ಪೊಲೀಸ್ ಇಲಾಖೆ ಸ್ಪಷ್ಟನೆ

ಮಡಿಕೇರಿ, ಏ. ೧೭: ಮಡಿಕೇರಿಯಿಂದ ಮೈಸೂರಿಗೆ ತೆರಳುವಾಗ ಇಲವಾಲದ ಬಳಿಯಿರುವ ಬೆಳವಾಡಿ ಜಂಕ್ಷನ್ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ವೇಗದ ಮಿತಿಯನ್ನು ಗರಿಷ್ಠ ೪೦ಕ್ಕೆ ಸೀಮಿತಗೊಳಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಮೈಸೂರು ನಗರದ ವಿ.ವಿಪುರಂ ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸ್ಪಷ್ಟಪಡಿಸಿದ್ದಾರೆ.

‘ಮೈಸೂರಿನಲ್ಲಿ ಕೊಡಗಿನ ವಾಹನಗಳ ಮೇಲೆ ವಕ್ರದೃಷ್ಠಿ’ ಎಂಬ ಶೀರ್ಷಿಕೆಯಡಿ ಮಾರ್ಚ್ ೧೪ರ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿ ಸೇರಿದಂತೆ ಇದಕ್ಕೆ ಸಂಬAಧಿಸಿದAತೆ ಸಾರ್ವಜನಿಕರು ನೀಡಿದ್ದ ದೂರಿಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಅಪಘಾತ ನಿಯಂತ್ರಣಕ್ಕೆ ವೇಗದ ಮಿತಿ ಅಗತ್ಯ ಎಂದಿದ್ದಾರೆ. ಬೆಲವಾಡಿ ಜಂಕ್ಷನ್ ಬಳಿ ವೇಗದ ಮಿತಿಯನ್ನು ಗಂಟೆಗೆ ೪೦ ಕಿ.ಮೀ ಮಾಡಿರುವುದು ಅವೈಜ್ಞಾನಿಕವಾಗಿರುವುದಾಗಿ ‘ಶಕ್ತಿ’ ವರದಿ ಮಾಡಿತ್ತು.

ಈ ರಸ್ತೆ ರಾಷ್ಟಿçÃಯ ಹೆದ್ದಾರಿ – ೨೭೫ ಆಗಿರುವುದರಿಂದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಸವಾರರು ವಾಹನ ಚಾಲಿಸುತ್ತಾರೆ. ಹುಣಸೂರು ರಸ್ತೆಗೆ ಹೊಂದಿಕೊAಡಿರುವ ಹಿನಕಲ್, ಇಲವಾಲ, ಹೂಟಗಳ್ಳಿ ಕೂಡ ಈ ಜಂಕ್ಷನ್‌ಗೆ ಸಮೀಪವಿದ್ದು, ಇಲ್ಲಿ ವಾಹನ ದಟ್ಟಣೆ

(ಮೊದಲ ಪುಟದಿಂದ) ಅಧಿಕವಿರುವುದರಿಂದ ಅಪಘಾತÀ ಸಂಭವ ಹೆಚ್ಚಿದೆ. ಮುಂದುವರೆದು ವಿ.ವಿ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯು ಬೆಲವಾಡಿ ಚೆಕ್‌ಪೋಸ್ಟ್ವರೆಗೂ ಇರುವ ಕಾರಣ ವೇಗ ನಿಯಂತ್ರಣ ಅಗತ್ಯ ಎಂಬುದಾಗಿ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ೨೦೨೦ರ ಮಾರ್ಚ್ ೧೪ ರಂದೇ ಆದೇಶ ಮಾಡಿ ದಿನಪತ್ರಿಕೆಗಳಲ್ಲಿ ಹಾಗೂ ಗೆಜೆಟ್‌ನಲ್ಲಿ ಪ್ರಕಟಿಸಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ.