ಮಡಿಕೇರಿ, ಏ. ೧೩: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಆರ್. ಸವಿತಾ ರೈ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಹೆಚ್.ಕೆ. ಜಗದೀಶ್, ಬಿ.ಜೆ. ಮಂಜು, ಕಾರ್ಯದರ್ಶಿಯಾಗಿ ಎ.ಎನ್. ವಾಸು, ಜೆ. ಪ್ರೇಮ್ಕುಮಾರ್, ಹೆಚ್.ಬಿ. ಯಶೋದ, ಖಜಾಂಚಿಯಾಗಿ ಪಿ.ಎ. ಆನಂದ್, ರಾಜ್ಯ ಸಮಿತಿ ಸದಸ್ಯರಾಗಿ ಟಿ.ಎನ್.ಮಂಜುನಾಥ್ ಅವರುಗಳು ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎ. ಆದಿತ್ಯ, ಕಿಶೋರ್ ರೈ, ನವೀನ್ ಸುವರ್ಣ, ರೇಖಾ ಗಣೇಶ್, ಎಸ್.ಪಿ. ಸುರ್ಜಿತ್ ಕುಮಾರ್, ರಘು ಹೆಬ್ಬಾಲೆ, ಚೆರಿಯಮನೆ ಸುರೇಶ್, ಎನ್. ವಿನಯ್, ಎಂ. ಮಲ್ಲಿಕಾರ್ಜುನ್, ಹೆಚ್.ಜೆ. ರಾಕೇಶ್, ಬಿ.ಕೆ. ಶಶಿಕುಮಾರ್ ರೈ, ಡಿ. ಸ್ಟಾö್ಯನ್ಲಿ, ಕೋಲತಂಡ ರಘು ಮಾಚಯ್ಯ, ಡಿ. ನಾಗೇಶ್, ಎಸ್.ಎ. ರಿಜ್ವಾನ್ ಹುಸೇನ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಕಳೆದ ಫೆ. ೭ ರಂದು ಚುನಾವಣೆ ನಡೆದಿದ್ದು, ತಡೆಯಾಜ್ಞೆಯಿಂದಾಗಿ ತಡೆ ಹಿಡಿಯಲ್ಪಟ್ಟಿದ್ದ ಫಲಿತಾಂಶವನ್ನು ನಿನ್ನೆ ಚುನಾವಣಾಧಿಕಾರಿ ಕೆ.ಕೆ. ದಿನೇಶ್ ಕುಮಾರ್ ಘೋಷಣೆ ಮಾಡಿದರು.