ಪ್ರಯಾಗರಾಜ್, ಏ. ೧೬: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಗಲ್ಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಯಜಮಾನ ರಾಹುಲ್ (೪೨), ಅವರ ಪತ್ನಿ ಪ್ರೀತಿ (೩೮) ಮತ್ತು ಅವರ ಪುತ್ರಿಯರಾದ ಮಹಿ (೧೫), ಪಿಹು (೧೩) ಮತ್ತು ಕುಹು (೧೧) ಅವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅಗರ್ವಾ¯ ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಬೆಳಿಗ್ಗೆ ೭.೩೦ರ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ವೇಳೆ ಮನೆಯ ಮಾಲೀಕ ರಾಹುಲ್ ಅವರ ಶವ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಅದರಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಮೇಲ್ನೋಟಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವAತಿದೆ. ರಾಹುಲ್ ಅವರ ಪತ್ನಿ ಮತ್ತು ಅವರ ಮೂವರು ಪುತ್ರಿಯರ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ರಾಹುಲ್ ತನ್ನ ಪತ್ನಿ ಮಕ್ಕಳನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆಗಾಗಿ ಏಳು ತಂಡಗಳನ್ನು ರಚಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.
ತಿಂಡಿಯಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಹೆಂಡತಿಯನ್ನೆ ಕೊಂದ ಪತಿ!
ಥಾಣೆ, ಏ. ೧೬: ಅಡುಗೆ ಮಾಡುವಾಗ ಊಟದಲ್ಲಿ ರುಚಿ ಸ್ವಲ್ಪ ಹೆಚ್ಚು ಕಮ್ಮಿ ಆಗೋದು ಸಹಜ. ಕೆಲವರು ಎಲ್ಲವನ್ನೂ ಪರ್ಫೆಕ್ಟ್ ಆಗಿ ಮಾಡಿದರೆ ಕೆಲವರು ಉಪ್ಪು, ಹುಳಿ, ಖಾರ ಹಾಕುವುದರಲ್ಲಿ ಹೆಚ್ಚು ಕಮ್ಮಿ ಆಗಿಬಿಡುತ್ತೆ. ಅದನ್ನ ಮನೆಯವರು ದೊಡ್ಡದು ಮಾಡದೇ ಹೇಗೋ ಅನುಸರಿಸಿಕೊಂಡು ತಿಂತಾರೆ. ಆದರೆ ಇಲ್ಲೊಬ್ಬ ಭೂಪ ಊಟದಲ್ಲಿ ಉಪ್ಪು ಹೆಚ್ಚಾಯ್ತು ಅಂತ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ಮಹಾರಾಷ್ಟçದ ಥಾಣೆ ಜಿಲ್ಲೆಯ ಭಾಯಂದರ್ ಟೌನ್ಶಿಪ್ನಲ್ಲಿ ಘಟನೆ ನಡೆದಿದೆ. ಬೆಳಗಿನ ತಿಂಡಿಯಲ್ಲಿ ಉಪ್ಪು ಹೆಚ್ಚಾಗಿತ್ತು ಎಂದು ತನ್ನ ೪೦ ವರ್ಷದ ಪತ್ನಿಯನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಥಾಣೆಯ ಭಾಯಂದರ್ ಪೂರ್ವದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ೪೬ ವರ್ಷದ ನಿಲೇಶ್ ಘಾಘ್ ಎಂದು ಗುರುತಿಸಲಾದ ವ್ಯಕ್ತಿ ಬೆಳಗ್ಗೆ ಹೆಂಡತಿ ಕೊಟ್ಟ ಕಿಚಡಿ ಸೇವಿಸಿದ್ದಾನೆ. ಆದರೆ ಅದರಲ್ಲಿ ಅತಿಯಾದ ಉಪ್ಪು ಇದ್ದುದ್ದರಿಂದ ಬೆಳಿಗ್ಗೆ ೯.೩೦ ರ ಸುಮಾರಿಗೆ ತನ್ನ ಪತ್ನಿ ನಿರ್ಮಲಾಳನ್ನು ಉದ್ದನೆಯ ಬಟ್ಟೆಯಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಆರೋಪಿಯನ್ನ ಬಂಧಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.