ಶ್ರೀಮಂಗಲ, ಏ. ೧೩: ಒಂದು ಕಾಲದಲ್ಲಿ ಭದ್ರತಾ ಪಡೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡಿ ಹೆಸರುಗಳಿಸಿದ ೩೭ ಕೂರ್ಗ್ ಮೀಡಿಯಂ ರೆಜಿಮೆಂಟ್‌ನ ಹೆಸರನ್ನು ಉಳಿಸುವ ಸಲುವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ೩೭ ಕೂರ್ಗ್ ಮೀಡಿಯಂ ರೆಜಿಮೆಂಟ್ ಹೆಸರಿನ ಹ್ಯಾಟ್ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ವಿಕೇರ್ ಎಕ್ಸ್ ಸರ್ವೀಸ್ ಮ್ಯಾನ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಟಿ.ಶೆಟ್ಟಿಗೇರಿ ಮಾಜಿ ಸೈನಿಕ ಸಂಘದ ಕಾನೂನು ಸಲಹೆಗಾರರಾದ ಏರ್ ಫರ‍್ಸ್ನ ಸೀನಿಯರ್ ನಾನ್ ಕಮಿಷನ್ಡ್ ನಿವೃತ್ತ ಅಧಿಕಾರಿ ಮಂಡೇಟಿರ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು ಕೆಲವು ವರ್ಷಗಳ ಹಿಂದೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕೂರ್ಗ್ ರೆಜಿಮೆಂಟ್‌ಗೆ ಕೊಡಗಿನ ಯುವಕರು ಸೇರುತ್ತಿದ್ದರು. ಹಾಗೂ ಬಲಿಷ್ಠ ರೆಜಿಮೆಂಟ್ ಎಂಬ ಹೆಸರನ್ನು ಗಳಿಸಿತ್ತು. ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆಯಾಗಿದ್ದು, ಕೂರ್ಗ್ ರೆಜಿಮೆಂಟ್‌ಗೆ ಸೇರುವವರು ಕೂಡ ಕಡಿಮೆಯಾಗಿದ್ದಾರೆ. ಮೃತಪಟ್ಟ ಮಾಜಿ ಸೈನಿಕರ ಪತ್ನಿಯರಿಗೆ ಪೆನ್ಷನ್ ಸಿಗದೇ ತೊಂದರೆಯಾಗುತ್ತಿದ್ದು, ಆಧಾರ್ ಕಾರ್ಡ್, ಪಾನ್ ಕಾರ್ಡ್ನಲ್ಲಿರುವಂತೆಯೇ ಹೆಸರು ಬದಲಾವಣೆ ಮಾಡಿಕೊಂಡು ಮೂಲ ದಾಖಲಾತಿಯ ಪ್ರತಿಗಳನ್ನು ತಮ್ಮ ಸಂಸ್ಥೆಗೆ ಕಳುಹಿಸಿಕೊಟ್ಟರೆ ಪೆನ್ಷನ್ ಬರುವಂತೆ ಮಾಡಲು ಸಹಕರಿಸಲಾಗುವುದು. ಮೇ ೨೯ರಂದು ನಡೆಯುವ ಸಂತೋಷ ಕೂಟಕ್ಕೆ ರೂ. ೧೦ ಸಾವಿರÀ ದೇಣಿಗೆ ನೀಡುವುದಾಗಿ ಹೇಳಿದರು.
ಮಾಜಿ ಸೈನಿಕರು ಹಾಗೂ ಹಿರಿಯರಾದ ಕಾಳಿಮಾಡ ಮುತ್ತಣ್ಣ ಮಾತನಾಡಿ ಕೊಡಗಿನಲ್ಲಿ ಅತ್ಯುತ್ತಮ ಮಾಜಿ ಸೈನಿಕರ ಸಂಘ ಎಂದು ಹೆಸರು ಪಡೆದಿರುವ ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘವು ಹಲವು ಜನಪರ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಮೇ ೨೯ರಂದು ಮಾಜಿ ಸೈನಿಕರ ಸಂಸಾರಸ್ಥರೆಲ್ಲರೂ ಸೇರಿ ಸಂತೋಷ ಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಈ ಸಂದರ್ಭ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡುವುದರೊಂದಿಗೆ ತಾವು ರೂ. ೫೦೦೦ ದೇಣಿಗೆ ನೀಡುವುದಾಗಿ ಘೋಷಿಸಿದರು.
ಜಾಗ ಮಂಜೂರಾತಿಗೆ ಪ್ರಯತ್ನ
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡದೇ ಇರುವುದರ ಬಗ್ಗೆ ಉಸ್ತುವಾರಿ ಮಂತ್ರಿ ಬಿ.ಸಿ. ನಾಗೇಶ್ ಅವರೊಂದಿಗೆ ಚರ್ಚಿಸಲಾಗುವುದು. ತಕ್ಷಣವೇ ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡುವುದು ಸೇರಿದಂತೆ ಅವರ ಸಮಸ್ಯೆಗೆ ಸ್ಪಂದಿಸಬೇಕೆAದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ತಿಂಗಳಿಗೊAದು ಸಭೆ ನಡೆಸಿ ಮಾಜಿ ಸೈನಿಕರ ಕುಂದುಕೊರತೆ ಪರಿಹರಿಸಲು ಸೂಚನೆ ನೀಡಲಾಗಿದೆ. ಅದರಂತೆ ಜಾಗ ಇಲ್ಲದ ಮಾಜಿ ಸೈನಿಕರಿಗೆ ಮನೆ ನಿವೇಶನ ಕೊಡಲು ತೀರ್ಮಾನವಾಗಿದ್ದು, ತಾ. ೩೦ರೊಳಗೆ ಜಿಲ್ಲಾ ಸೈನಿಕ್ ಬೋರ್ಡ್ಗೆ ಅರ್ಜಿ ಸಲ್ಲಿಸಬಹುದು. ಸೈನಿಕ್ ಬೋರ್ಡ್ನ ಸದಸ್ಯರಾಗದವರು ತಕ್ಷಣ ಸದಸ್ಯರಾಗಲು ಹಾಗೂ ಈಗಿರುವ ಪಿ.ಪಿ.ಓ ಕಾರ್ಡ್ನ ಬದಲು ಇ.ಪಿ.ಪಿ.ಓ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮನ್ನೇರ ರಮೇಶ್, ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲAಡ ಸತೀಶ್, ಸ್ಥಾಪಕ ಅಧ್ಯಕ್ಷ ಚಟ್ಟಂಡ ಕಾರ್ಯಪ್ಪ, ನಿರ್ದೇಶಕರಾದ ಕೈಬಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ, ಮಾಚಮಾಡ ಮನು ಕುಶಾಲಪ್ಪ, ಮೀದೇರಿರ ಸುರೇಶ್, ಮಂದಮಾಡ ಗಣೇಶ್, ಚೊಟ್ಟೆಯಾಂಡಮಾಡ ಗೋಕುಲ ಹಾಜರಿದ್ದರು.ಏರ್ ಫರ‍್ಸ್ನ ಸೀನಿಯರ್ ನಾನ್ ಕಮಿಷನ್ಡ್ ನಿವೃತ್ತ ಅಧಿಕಾರಿ ಮಂಡೇಟಿರ ಸುಬ್ರಮಣಿ ಅವರು ಸಭೆಯಲ್ಲಿ ಒಂದು ವಿಶೇಷ ಮಾಹಿತಿ ನೀಡಿದರು. ಕೂರ್ಗ್ ರೆಜಿಮೆಂಟ್‌ನ ಪ್ರಸಿದ್ಧಿಯನ್ನು ಜನಪ್ರಿಯಗೊಳಿಸಲು ಕೊಡವ ಲಾಂಛನದೊAದಿಗೆ ಕೂರ್ಗ್ ರೆಜಿಮೆಂಟ್‌ನ ಲಾಂಛನವಿರುವ ಹ್ಯಾಟ್ ತಯಾರಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ ಸೇರಿದಂತೆ ವಿವಿಧೆಡೆ ಮಾರಾಟಕ್ಕೆ ಇq Àಲಾಗುವುದು. ಇದರ ಪ್ರಾಥಮಿಕ ಖರ್ಚುವೆಚ್ಚವನ್ನು ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಭರಿಸಲಿದ್ದಾರೆ ಎಂದರು.
ಸಭೆಯ ಬಳಿಕ “ಶಕ್ತಿ”ಯ ಪ್ರಶ್ನೆಗೆ ಮಂಡೇಟಿರ ಸುಬ್ರಮಣಿ ಈ ರೀತಿ ಪ್ರತಿಕ್ರಿಯಿಸಿದರು “ ಕೂರ್ಗ್ ಮೀಡಿಯಂ ರೆಜಿಮೆಂಟ್” ನಲ್ಲಿ ಕೊಡಗಿನವರೂ ಸೇರಿದಂತೆ ರಾಷ್ಟçದ ಇತರ ಕಡೆಗಳ ಯೋಧರೂ ಬಹಳಷ್ಟು ಮಂದಿಯಿದ್ದಾರೆ. ಕೊಡಗಿನಿಂದ ಇನ್ನೂ ಸಾಕಷ್ಟು ಯೋಧರು ಸೇರ್ಪಡೆ ಗೊಳ್ಳಬೇಕೆನ್ನುವ ಉದ್ದೇಶ ನಮ್ಮದು. ಈಗ ಅಲ್ಲಿ ರಾಷ್ಟçದ ಎಲ್ಲ ಕಡೆಯ ಯೋಧರಿದ್ದರೂ ಕೊಡಗಿನ ಹಬ್ಬಗಳಾದ ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಮೊದಲಾದ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ವಿಶೇಷವೆಂದರೆ, ಎಲ್ಲ ವರ್ಗದ ಯೋಧರೂ ಆ ಸಂದರ್ಭ ಕೊಡಗಿನ ಕುಪ್ಯಚಾಲೆ ಧರಿಸಿ ಕೊಡವರಂತೆಯೇ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುತ್ತಾರೆ. ಯೋಧರ ಪತ್ನಿಯರು, ಕುಟುಂಬಸ್ಥರು ಕೊಡವ ಸೀರೆಯನ್ನು ಧರಿಸಿ ಭಾಗವಹಿಸುವುದು ಒಂದು ವಿಶೇಷ. ಹೀಗಾಗಿ ಕೂರ್ಗ್ ಮೀಡಿಯಂ ರೆಜಿಮೆಂಟ್ ಯಾವಾಗಲೂ ಕೊಡಗಿನ ಗರಿಮೆಯನ್ನು ವೃದ್ಧಿಗೊಳಿಸುವ ಸೇನಾ ಕೇಂದ್ರವಾಗಿದೆ ಎಂದು ನಾವು ಹೆಮ್ಮೆ ಪಡಬೇಕಾಗಿದೆ”
ಕರ್ನಲ್ ಸುಬ್ಬಯ್ಯ
ಕೂರ್ಗ್ ರೆಜಿಮೆಂಟ್ ಕುರಿತು ಹೆಚ್ಚಿನ ಮಾಹಿತಿ ಬಯಸಿ “ಶಕ್ತಿ” ನಿವೃತ್ತ ಕರ್ನಲ್ ಕಂಡ್ರತAಡ ಸುಬ್ಬಯ್ಯ ಅವರನ್ನು ಸಂಪರ್ಕಿಸಿದಾಗ ಅವರು ನೀಡಿದ ಮಾಹಿತಿ ಹೀಗಿದೆ” ೧೮ ನೇ ಶತಮಾನದಲ್ಲಿಯೇ ಈ ರೆಜಿಮೆಂಟ್ ಸ್ಥಾಪನೆಗೊಂಡಿದೆ. ಪಂಜಾಬ್ ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಪ್ರಮುಖರಾದ ಕ್ಯಾ. ಕೆ.ಎ.ಪೊನ್ನಣ್ಣ, ಕರ್ನಲ್ ಅಪ್ಪಚ್ಚು ಮೊದಲಾದವರು ಸೇವೆ ಸಲ್ಲಿಸಿದ್ದಾರೆ. ಮನೆಯಪಂಡ, ಕೊರವಂಡ ಮೊದಲಾದ ಕುಟುಂಬಸ್ಥರೂ ಈ ರೆಜಿಮೆಂಟ್ ನಲ್ಲಿದ್ದರು. ಈ ರೆಜಿಮೆಂಟ್‌ನಲ್ಲಿರುವ ಯೋಧರು, ಅಧಿಕಾರಿಗಳೂ ರೆಜಿಮೆಂಟಲ್ ಸಮಾರಂಭಗಳಲ್ಲಿ ಕೊಡವ ಉಡುಪನ್ನೇ ಧರಿಸುತ್ತಾರೆ. ಎಲ್ಲ ಕೊಡವ ಹಬ್ಬಗಳನ್ನು ಆಚರಿಸುತ್ತಾರೆ. ಈ ಹಿಂದೆ ನಾಪೋಕ್ಲುವಿನಲ್ಲಿ ನಡೆದ ಕೊಡವ ಕುಟುಂಬ ಹಾಕಿಯಲ್ಲಿಯೂ ಪ್ರದರ್ಶನ ಪಂದ್ಯಾಟದಲ್ಲಿ ೩೭ ಕೂರ್ಗ್ ರೆಜಿಮೆಂಟ್-೧೧ ಎನ್ನುವ ತಂಡದೊAದಿಗೆ ಭಾಗವಹಿಸಿ ಇಂಡಿಯಾ-೧೧ ತಂಡದೊAದಿಗೆ ಪ್ರದರ್ಶನ ಪಂದ್ಯಾಟದಲ್ಲಿ ಕೂಡ ಅವರೆಲ್ಲ ಭಾಗವಹಿಸಿದ್ದಾರೆ”