ಮಡಿಕೇರಿ, ಏ. ೧೩: ವೀರಾಜಪೇಟೆ ಬಳಿಯ ಕುಂಜಲಗೇರಿ ಗ್ರಾಮದಲ್ಲಿ ಚೊಟ್ಟೇರ ಕುಟುಂಬಸ್ಥರಿAದ ಎರಡು ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಮಾದೇರಪ್ಪ (ಮುತ್ತಪ್ಪ), ಪಾಷಾಣಮೂರ್ತಿ, ಗುಳಿಗ, ಕಾರೋಣ, ಕಲ್ಯಾಟಜ್ಜಪ್ಪ, ಮತ್ತು ಚಾಮುಂಡಿ ಕೋಲಗಳು ತಾ. ೨೫ ಮತ್ತು ೨೬ ರಂದು ನಡೆಯಲಿದೆ. ಮಾದೇರಪ್ಪ ವೆಳ್ಳಾಟಂ ೨೬ ಮಧ್ಯಾಹ್ನದವರೆಗೆ ನಡೆಯಲಿದೆ. ಭಕ್ತಾದಿಗಳಿಗೆ ಅನ್ನಸಂರ್ತಪಣೆ ಏರ್ಪಡಿಸಲಾಗಿದೆ.