ಶ್ರೀಮಂಗಲ, ಏ. ೧೫: ಸಾಮಾಜಿಕ ಜಾಲತಾಣಗಳಲ್ಲಿ ಕೊಡವರ ಬಗ್ಗೆ ಅವಹೇಳನಕಾರಿ ಸಂದೇಶ ಹರಿಬಿಟ್ಟು ಎರಡು ಜನಾಂಗದ ನಡುವೆ ದ್ವೇಷಕ್ಕೆ ಕಾರಣರಾದ ನಿವೃತ್ತ ಕ್ಯಾ. ವೈ.ಕೆ ಚೇತನ್ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಕೊಡವ ರೈಡರ್ಸ್ ಕ್ಲಬ್ ದೂರು ದಾಖಲಿಸಿದೆ.
ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಮತ್ತು ಉಪ ನಿರೀಕ್ಷಕ ಚಂದ್ರಪ್ಪ ಅವರು ದೂರು ಸ್ವೀಕರಿಸಿ, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
೩೦ಕ್ಕೂ ಅಧಿಕ ಮಂದಿ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟ್ಟಿರ ಪೃಥ್ವಿ ಸುಬ್ಬಯ್ಯ ನೇತೃತ್ವದಲ್ಲಿ ಬೈಕ್‌ನಲ್ಲಿ ತೆರಳಿ ದೂರು ನೀಡಿ ಕೂಡಲೇ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೊಡವ ರೈಡರ್ಸ್ ಕ್ಲಬ್ ನಿರ್ದೇಶಕ ಅಪ್ಪಂಡೇರAಡ ದೇವಯ್ಯ, ಮುರುವಂಡ ಸುಮಾ ಕುಟ್ಟಪ್ಪ, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮದ್ರೀರ ಪ್ರಿನ್ಸ್, ಅಯ್ಯಮಾಡ ಪೊನ್ನಣ್ಣ, ಅಜ್ಜಿಕುಟ್ಟೀರ ಗಾನ ಸುಬ್ಬಯ್ಯ, ಪಾಂಡAಡ ಮನವಿ ಮುತ್ತಮ್ಮ, ಕುಲ್ಲಚ್ಚೀರ ತಕ್ಷಿತ್ ತಮ್ಮಯ್ಯ, ಕುಲ್ಲಚ್ಚೀರ ತಾನಿಯಾ ಪೂವಮ್ಮ, ಗುಡಿಯಂಗಡ ಲಿಖಿನ್ ಬೋಪಣ್ಣ, ಮಾಣಿಪಂಡ ಬೋಪಣ್ಣ, ಸೋನಾ ಉತ್ತಪ್ಪ, ಮೋರ್ಕಂಡ ರತನ್ ಅಯ್ಯಪ್ಪ, ಮಾರ್ಚಂಡ ಪ್ರವೀಣ್ ಪೂವಣ್ಣ, ಕನ್ನಂಡ ಕಬೀರ್ ಉತ್ತಯ್ಯ, ಕಿರಿಯಮಾಡ ಮಿಲನ್ ಗಣಪತಿ, ಕೊಕ್ಕಂಡ ಜೈತ್ರ ಬೋಪಣ್ಣ, ಪೆಮ್ಮಂಡ ಸಚಿನ್ ಅಪ್ಪಣ್ಣ, ಅಕ್ಕಳತಂಡ ಜಿಯಾ, ನಾಗಂಡ ಶಿವಣ್ಣ ಮುದ್ದಪ್ಪ, ತೀತಿರ ರವಿ ತೇಜ, ಬಿದ್ದಂಡ ಗಾನ, ಕಾಕಮಾಡ ಶರತ್ ಮಾಚಯ್ಯ, ಜಗನ್ ಕಾರ್ಯಪ್ಪ, ಕೇತಿರ ವಿಲ್ಮಾ ಪೂಣಚ್ಚ, ಕುಪ್ಪಂಡ ಬಿದ್ದು ಮೊದಲಾದವರು ಇದ್ದರು.