ಮರಗೋಡು, ಏ. ೧೬: ಹದಗೆಟ್ಟ ವಿದ್ಯುತ್ ವ್ಯವಸ್ಥೆಯಿಂದ ಬೇಸತ್ತ ಮರಗೋಡು ಗ್ರಾಮಸ್ಥರು ಮೂರ್ನಾಡು ಜೆಇ ಮಹೇಶ್ ಅವರಿಗೆ ದಿಗ್ಬಂಧನ ವಿಧಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಸುರಿದ ಸಾಮಾನ್ಯ ಮಳೆಗೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಕೆಟ್ಟು ನಿಂತಿದೆ. ಇದನ್ನು ಸರಿಪಡಿಸಲು ಗ್ರಾಮಕ್ಕೆ ಪ್ರತ್ಯೇಕವಾಗಿ ಲೈನ್ಮೆನ್ ಕೂಡ ಇಲ್ಲದ್ದರಿಂದ ಗ್ರಾಮಸ್ಥರು ಕತ್ತಲಿ ನಲ್ಲಿಯೇ ದಿನದೂಡುವಂತಾಗಿತ್ತು.
ಈ ಎಲ್ಲಾ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಮರಗೋಡು, ಏ. ೧೬: ಹದಗೆಟ್ಟ ವಿದ್ಯುತ್ ವ್ಯವಸ್ಥೆಯಿಂದ ಬೇಸತ್ತ ಮರಗೋಡು ಗ್ರಾಮಸ್ಥರು ಮೂರ್ನಾಡು ಜೆಇ ಮಹೇಶ್ ಅವರಿಗೆ ದಿಗ್ಬಂಧನ ವಿಧಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಸುರಿದ ಸಾಮಾನ್ಯ ಮಳೆಗೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಕೆಟ್ಟು ನಿಂತಿದೆ. ಇದನ್ನು ಸರಿಪಡಿಸಲು ಗ್ರಾಮಕ್ಕೆ ಪ್ರತ್ಯೇಕವಾಗಿ ಲೈನ್ಮೆನ್ ಕೂಡ ಇಲ್ಲದ್ದರಿಂದ ಗ್ರಾಮಸ್ಥರು ಕತ್ತಲಿ ನಲ್ಲಿಯೇ ದಿನದೂಡುವಂತಾಗಿತ್ತು.
ಈ ಎಲ್ಲಾ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಎಇಇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರದ ಭರವಸೆ ನೀಡುವವರೆಗೂ ಜೆಇಯನ್ನ ಇಲ್ಲಿಂದ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕೊನೆಗೂ ಗ್ರಾಮಸ್ಥರ ಆಗ್ರಹಕ್ಕೆ ಮಣಿದ ಎಇಇ ವಿನಯ್ ಕುಮಾರ್ ಮಡಿಕೇರಿಯಿಂದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಮರಗೋಡು ಗ್ರಾಮಕ್ಕೆ ಪ್ರತ್ಯೇಕ ಲೈನ್ಮೆನ್ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಈಗಿರುವ ಜೆಇ ಅನ್ನು ಬದಲಿಸಿ ನೂತನ ಅಧಿಕಾರಿಯನ್ನು ನೇಮಿಸುವ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.
ಈ ಸಂದರ್ಭ ಮರಗೋಡು ಗ್ರಾ.ಪಂ. ಸದಸ್ಯ ಪರಿಚನ ಶರತ್, ಬಳಪದ ಮೋಹನ್, ಇಟ್ಟಣಿಕೆ ನಾಗೇಶ್, ನಂದಕುಮಾರ್ ಹಾಗೂ ಊರಿನ ಪ್ರಮುಖರು ಹಾಜರಿದ್ದರು.