ಕೂಡಿಗೆ, ಏ. ೧೫: ಬದುಕಿನ ಮೌಲ್ಯಗಳನ್ನು ಸಾರುವ ಚಿಂತನೆಗಳನ್ನು ಧಾರ್ಮಿಕ ಮಹೋತ್ಸವದಂತಹ ಆಚರಣೆಯ ಮೂಲಕ ಒಂದೆಡೆ ಸೇರಿ ಆಚರಿಸುವಾಗ ಉತ್ತಮ ಸಂದೇಶಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಜಾತ್ರಾ ಮಹೋತ್ಸವಗಳ ಆಚರಣೆಯಿಂದ ಕೌಶಲ್ಯ, ಮನೋಸ್ತೆöÊರ್ಯ, ಐಕ್ಯತೆ, ಒಗ್ಗಟ್ಟು, ಸಂತೋಷ ಸಂಭ್ರಮದಿAದ ಪಾಲ್ಗೊಳ್ಳಲು ಸಹಕಾರಿಯಾಗುವುದು. ಇದರ ಮೂಲಕವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಜಿ. ಮಂಜುನಾಥ್ ಮಾತನಾಡಿ, ಯುವ ಜನಾಂಗ ಸಂಘಟಿತರಾದರೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಧನಾತ್ಮಕ ಚಿಂತನೆಗಳೊAದಿಗೆ ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಪೂರಕವಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಉದ್ಯಮಿ ರಾಜೇಂದ್ರ, ಕಾಡು ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ನಂಜುAಡಸ್ವಾಮಿ, ಕಣಿವೆಯ ಸಾಹಿತಿ ಭಾರಧ್ವಜ್, ಮಧುಕುಮಾರ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಅಧ್ಯಕ್ಷತೆಯನ್ನು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ವಹಿಸಿದ್ದರು.