ಖ್ಯಾತ ಬರಹಗಾರ, ಇಂಜಿನಿಯರ್ ಲಿಯೋನಾರ್ಡೊಡಾ ವಿನ್ಸಿಯ ಹುಟ್ಟಿದ ದಿನವನ್ನು ವಿಶ್ವ ಕಲಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಚಿತ್ರಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದಲ್ಲಿರುವ ಸರ್ವ ಜನರಿಗೂ ಎಲ್ಲಾ ವಯೋಮಾನದವರೆಗೂ, ಸರ್ವಜನಾಂಗದವರೆಗೂ ಚಿತ್ರಕಲೆಯ ಕಲಾವಿದರ ಮೂಲಕ ಹಾಗೂ ಚಿತ್ರಕಲೆಯನ್ನು ಆಸ್ವಾಧಿಸುವ ಕಲಾರಸಿಕರ ಮೂಲಕ ತಮ್ಮ ಚಿತ್ರವನ್ನ ಚಿತ್ರಿಸಿ ಆನಂದ ಪಡುವುದರ ಮೂಲಕ ಅಥವಾ ಇನ್ನೊಬ್ಬರ ಚಿತ್ರವನ್ನು ನೋಡುವುದರ ಮೂಲಕ ಇಲ್ಲವೇ ಆರ್ಟ್ ಗ್ಯಾಲರಿಗಳಿಗೆ ಹೋಗಿ ಚಿತ್ರವನ್ನು ನೋಡಿ ಸಂತೋಷಪಡುವ ದಿನ. ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಂಬ್ಲರ್ ಮುಂತಾದ ಜಾಲತಾಣಗಳ ಮೂಲಕ ಚಿತ್ರಕಲೆಯನ್ನು ವೀಕ್ಷಿಸುವುದರೊಂದಿಗೆ ವಿಶ್ವ ಕಲಾ ದಿನವನ್ನು ಸಂಭ್ರಮಿಸುತ್ತಾರೆ.
ಡಿಜಿಟಲ್ ಕಲೆಯ (ಆIಉIಖಿಂಐ ಂಖಖಿ) ವಿಚಾರದ ಬಗ್ಗೆ ತಿಳಿಯೋಣ. ಚಿತ್ರ ಕಲೆಯ ಆವಿಷ್ಕಾರಗಳಲ್ಲಿ ಒಂದಾದ ಡಿಜಿಟಲ್ ಕಲೆಯು ಇವತ್ತಿನ ದಿನಗಳಲ್ಲಿ ಬಹಳ ಅವಶ್ಯಕವಾಗಿದೆ. ಇದನ್ನು ಕಂಪ್ಯೂಟರ್ ಸಹಾಯದಿಂದ ಮಾಡಲಾಗುತ್ತದೆ. ಇದಕ್ಕೆ ಸಂಬAಧಿಸಿದ ಅನೇಕ ಸಾಫ್ಟ್ವೇರ್ ಸಹ ಕಾಣಬಹುದಾಗಿದೆ. ಇವತ್ತಿನ ಆಧುನಿಕ ದಿನದಲ್ಲಿ ಈ ಡಿಜಿಟಲ್ ಕಲೆಯು ಅತ್ಯಂತ ಉಪಯುಕ್ತ. ನಾವುಗಳು ಚಿತ್ರ ಬಿಡಿಸಿ ಬಣ್ಣವನ್ನು ಹಾಕಬೇಕಾದರೆ ಪೇಪರ್ ಬೇಕು ಅಥವಾ ಕ್ಯಾನ್‌ವಸ್ ಅಥವಾ ಯಾವುದಾದರೊಂದು ಬೋರ್ಡ್ನ ಮೇಲೆಯೋ ಅಥವಾ ಗೋಡೆಯ ಮೇಲಾದರೂ ಆಗಬಹುದು. ಆದರೆ ಡಿಜಿಟಲ್ ಚಿತ್ರಣ ಮಾಡಲು ಬೇಕಾಗಿರುವುದು ಟಚ್‌ಸ್ಕಿçÃನಿನ ಪರದೆ. (ಖಿಔUಅಊ Sಅಖಇಇಓ) ಉದಾಹರಣೆಗೆ ಈಗಿನ ಟಚ್‌ಸ್ಕಿçÃನಿನ ಮೊಬೈಲಿನ ಮಾದರಿ ಅಷ್ಟೇ ಸಾಕು. ನಾವು ಡಿಜಿಟಲ್ ಚಿತ್ರಕಲೆಯನ್ನು ಮಾಡಬಹುದಾಗಿದೆ. ಇವತ್ತಿನ ದಿನಗಳಲ್ಲಿ ಈ ಕಲೆಯಲ್ಲಿ ಅತೀ ಹೆಚ್ಚು ಕಲಾವಿದರನ್ನು ನಾವುಗಳು ಕಾಣಬಹುದಾಗಿದೆ. ದೊಡ್ಡದಾದ ಡಿಸೈನ್ ಕಂಪೆನಿಗಳಲ್ಲಿ ಒಂದಾದÀ ಅಮೇರಿಕಾದ ವಾಲ್ಟ್ ಆಫ್ ಡಿಸ್ನಿಯ ಸ್ಟುಡಿಯೋಗಳಲ್ಲಿ ಸಹಾ ಡಿಜಿಟಲ್‌ನಲ್ಲಿ ಚಿತ್ರಕಲೆ ಹಾಗೂ ಚಲನಚಿತ್ರವನ್ನು ತಯಾರಿಸುತ್ತಾರೆ. ಇಲ್ಲಿ ಅನೇಕ ಚಿತ್ರಕಲಾವಿದರನ್ನು ನಾವು ಕಾಣಬಹುದಾಗಿದೆ ಇಂತಹ ಅನೇಕ ಸ್ಟುಡಿಯೋವನ್ನು ವಿಶ್ವದಲ್ಲಿ ಕಾಣಬಹುದಾಗಿದೆ.
ಹಾಗೆಯೇ ಡಿಜಿಟಲ್ ಚಿತ್ರಣವನ್ನು ಕಂಪ್ಯೂಟರ್‌ನ ಸಹಾಯದಿಂದ ಮಾಡಬೇಕಾದರೆ ಇದಕ್ಕೆ ಸಾಫ್ಟ್ವೇರ್‌ನ ಅಗತ್ಯ ಹೆಚ್ಚು. ಅವುಗಳಲ್ಲಿ ಚಿತ್ರಕಲೆಗೆ ಸಂಬAಧಿಸಿದ ಸಾಫ್ಟ್ವೇರ್‌ಗಳಲ್ಲಿ ಫೋಟೋಷಾಪ್, ಆರ್ಟರೇಜ್, ಸ್ಕೆಚ್‌ಬುಕ್ಕ್, ಪ್ರೋಕ್ರಿಯೇಟ್, ಇನ್ಫಿನಿಟಿ ಪೇಂಟರ್ ಹಾಗೆಯೇ ಕೋರಲ್ ಪೇಂಟರ್ ಇತ್ಯಾದಿಗಳು. ಈ ಸಾಫ್ಟ್ವೇರ್‌ಗಳು ಈಗ ಇರುವ ಆಪರೇಟಿಂಗ್ ಸಿಸ್ಟಂಗಳಾದ ವಿಂಡೋಸ್, ಮ್ಯಾಕ್ ಲೈನೇಕ್ಸ್, ಆಂಡ್ರಾಯ್ಡ್ಗಳಲ್ಲಿ ನಾವು ಕಾಣುತ್ತೇವೆ ಮತ್ತು ಬಳಕೆಯನ್ನು ಮಾಡುತ್ತೇವೆ. ಡಿಜಿಟಲ್ ಚಿತ್ರಕಲೆಗೆ ಬಣ್ಣ ಬೇಕಿಲ್ಲ ಎಲ್ಲವು ಸಾಫ್ಟ್ವೇರ್‌ನ ಸಹಾಯದಿಂದ ಕೆಲಸ ನಡೆಯುತ್ತದೆ.
ಡಿಜಿಟಲ್ ಚಿತ್ರಕಲೆಗಾಗಿ ವ್ಯಾಕಂ (Wಂಅಔಒ) ಸಂಸ್ಥೆಯು ಉನ್ನತ ಮಾದರಿಯ ಟಚ್‌ಸ್ಕಿçÃನ್‌ನ ಟ್ಯಾಬ್‌ಲೆಟ್ (ಖಿಂಃಐಇಖಿ) ಅನ್ನು ತಯಾರಿಸಿರುತ್ತಾರೆ. ಹಾಗೆಯೇ ಇವತ್ತಿನ ದಿನಗಳಲ್ಲಿ ಚಿತ್ರ ಬಿಡಿಸಲು ಅನುಕೂಲವಾಗುವಂತಹ ಅನೇಕ ತರಹದ ಟ್ಯಾಬ್‌ಗಳನ್ನು (ಖಿಂಃ) ಸ್ಯಾಮ್‌ಸಂಗ್, ಆಪಲ್, ಮೈಕ್ರೋಸಾಫ್ಟ್ ಹಾಗೂ ಇನ್ನಿತರ ಸಂಸ್ಥೆಗಳು ತಯಾರಿಸಿವೆ. ಆದರೆ ಆಪಲ್‌ನ ಐಪ್ಯಾಡ್ (IPಂಆ) ಡಿಜಿಟಲ್ ಚಿತ್ರಕಲಾವಿದರಿಗೆ ಹೇಳಿ ಮಾಡಿಸಿದಂತಿದೆ. ಅದಕ್ಕೆ ಬೇಕಾದ ಪೆನ್, ಪೆನ್‌ಸಿಲ್, ಎಲ್ಲವೂ ಇದರಲ್ಲಿ ದೊರಕುವಂತೆ ಮಾಡಿದ್ದಾರೆ. ಇದರಲ್ಲಿ ಚಿತ್ರ ಬಿಡಿಸಿದ ನಂತರ ಅದನ್ನು ಕ್ಯಾನ್‌ವಸ್‌ನ ಮೇಲೆ, ಪೇಪರ್‌ನ ಮೇಲೆ ಅಥವಾ ಬೇಕಾದ ವಸ್ತುವಿನ ಮೇಲೆ ಪ್ರಿಂಟ್‌ನ್ನು ಹಾಕಬಹುದಾಗಿದೆ. ಹಾಗೆಯೇ ಡಿಜಿಟಲ್ ಪೇಂಟಿAಗ್‌ನಲ್ಲೂ ವಾಟರ್‌ಕಲರ್, ಆಯಿಲ್‌ಕಲರ್, ಪೆನ್, ಪೆನ್ಸಿಲ್, ಕ್ರಯೋನ್, ಕಲರ್‌ಪೆನ್ಸಿಲ್, ಆಯಿಲ್ ಪೇಸ್ಟಲ್‌ಎಲ್ಲಾ ಮಾಧ್ಯಮಗಳಲ್ಲೂ ಮಾಡಬಹುದಾಗಿದೆ. ಈ ಚಿತ್ರಕಲೆಯೂ ತುಂಬಾನೆ ಆವಿಷ್ಕಾರಕ್ಕೆ ಹೊರಟು ಹೋಗಿದೆ.
ಇವತ್ತಿನ ದಿನಗಳಲ್ಲಿ ಕಲೆ ಎಲ್ಲರಲ್ಲೂ ಇರುವುದರಿಂದ ಅಲ್ಲದೆ ಮಕ್ಕಳಿಗೂ ಸಂಬAಧಿಸಿದ ಚಿತ್ರಕಲೆಯ ಸಾಫ್ಟ್ವೇರ್ ಕಂಪೆನಿಗಳು ಅನೇಕ ಮಾದರಿಯಲ್ಲಿ ಮರುಕಟ್ಟೆಗೆ ಬಂದಿರುತ್ತದೆ. ಅಲ್ಲದೆ ಚಿತ್ರಕಲೆಯನ್ನು ಎಲ್ಲೆಂದರಲ್ಲೇ ಕುಳಿತು ಚಿತ್ರ ಬಿಡಿಸುವ ದಿನಗಳಾಗಿದ್ದು, ಆದುದರಿಂದ ಈ ದಿನದ ಮಹತ್ವಕ್ಕೆ ಅತೀ ಸೂಕ್ತವೆನಿಸಿದೆ.
- ಬಿ.ಆರ್. ಸತೀಶ್, ಚಿತ್ರ ಕಲಾವಿದ,
ವೀರಾಜಪೇಟೆ, ಮೊ. ೯೪೪೮೩೨೫೭೫೯