ಕೂಡಿಗೆ, ಏ.೧೪: ಸರಕಾರ ಅದೇಶದಂತೆ ಕಾವೇರಿ ನೀರಾವರಿ ನಿಗಮದ ಸೂಚನೆಯಂತೆ ಹಾರಂಗಿ ಅಣೆಕಟ್ಟೆಯಿಂದ ಎರಡನೇ ಹಂತದ ೧೫ ದಿನಗಳವರೆಗೆ ಮುಖ್ಯ ನಾಲೆ ಸೇರಿದಂತೆ ಬಲ ದಂಡೆ ಮತ್ತು ಎಡದಂಡೆಯ ನಾಲೆಯ ಮೂಲಕ ನೀರನ್ನು ಹರಿ ಬಿಡಲಾಗಿದೆ. ಜಿಲ್ಲೆಯ ಗಡಿ ಭಾಗ ಸೇರಿದಂತೆ ಮೂರು ಜಿಲ್ಲೆಯ ಕೆರೆÀಕಟ್ಟೆಗಳು ತುಂಬಲು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಈ ವ್ಯಾಪ್ತಿಯ ರೈತರು ಹಂಗಾಮಿ ಬೆಳೆ ಬೆಳೆಯಲು ೧೫ ದಿನಗಳವರೆಗೆ ನೀರನ್ನು ಹರಿಸುವ ಯೋಜನೆ ಮೂಲಕ ಇಂದು ನಾಲೆಗೆ ನೀರನ್ನು ಬಿಡಲಾಗಿದೆ

ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ೮೦೦ ಕ್ಯೂಸೆಕ್ ನೀರನ್ನು ಬಿಟ್ಟು ಕಣಿವೆಯ ಸಮೀಪದ ಎಡ ದಂಡೆಯ ಮೂಲಕ ೨೫೦ ಕ್ಯೂಸೆಕ್, ಬಲ ದಂಡೆಯ ಮೂಲಕ ೫೫೦ ನೀರನ್ನು ಇಂದಿನಿAದ ಹರಿಸಲಾಗಿದೆ. ಎಂದು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ಸಿದ್ಧರಾಜ್ ತಿಳಿಸಿದ್ದಾರೆ.