ವೀರಾಜಪೇಟೆ ಏ. ೧೪: ರಾಜರ ಕಾಲದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಬಳಿಯಿರುವ ಪಂಪ್ ಕೆರೆ ನಗರದ ನೀರಿನ ದಾಹ ತಣಿಸಲು ನಿರ್ಮಾಣವಾಗಿತ್ತು. ನಗರದ ನೀರಿನ ಮೂಲವಾಗಿರುವ ಹಕ್ಕಿಪಕ್ಷಿಗಳಿಗೆ ಜೀವಜಲವಾಗಿರುವ ಕೆರೆಗಳ ಕಡೆಗಣನೆ ಎಂದಿಗೂ ಸರಿಯಿಲ್ಲ.
ನದಿಗಳ ಹಂಗಿಲ್ಲದೇ ಯಾವೊಬ್ಬ ಮನುಷ್ಯನು ಬದುಕಲಾರ. ಅದರಲ್ಲೂ “ಊರಿಗೊಂದು ಕೆರೆಯಾದರೆ ಬಾವಿಗೆಲ್ಲಾ ನೀರೇ ನೀರು” ಎನ್ನುವ ಸಾಂಪ್ರದಾಯಿಕ ವಿಜ್ಞಾನವೂ ಚಾಲ್ತಿಯಲ್ಲಿದೆ. ವಿರಾಜಪೇಟೆ ನಗರವನ್ನು ದೊಡ್ಡವೀರರಾಜೇಂದ್ರ ಕೊಡಗಿನ ಎರಡನೇ ಮುಖ್ಯಪಟ್ಟಣ ವಾಗಿ ೧೭೯೨ರಲ್ಲಿ ಕಟ್ಟಿದರು. ಇದಕ್ಕೆ ವೀರರಾಜೇಂದ್ರಪೇಟೆ ಎಂದು ಹೆಸರಿಟ್ಟು ನಗರ ಕಟ್ಟಿದ ಮೇಲೆ ಇಲ್ಲಿ ವಾಸಿಸಲು ಬೇಕಾದ ಆಯಾ ವರ್ಣಗಳಿಗನುಗುಣವಾಗಿ ಕುಲಕಸುಬು ಮಾಡುವ ಅನೇಕ ಜನಾಂಗಗಳನ್ನು ಇಲ್ಲಿಗೆ ಬರಮಾಡಿಕೊಂಡು ಅವರಿಗೆ ಆಶ್ರಯ ಕಲ್ಪಿಸಿದ ರಾಜ. ಬರೇ ಜನ ಬಂದರೇ ಸಾಕೇ ಅವರಿಗೆ ಜೀವನ ನಡೆಸಲು ಬೇಕಾದ ನೀರಿಗಾಗಿ ವೀರಾಜಪೇಟೆ ಯಲ್ಲಿ ಕೆರೆಗಳ ನಿರ್ಮಾಣವನ್ನು ದೊಡ್ಡವೀರರಾಜೇಂದ್ರ ಮಾಡಿಸಿದರು. ಪಂಪ್ ಕೆರೆ ನಗರಕ್ಕೆ ನೀರು ಕೊಡುವ ಬಹುಮುಖ್ಯ ಉದ್ದೇಶದ ಜೊತೆಗೆ ಬೆಟ್ಟಗಳು ಸಂಧಿಸುವ ಜಾಗದಲ್ಲಿ ಕಟ್ಟೆ ಕಟ್ಟಿ ಕೆರೆಯನ್ನು ನಿರ್ಮಿಸಲಾಗಿತ್ತು.
ಅಂದು ವೀರಾಜಪೇಟೆ ನಗರಕ್ಕೆ ನೀರು ಒದಗಿಸುವ ಘನ ಉದ್ದೇಶದ ಜೊತೆ ಸ್ಥಾಪಿತವಾದ ಪಂಪ್ಕೆರೆಗೆ ಹಲವು ವರ್ಷಗಳಿಂದ ಒಮ್ಮೆಗೆ ಮುಪ್ಪು ಆವರಿಸಿಬಿಟ್ಟಿತ್ತು. ನಿಂತಲ್ಲೇ ವೀರಾಜಪೇಟೆ ಏ. ೧೪: ರಾಜರ ಕಾಲದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಬಳಿಯಿರುವ ಪಂಪ್ ಕೆರೆ ನಗರದ ನೀರಿನ ದಾಹ ತಣಿಸಲು ನಿರ್ಮಾಣವಾಗಿತ್ತು. ನಗರದ ನೀರಿನ ಮೂಲವಾಗಿರುವ ಹಕ್ಕಿಪಕ್ಷಿಗಳಿಗೆ ಜೀವಜಲವಾಗಿರುವ ಕೆರೆಗಳ ಕಡೆಗಣನೆ ಎಂದಿಗೂ ಸರಿಯಿಲ್ಲ.

ಅಂದು ವೀರಾಜಪೇಟೆ ನಗರಕ್ಕೆ ನೀರು ಒದಗಿಸುವ ಘನ ಉದ್ದೇಶದ ಜೊತೆ ಸ್ಥಾಪಿತವಾದ ಪಂಪ್ಕೆರೆಗೆ ಹಲವು ವರ್ಷಗಳಿಂದ ಒಮ್ಮೆಗೆ ಮುಪ್ಪು ಆವರಿಸಿಬಿಟ್ಟಿತ್ತು. ನಿಂತಲ್ಲೇ ಪುನರುಜ್ಜೀವನ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮೂಲಕ ಕೆÀರೆಗಳ ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಕೊಡಗಿನಲ್ಲಿಯೂ ಇದುವರೆಗೂ ಎಂಟು ಕೆರೆಗಳಿಗೆ ಈ ಯೋಜನೆ ಮೂಲಕ ಮರುಜೀವ ಕೊಡಲಾಗಿದೆ.
ಇದೇ ಯೋಜನೆಯಡಿಯಲ್ಲಿ ವೀರಾಜಪೇಟೆಯ ಪಂಪ್ ಕೆರೆಗೂ ಕೂಡಾ ಮರುಜೀವನ ಕೊಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿ ಯಲ್ಲಿ ಇತ್ತೀಚೆಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯನವರು ಚಾಲನೆ ನೀಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಹಾಗೂ ತಂಡದವರು ಈ ಯೋಜನೆಯನ್ನು ಸಾಕಾರಗೊಳಿಸಲು ಸಾಕಷ್ಟು ಶ್ರಮಿಸಿದರು.
ವರ್ಷಗಳಿಂದ ಪಾಚಿಗಟ್ಟಿ ನಿಂತಿದ್ದ ನೀರನ್ನು ಪಂಪ್ ಸೆಟ್ಗಳನ್ನು ಬಳಕೆ ಮಾಡಿಕೊಂಡು ಪೂರ್ತಿಯಾಗಿ ಖಾಲಿ ಮಾಡಿ, ಬಳಿಕ ಜೆಸಿಬಿ ಸಹಾಯದಿಂದ ಕೆರೆಯಲ್ಲಿ ಹುದುಗಿದ್ದ ಪುನರುಜ್ಜೀವನ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮೂಲಕ ಕೆÀರೆಗಳ ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಕೊಡಗಿನಲ್ಲಿಯೂ ಇದುವರೆಗೂ ಎಂಟು ಕೆರೆಗಳಿಗೆ ಈ ಯೋಜನೆ ಮೂಲಕ ಮರುಜೀವ ಕೊಡಲಾಗಿದೆ.
ಇದೇ ಯೋಜನೆಯಡಿಯಲ್ಲಿ ವೀರಾಜಪೇಟೆಯ ಪಂಪ್ ಕೆರೆಗೂ ಕೂಡಾ ಮರುಜೀವನ ಕೊಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿ ಯಲ್ಲಿ ಇತ್ತೀಚೆಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯನವರು ಚಾಲನೆ ನೀಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಹಾಗೂ ತಂಡದವರು ಈ ಯೋಜನೆಯನ್ನು ಸಾಕಾರಗೊಳಿಸಲು ಸಾಕಷ್ಟು ಶ್ರಮಿಸಿದರು.
ವರ್ಷಗಳಿಂದ ಪಾಚಿಗಟ್ಟಿ ನಿಂತಿದ್ದ ನೀರನ್ನು ಪಂಪ್ ಸೆಟ್ಗಳನ್ನು ಬಳಕೆ ಮಾಡಿಕೊಂಡು ಪೂರ್ತಿಯಾಗಿ ಖಾಲಿ ಮಾಡಿ, ಬಳಿಕ ಜೆಸಿಬಿ ಸಹಾಯದಿಂದ ಕೆರೆಯಲ್ಲಿ ಹುದುಗಿದ್ದ ಹೂಳನ್ನು ತೆರವು ಮಾಡಲಾಯಿತು. ಎಷ್ಟೋ ವರ್ಷಗಳಿಂದ ಮುಚ್ಚಿ ಹೋಗಿದ್ದ ಜಲದ ಕಣ್ಣುಗಳು ತೆರೆದುಕೊಂಡು ನೀರು ನಿಧಾನಕ್ಕೆ ತುಂಬಲಾರAಭಿಸಿದೆ. ಕೆರೆಯ ಸುತ್ತಲೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಜನರಿಗೆ ವಾಕಿಂಗ್ ಮಾಡಲು ವಾಕಿಂಗ್ ಪಥ ನಿರ್ಮಾಣ ಮಾಡುವ ಉದ್ಯಾನವನ ಮಾಡುವ ಇಂಗಿತ ವ್ಯಕ್ತಪಡಿಸಿರುವುದರಿಂದ ಕೆರೆಯ ಮೇಲಂಗಳನ್ನು ಸಿದ್ಧಮಾಡಿ ಕೊಟ್ಟಿದ್ದಾರೆ. ಅಲ್ಲದೇ ಕೆರೆಯ ಸುತ್ತಲೂ ಒತ್ತುವರಿ ಮಾಡಿಕೊಂಡು ಹಣ್ಣಿನ ಗಿಡ, ಮರ ಬೆಳೆಸಿದ್ದರಿಂದ ಅವೆಲ್ಲವನ್ನು ತೆರವು ಮಾಡಿ, ಪಂಪ್ ಕೆರೆಯ ಮುಂಚಿನ ಜಾಗವನ್ನು ಮರಳಿ ಪಡೆದಂತಾಗಿದೆ.
ರಾಜಕೀಯ ರಹಿತವಾಗಿ ಪಂಪ್ ಕೆರೆ ಹೂಳೆತ್ತುವ ಮೊದಲು ಕೆರೆ ಸಮಿತಿ ಮಾಡಿಕೊಂಡು ಕೆರೆಯ ಹೂಳು ತೆಗೆದು, ಅದರ ಸುತ್ತಲೂ ಸ್ವಚ್ಛ ಮಾಡಲಾಗಿದೆ. ಇನ್ನು ಕೆರೆಯ ಸುತ್ತಲೂ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಹಾಗೂ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿದಾಗ ಹೆಚ್ಚಾದ ನೀರು ಹೊರಹೋಗುವ ವ್ಯವಸ್ಥೆಯನ್ನು ಪಂಚಾಯಿತಿ ಸರಿಮಾಡಿಕೊಳ್ಳಬೇಕಿದೆ.
ಕೃಷಿ ಅಧಿಕಾರಿ ತಿಳಿಸಿದ ಹಾಗೆ ಸುಮಾರು ಮೂರು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಈ ಕೆರೆಗೆ ಕಾಯಕಲ್ಪ ಕಲ್ಪಿಸಲಾಗಿದೆ. ಪಟ್ಟಣ ಪಂಚಾಯಿತಿ ವರ್ಷಗಳಿಂದ ಮಾಡದೇ ಬಿಟ್ಟಿದ್ದ ಪಂಪ್ ಕೆರೆಗೆ ಮರುಜೀವ ಕೊಡುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿ ತೋರಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಅವರ ಸಮ್ಮುಖದಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಸಂಘದವರು ಹಮ್ಮಿಕೊಂಡಿದ್ದಾರೆ. ಅಲ್ಲದೇ ಮಳೆಗಾಲದಲ್ಲಿ ಕೆರೆ ಪೂರ್ತಿಯಾಗಿ ತುಂಬಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ಕೆರೆಗೆ ಬಾಗೀನ ಅರ್ಪಣೆ ಮಾಡಲಾಗುವುದು ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊAಡಿದ್ದಾರೆ.
ನಗರದ ಭಾಗವಾಗಿದ್ದ ಪಂಪ್ ಕೆರೆಗೆ ಮರುಜೀವ ಕೊಟ್ಟು, ಕೆರೆಯ ಸುತ್ತಲಿನ ವಾತಾವರಣದಲ್ಲಿ ಜೀವಂತಿಕೆಯನ್ನು ತುಂಬಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಕಾರ್ಯದಿಂದ ಹೂಳು ಎತ್ತಿ, ಕೆರೆಯ ಪರಿಸರ ಸ್ವಚ್ಛಗೊಳಿಸಿದ ಬಳಿಕ ಕೆರೆಯಲ್ಲಿ ನಿಧಾನಕ್ಕೆ ನೀರು ತುಂಬುತ್ತಿದೆ. ಮುಂದಿನ ದಿನಗಳಲ್ಲಿ, ಕಪ್ಪೆ, ಏಡಿ, ಮೀನು ಮುಂತಾದ ಜಲಚರಗಳು ಬರಬಹುದು. ಅವುಗಳ ಜೊತೆಗೆ ಸಹ ಜೀವನ ನಡೆಸಲು ಬಾತು ಕೋಳಿ, ನೀರುಕಾಗೆ, ಮಿಂಚುಳ್ಳಿ ಬರಬಹುದು. ನೈದಿಲೆ, ಕಮಲದ ಹೂವುಗಳು ಅರಳಬಹುದು. ಇಷ್ಟೆಲ್ಲಾ ಆದ ಬಳಿಕ ಪಟ್ಟಣ ಪಂಚಾಯಿತಿ ಮನಸು ಮಾಡಿದರೆ ಇಲ್ಲಿ ಸುಂದರ ಉದ್ಯಾನವನ ಸೃಷ್ಟಿಮಾಡಿ ಕೆರೆ ಹಬ್ಬವನ್ನು ಮಾಡಿ ‘‘ನೋಡ ಬನ್ನಿ ನಿಮ್ಮೂರ ಕೆರೆಯ’’ ಎಂದು ನಗರದ ಜನತೆಯನ್ನು ಆಹ್ವಾನಿಸಬಹುದು.
- ಉಷಾ ಪ್ರೀತಮ್, ವೀರಾಜಪೇಟೆ.