ಕಣಿವೆ, ಏ. ೧೪: ಹಾರಂಗಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುರಿದ ಭಾರೀ ಪ್ರಮಾಣದ ಗಾಳಿ ಮಳೆಗೆ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿ ಅರ್ಜುನ ಹಾಗೂ ರವಿ ಎಂಬವರಿಗೆ ಸೇರಿದ ಮನೆಗಳ ಮೇಲೆ ಮರದ ಕೊಂಬೆಗಳು ಬಿದ್ದು ಮನೆ ಭಾಗಶಃ ಹಾನಿಯಾಗಿದೆ.

ಮನೆಯ ಮೇಲೆ ಹೊದಿಕೆಯಾಗಿದ್ದ ಎಸಿ ಶೀಟುಗಳು ಸಂಪೂರ್ಣ ಜಖಂಗೊAಡಿವೆ. ಇದರಿಂದಾಗಿ ಮಳೆಯ ನೀರು ಮನೆಯೊಳಗೆ ಹರಿದು ಮನೆಯೊಳಗಿದ್ದ ಪರಿಕರಗಳು ಹಾನಿಯಾಗಿವೆ ಎಂದು ಮನೆಯವರು ತಿಳಿಸಿದ್ದು, ಈ ಸಂಬAಧ ಕುಶಾಲನಗರದ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದು ಕೂಡಲೇ ಮನೆ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗೆಯೇ ಗಿರಿಜನ ಹಾಡಿಯಲ್ಲಿ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಆಗಿರುವ ಮನೆಹಾನಿ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.