ಮಡಿಕೇರಿ, ಏ. ೧೬: ‘ಅಂಡರ್ – ೧೬’ ವಯೋಮಿತಿಯ ಬಾಲಕರ ವಿಭಾಗದ ಕೆ.ಎಸ್.ಸಿ.ಎ. ಅಕಾಡೆಮಿ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆಯ್ಕೆ ಪ್ರಕ್ರಿಯೆ ತಾ. ೨೧ ರಂದು ಬೆಳಿಗ್ಗೆ ೮ ಗಂಟೆಯಿAದ ನಗರದ ಕೊಡಗು ವಿದ್ಯಾಲಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ೨೦೦೬ ಸೆಪ್ಟೆಂಬರ್ ೧ ಹಾಗೂ ನಂತರದಲ್ಲಿ ಜನಿಸಿದ ೧೪ ವರ್ಷಗಳನ್ನು ಪೂರೈಸಿರುವ ಬಾಲಕರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಕ್ರೀಡಾಪಟುಗಳು ಜನನ ಪ್ರಮಾಣ ಪತ್ರದ ಅಸಲಿ ಹಾಗೂ ನಕಲಿ ಪ್ರತಿಗಳನ್ನು ಹೊಂದಿರಬೇಕು. ಮಂಗಳೂರು ವಲಯದ ಹೊರಗೆ ಜನಿಸಿದ ಕೊಡಗಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ತಾವು ಕೊಡಗಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ನೋಂದಣಿಯಾಗಿರುವ ದಾಖಲೆಗಳನ್ನು ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ತಾ. ೨೩ ರಂದು ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ ಎಂದು ವಾಂಡರ‍್ಸ್ ಕ್ಲಬ್‌ನ ಕಾರ್ಯದರ್ಶಿ ರಘು ಮಾದಪ್ಪ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ. ೯೮೪೫೫೦೫೨೦೦, ೯೯೮೦೦೬೦೩೨೨ ಅಥವಾ ೯೯೪೫೨೭೩೬೮೮ ಅನ್ನು ಸಂಪರ್ಕಿಸಬಹುದು.