ರಾಜೀನಾಮೆ ನೀಡಲ್ಲ - ಸಮಗ್ರ ತನಿಖೆಯಾಗಲಿ
ಶಿವಮೊಗ್ಗ, ಏ. ೧೩: ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಮೃತಪಟ್ಟಿರುವ ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ, ವಾಟ್ಸಾಪ್‌ನಲ್ಲಿ ಸಂದೇಶ ಬರೆದಿದ್ದಾರಷ್ಟೆ, ಅವರು ಆರೋಪ ಮಾಡಿದ್ದಾರೆ ಎಂದು ಹೇಳುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಸಂತೋಷ್ ಪಾಟೀಲ್ ಮುಖ ಕೂಡ ನೋಡಿಲ್ಲ, ಅಂಥದ್ದರಲ್ಲಿ ೮೦ ಬಾರಿ ನೋಡಿದ್ದೇನೆ, ಭೇಟಿಯಾಗಿದ್ದೇನೆ ಎಂದು ಹೇಗೆ ಹೇಳಿದ್ದಾರೋ ಗೊತ್ತಿಲ್ಲ, ಅವರು ದೆಹಲಿಯಲ್ಲಿ ಹೋಗಿ ಸುದ್ದಿಗೋಷ್ಠಿ ನಡೆಸಲು ವಿಮಾನ ಟಿಕೆಟ್ ಬುಕ್ ಮಾಡಿ ಕೊಟ್ಟವರ್ಯಾರು ಎಂದು ಕೇಳಿದರು. ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಡಿವೈಎಸ್ಪಿ ಗಣಪತಿ ವೀಡಿಯೋ ಮಾಡಿದ್ದರು, ಸಂತೋಷ್ ಪಾಟೀಲ್ ಪ್ರಕರಣದಲ್ಲಿ ವೀಡಿಯೋ ಮಾಡಿಲ್ಲ, ಡೆತ್ ನೋಟ್ ಬರೆದಿಲ್ಲ, ಕೇವಲ ಅವರು ಬರೆದಿದ್ದರು ಎನ್ನುವ ಸಂದೇಶ ಹರಿದಾಡುತ್ತಿದೆ, ಈ ಪ್ರಕರಣ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಪಾಟೀಲ್ ಸಾವಿನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ನವಾಬ್ ಮಲಿಕ್ ಆಸ್ತಿ ಜಪ್ತಿ
ಮುಂಬೈ, ಏ. ೧೩: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಜೈಲು ಪಾಲಾಗಿರುವ ಮಹಾರಾಷ್ಟç ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಹಲವು ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಜಪ್ತಿ ಮಾಡಿದೆ. ಮೊಹಮ್ಮದ್ ನವಾಬ್ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್ ನವಾಬ್ ಮಲಿಕ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ ಸಾಲಿಡಸ್ ಇನ್ವೆಸ್ಟ್ಮೆಂಟ್ ಪ್ರೆöÊವೇಟ್ ಲಿಮಿಟೆಡ್ ಮತ್ತು ಮಲಿಕ್ ಇನ್‌ಫ್ರಾಸ್ಟçಕ್ಚರ್‌ಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡು ತಾತ್ಕಾಲಿಕ ಆದೇಶ ಹೊರಡಿಸಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ. ಮಲಿಕ್ ಅವರ ಜಪ್ತಿಮಾಡಲಾದ ಆಸ್ತಿಗಳಲ್ಲಿ ಗೋವಾಲಾ ಕಾಂಪೌAಡ್ ಮತ್ತು ಮುಂಬೈನ ಉಪನಗರ ಕುರ್ಲಾ(ಪಶ್ಚಿಮ), ಮಹಾರಾಷ್ಟçದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ೧೪೭.೭೯ ಎಕರೆ ಕೃಷಿ ಭೂಮಿ, ಕುರ್ಲಾ(ಪಶ್ಚಿಮ) ದಲ್ಲಿ ಮೂರು ಫ್ಲಾಟ್ ಗಳು ಮತ್ತು ಬಾಂದ್ರಾ (ಪಶ್ಚಿಮ)ದಲ್ಲಿ ಎರಡು ವಸತಿ ಫ್ಲಾಟ್‌ಗಳು ಸೇರಿವೆ.
ಸಾವಿರಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಶರಣು
ಮಾಸ್ಕೋ, ಏ. ೧೩: ಒಂದು ತಿಂಗಳಿನಿAದ ಮಾಸ್ಕೋ ಪಡೆಗಳು ಮುತ್ತಿಗೆ ಹಾಕಿದ ಪೂರ್ವ ಉಕ್ರೇನ್‌ನ ಆಯಕಟ್ಟಿನ ಬಂದರು ನಗರಿ ಮಾರಿಯುಪೋಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಬುಧವಾರ ಶರಣಾಗಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಮಾರಿಯುಪೋಲ್ ನಗರದಲ್ಲಿ ೩೬ನೇ ಮೆರೈನ್ ಬ್ರಿಗೇಡ್‌ನ ೧,೦೨೬ ಉಕ್ರೇನಿಯನ್ ಸೈನಿಕರು ಸ್ವಯಂಪ್ರೇರಿತವಾಗಿ ಶಸ್ತಾçಸ್ತçಗಳನ್ನು ತ್ಯಜಿಸಿ ಶರಣಾದರು ಎಂದು ರಷ್ಯಾ ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅತಿ ದೊಡ್ಡ ಉಕ್ಕಿನ ಕಾರ್ಖಾನೆಯಾದ ಇಲಿಚ್ ಹೆಸರಿನ ಮಾರಿಯುಪೋಲ್ ಮೆಟಲರ್ಜಿಕಲ್ ಪ್ಲಾಂಟ್ ಬಳಿ ಉಕ್ರೇನ್ ಸೈನಿಕರು ಶರಣಾದರು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾಗೆ ಶರಣಾದ ಉಕ್ರೇನ್ ಪಡೆಗಳಲ್ಲಿ ೧೬೨ ಅಧಿಕಾರಿಗಳು ಮತ್ತು ೪೭ ಮಹಿಳೆಯರು ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ರಷ್ಯಾ ತಾನು ಅತಿಕ್ರಮಿಸಿರುವ ಕ್ರಿಮಿಯಾ ಪ್ರಾಂತವನ್ನು ಮಾಸ್ಕೋ ಬೆಂಬಲಿತ ಪ್ರತ್ಯೇಕವಾದಿಗಳ ನಿಯಂತ್ರಣದಲ್ಲಿರುವ ಡೊನೆಟ್ಕ÷್ಸಗೂ ಲುಗಾನ್ಕ್÷್ಸ ಪ್ರಾಂತಗಳೊAದಿಗೆ ಸಂಪರ್ಕಿಸಲು ಯತ್ನಿಸುತ್ತಿದೆ. ಈ ಪ್ರದೇಶದ ನಾಲ್ಕು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಾರಿಯುಪೋಲ್ ಮೇಲೆ ರಷ್ಯಾ ಸೇನೆ ಸಂಪೂರ್ಣ ದಿಗ್ಬಂಧನ ವಿಧಿಸಿದೆ.
ಮದುವೆ ಮಂಟಪದಲ್ಲಿ ಚಿನ್ನಾಭರಣ ಕಳವು
ಬೆಂಗಳೂರು, ಏ. ೧೩: ಮದುವೆಗೆ ಕೆಲವೇ ನಿಮಿಷಗಳ ಮೊದಲು, ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ೨೭ ವರ್ಷದ ಖಾಸಗಿ ಕಂಪನಿ ಉದ್ಯೋಗಿ ಪೂರ್ಣಿಮಾ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಮಹಾಲಕ್ಷಿö್ಮ ಮಂಟಪದಲ್ಲಿ ಮಂಗಳಸೂತ್ರ ಧಾರಣೆಗಾಗಿ ಕೊಠಡಿಯಿಂದ ಹೊರಬಂದಿದ್ದರು. ಈ ವೇಳೆ ವಧುವಿನ ಕೊಠಡಿಯಲ್ಲಿದ್ದ ೧೦೨ ಗ್ರಾಮ್ ತೂಕದ ೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಶಾಸ್ತçದÀ ಕೆಲಸಗಳಿಗಾಗಿ ವಧು ಕೋಣೆಯಿಂದ ಹೊರಬಂದಿದ್ದಾರೆ. ಈ ಸಮಯದಲ್ಲಿ ಬ್ಯೂಟಿಶಿಯನ್ ಮಾತ್ರ ಅಲ್ಲಿದ್ದರು ಎಂಬುದಾಗಿ ಹೇಳಿದ್ದಾರೆ. ಆಭರಣಗಳನ್ನು ಧರಿಸಲು ಪೂರ್ಣಿಮಾ ತನ್ನ ಕೋಣೆಗೆ ತೆರಳಿದಾಗ ಅಲ್ಲಿ ಆಭರಣ ಕಾಣೆಯಾಗಿತ್ತು. ಭಾನುವಾರ ದೂರು ದಾಖಲಾದ ನಂತರ ಪೊಲೀಸರು ಸಮನ್ಸ್ ಪಡೆದ ಮೇಕಪ್ ಮಾಡಲು ಬಂದಿದ್ದ ನಿರಪರಾಧಿ ಎಂದು ಹೇಳಿದ್ದಾರೆ. ವಿವಾಹಕ್ಕೆ ಆಗಮಿಸಿದ ಆಹ್ವಾನಿತರ ವಿವರಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ.
ಸಿಎಂ.ಗೆ ಕಪ್ಪು ಬಾವುಟ ಪ್ರದರ್ಶನ
ಮಂಗಳೂರು, ಏ. ೧೩: ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹ ಹೆಚ್ಚಾಗಿದ್ದು, ಮಂಗಳೂರಿನಲ್ಲಿ ಇಂದು ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಬಂಟ್ವಾಳದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿಯವರು ಮಂಗಳೂರಿನಿAದ ವಾಹನದಲ್ಲಿ ತೆರಳುತ್ತಿದ್ದ ವೇಳೆ ದಾರಿಯುದ್ದಕ್ಕೂ ಎಸ್‌ಡಿಪಿಐ ಕಾರ್ಯಕರ್ತರು ವಳಚ್ಚಿಲ್?? ಬಳಿ ಪ್ರತಿಭಟನೆ ನಡೆಸಿದರು. ದಲಿತ ವಿರೋಧಿ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಧಿಕ್ಕಾರ, ಸಚಿವ ಕೆ.ಎಸ್?.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಸಿಎಂ ಬಂಟ್ವಾಳಕ್ಕೆ ಹೆದ್ದಾರಿಯಲ್ಲಿ ಸಾಗುವಾಗ ಕಪ್ಪು ಬಾವುಟ ಪ್ರದರ್ಶನವಾಗಿದೆ, ಕೂಡಲೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪ
ನವದೆಹಲಿ, ಏ. ೧೩: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯ, ಷಿಯೋಮಿ ಉಪಾಧ್ಯಕ್ಷ ಮನು ಕುಮಾರ್ ಜೈನ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಸಂಸ್ಥೆ ವಿದೇಶಕ್ಕೆ ಕೋಟ್ಯಂತರ ರೂಪಾಯಿ ಮೊತ್ತದ ಹಣ ಕಳಿಸಿರುವುದಕ್ಕೆ ಸಂಬAಧಿಸಿದAತೆ ಫೇಮಾ ಕಾಯ್ದೆಯಡಿ ಜಾರಿ ನಿರ್ದೇಶನಾಲಯ, ಸಂಸ್ಥೆ ಹಾಗೂ ಅದರ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಷಿಯೋಮಿಯ ಭಾರತದ ಮಾಜಿ ಮುಖ್ಯಸ್ಥರಾಗಿದ್ದ ಮನು ಕುಮಾರ್ ಜೈನ್ ಅವರಿಗೆ ಕಂಪನಿಗೆ ಸಂಬAಧಿಸಿದ ಆರ್ಥಿಕ ದಾಖಲೆಗಳನ್ನು ಖುದ್ದಾಗಿ ಬಂದು ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ ಸೂಚಿಸಿದೆ.
ರಾಮನವಮಿ ಸಂದರ್ಭ ಹಿಂಸಾಚಾರ - ನ್ಯಾಯಮಂಡಳಿ ಸ್ಥಾಪನೆ
ಭೋಪಾಲ್, ಏ. ೧೩: ರಾಮನವಮಿ ಸಂದರ್ಭದಲ್ಲಿ ಮಧ್ಯಪ್ರದೇಶದ ಖರಗೋನ್ನಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಗಲಭೆಕೋರರಿಂದ ಆದ ಹಾನಿ ವಸೂಲಿ ಮಾಡಲು ಮಧ್ಯಪ್ರದೇಶ ಸರ್ಕಾರವು ಇಬ್ಬರು ಸದಸ್ಯರ ನ್ಯಾಯಮಂಡಳಿಯನ್ನು ಸ್ಥಾಪನೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ನ್ಯಾಯಮಂಡಳಿ ಸ್ಥಾಪನೆಗೆ ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಧಿಸೂಚನೆಯ ಪ್ರಕಾರ, ಖಾರ್ಗೋನ್ ನಗರದಲ್ಲಿ ಭಾನುವಾರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಾನಿಯ ಮೌಲ್ಯಮಾಪನಕ್ಕೆ ಸಂಬAಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಕಾಯಿದೆ-೨೦೨೧ರ ನಿಬಂಧನೆಗಳ ಪ್ರಕಾರ ನ್ಯಾಯಮಂಡಳಿಯನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ. ತಾ. ೧೦ ರಂದು ಖರಗೋನ್ನಲ್ಲಿ ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದವು.