ಶನಿವಾರಸಂತೆ, ಏ. ೧೩: ಸಮೀಪದ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿಮಠ ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ತಾ. ೧೮ ರಂದು ನಡೆಯಲಿದೆ.
ಅಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿ ಕುಂಡೋತ್ಸವ. ೯ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, ೧೧ಕ್ಕೆ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ಸ್ವಾಮಿಯವರ ಚಂದ್ರಮAಡಲೋತ್ಸವ, ದಾಸೋಹ ಸೇವೆ ಹಾಗೂ ಸಂಜೆ ೫.೩೦ಕ್ಕೆ ಪ್ರಾಕಾರ ಪಲ್ಲಕ್ಕಿ ಉತ್ಸವ, ೬.೩೦ಕ್ಕೆ ಮಹಾರಥೋತ್ಸವ ನಂತರ ಮಹಾಮಂಗಳಾರತಿ ಜರುಗಲಿದೆ ಎಂದು ಮನೆಹಳ್ಳಿ ಮಠಾಧೀಶ ಮಹಾಂತಶಿವಲಿAಗ ಸ್ವಾಮೀಜಿ ಹಾಗೂ ಶ್ರೀ ತಪೋವನ ಕ್ಷೇತ್ರ ಅಭಿವೃದ್ಧಿ ಸೇವಾ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.