮಾಡಿದರು. ಫಲಿತಾಂಶದ ಬಳಿಕ ಪಟಾಕಿ ಸಿಡಿಸಿ ಬೆಂಬಲಿಗರು ಸಂಭ್ರಮಿಸಿದ ದೃಶ್ಯ ಕಂಡುಬAತು.