ಮಡಿಕೇರಿ, ಏ. ೧೬: ದೇಚೂರು ಶ್ರೀರಾಮ ಮಂದಿರ ದೇವಾಲಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂದಿನ ೨೦೨೨-೨೭ರ ೫ ವರ್ಷಗಳ ಅವಧಿಗೆ ದೇವಾಲಯದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ವಕೀಲ ಒ.ಇ. ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ರವಿ ಸಿಂಗ್, ಕಾರ್ಯದರ್ಶಿಯಾಗಿ ಎಚ್.ಪಿ. ತೀರ್ಥಕುಮಾರ್ ಹಾಗೂ ಖಜಾಂಜಿ ಯಾಗಿ ಕೆ. ರಮೇಶ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ನಿರ್ದೇಶಕರುಗಳಾಗಿ ವಿ.ಜೆ. ದೇವೇಂದ್ರ, ಅಜ್ಜೆಟ್ಟಿರ ಲೋಕೇಶ್, ಪಿ. ಉಮೇಶ್ ಕುಮಾರ್, ಸಿ.ವಿ. ಪವಿತ್ರಾ, ಕೆ.ಎಸ್. ಆನಂದ್, ವಿ. ಎ. ವಿಜಯ್ ಕುಮಾರ್ ,ಟಿ. ಆರ್. ವಿಜಯ್ ,ಎಚ್. ಬಿ ವಿಜಯಕುಮಾರ್ ಹಾಗೂ ಕೆ. ಎಸ್ ವಾಸುದೇವ್ ಆಯ್ಕೆಯಾದರು.ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಂಬAಧಪಟ್ಟAತೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು ಹಾಗೂ ಮುಂದಿನ ತಿಂಗಳು ನಡೆಯುವ ದೇವಸ್ಥಾನದ ವಾರ್ಷಿಕೋತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು