ಗೋಣಿಕೊಪ್ಪ ವರದಿ, ಏ. ೧೪: ಹಾಕಿ ಇಂಡಿಯಾ ವತಿಯಿಂದ ಮದ್ಯಪ್ರದೇಶದ ಭೂಪಾಲ್‌ನಲ್ಲಿರುವ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡವು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಬೆಂಗಾಳ್ ತಂಡವನ್ನು ಕ್ವಾರ್ಟರ್ ಫೈನಲ್‌ನಲ್ಲಿ ೪-೩ ಗೋಲುಗಳಿಂದ ಮಣಿಸಿ ಸಾಧನೆ ಮಾಡಿತು. ೫೯ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಮತ್ತು ೩೪ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಸ್ಟೊçÃಕ್ ಅನ್ನು ಎಸ್. ಪಿ. ದೀಕ್ಷಿತ್ ಗೋಲಾಗಿ ಪರಿವರ್ತಿಸಿ ಗೆಲುವಿನ ರೂವಾರಿ ಎನಿಸಿದರು. ೨೪ನೇ ನಿಮಿಷದಲ್ಲಿ ಹರೀಶ್ ಮುತದರ್, ೪೧ರಲ್ಲಿ ಬಿ. ಯತೀಶ್‌ಕುಮಾರ್ ಗೋಲು ಹೊಡೆದರು. ತಾ. ೧೬ ರಂದು ಸೆಮಿ ಫೈನಲ್ ಪಂದ್ಯ ನಡೆಯಲಿದ್ದು, ತಮಿಳುನಾಡು ವಿರುದ್ಧ ಸೆಣಸಾಡಲಿದೆ.
ರಾಜ್ಯ ತಂಡದ ೧೮ ಆಟಗಾರರಲ್ಲಿ ಕೊಡಗು ಜಿಲ್ಲೆಯ ೧೨ ಆಟಗಾರರು ತಂಡದಲ್ಲಿದ್ದು, ಕುಂದೀರ ಪಿ. ಶರತ್ ಸೋಮಣ್ಣ ಗೋಲ್ ಕೀಪರ್, ಉಳಿದಂತೆ ಮುಕ್ಕಾಟೀರ ಆರ್. ಮುತ್ತಣ್ಣ, ಬಿ.ಎಂ. ಲಿಖಿತ್, ಬೊಳ್ಯಪಂಡ ಪಿ. ಸೋಮಣ್ಣ, ಜೆ.ಪಿ. ಕುಶ, ನಾಯಮಾಡ ಚಿರಂತ್ ಸೋಮಣ್ಣ, ಐನಂಡ ಆರ್. ನಾಚಪ್ಪ, ಸಿ.ಎಸ್. ಶಮಂತ್, ಬಿದ್ದಾಟಂಡ ಚೆಲ್ಸಿ ಮೇದಪ್ಪ, ಯತೀಶ್‌ಕುಮಾರ್, ಸೂರ್ಯ, ದೀಕ್ಷಿತ್, ತರಬೇತು ದಾರರಾಗಿ ಕೂತಂಡ ಕೆ. ಪೂಣಚ್ಚ, ವ್ಯವಸ್ಥಾಪಕರಾಗಿ ಕರ್ತಮಾಡ ನಿಖಿ ಗಣಪತಿ ತೆರಳಿದ್ದಾರೆ.