ವೀರಾಜಪೇಟೆ, ಏ. ೧೩: ಸರ್ಕಾರಿ ಸೇವೆಗೆ ನಿಯೋಜನೆಗೊಂಡ ಪ್ರತಿಯೊಬ್ಬ ಸೇವಾ ನಿರತರು ತನ್ನ ಕರ್ತವ್ಯವನ್ನು ನಿಭಾಯಿಸಿದಲ್ಲಿ ಸಮಾಜ ಅಂತಹವರನ್ನು ಗೌರವಿಸುತ್ತದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಯೋಗಾನಂದ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಪೂಮಾಲೆ ಮಂದ್ ಆಡಳಿತ ಮಂಡಳಿಯ ವತಿಯಿಂದ ಪೂಮಾಲೆ ಮಂದ್‌ನಲ್ಲಿ ಆಯೋಜಿಸಲಾಗಿದ್ದ ನೂತನವಾಗಿ ನಿರ್ಮಾಣಗೊಂಡಿರುವ ಗ್ಯಾಲರಿ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಯೋಜನೆಗಳು ಸರ್ಕಾರದ ಅನುದಾನದಿಂದ ಅನುಷ್ಠಾನವಾಗಿದೆ. ಇದರ ಭಾಗವಾಗಿ ಆಡಳಿತ ಮಂಡಳಿಯ ನಿವೇಧನೆಗೆ ಅನುಗುಣವಾಗಿ ಸುಮಾರು ಮೂರು ಲಕ್ಷ ರೂಗಳ ವೆಚ್ಚದಲ್ಲಿ ಸುಸಜ್ಜಿತವಾದ ಗ್ಯಾಲರಿ ನಿರ್ಮಾಣವಾಗಿ ಇಂದು ಶಾಸಕದ್ವಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ಅಲ್ಲದೆ ಸರ್ಕಾರಿ ಕೆಲಸಗಳು ಚುರುಕುಗೊಳಿಸಬೇಕು. ಕಂದಾಯ ಇಲಾಖೆಯ ಸುಮಾರು ೨೬ ಕಾರ್ಯಕ್ರಮಗಳು ಗ್ರಾಮವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲಿದೆ. ಗ್ರಾಮಸ್ಥರು ನೀಡುವ ಅರ್ಜಿಯನ್ನು ಸ್ಥಳದಲ್ಲೆ ವಿಲೇವಾರಿ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಕೊಡಗಿನ ಧೀಮಂತ ಸಂಸ್ಕೃತಿಗಳ ಪ್ರತೀಕ ಮಂದ್‌ಗಳು. ಮಂದ್‌ಗಳು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಲಭಿಸುವ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಜ್ಯ ವಿಧಾನ ಪರಿಷತ್ತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಗ್ರಾಮ ಗ್ರಾಮದಲ್ಲಿ ಮಂದ್‌ಗಳಿವೆ. ಕೆಲವು ಸ್ಥಳಗಳಲ್ಲಿ ಶಿಥಿಲಗೊಂಡಿವೆ. ಕೆಲವು ಭಾಗದಲ್ಲಿ ಸುಸ್ಥಿತಿಯಲ್ಲಿವೆ. ಆದರೂ ಕೊಡಗಿನ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಾಂಪ್ರದಾಯಿಕವಾಗಿ ಕಾಣುವುದು ಮಂದ್‌ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ. ಆದುದರಿಂದ ಮಂದ್‌ಗಳ ಅಭಿವೃದ್ಧಿ ಮುಖ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನುದಾನ ಬಂದಲ್ಲಿ ಮಂದ್‌ಗಳ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಆರ್. ಯೋಗಾನಂದ, ಶಾಸಕ ಕೆ.ಜಿ.ಬೋಪಯ್ಯ ಮತ್ತು ರಾಜ್ಯ ವಿಧಾನ ಪರಿಷತ್ತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಪೂಮಾಲೆ ಮಂದ್ ಆಡಳಿತ ಮಂಡಳಿಯ ಅಧ್ಯಕ್ಷ ಅಜ್ಜನಿಕಂಡ ಸುಧೀರ್, ಮರಣ ನಿಧಿಯ ಅಧ್ಯಕ್ಷ ಚೆಂದAಡ ಪೊನ್ನಪ್ಪ, ಉಪಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ತಕ್ಕರುಗಳಾದ, ಕೂಳುವಂಡ ಕಾರ್ಯಪ್ಪ, ಮುಕ್ಕಾಟೀರ ಮುತ್ತು ಅವರುಗಳು ಉಪಸ್ಥಿತರಿದ್ದರು. ಪೂಮಾಲೆ ಮಂದ್ ಆಡಳಿತ ಮಂಡಳಿಯ ಸದಸ್ಯರು, ಪೂಮಾಲೆ ಮಂದ್‌ಗೆ ಸಂಬAಧಿಸಿದ ೧೬ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹಾಜರಿದ್ದರು.