ಕಣಿವೆ, ಏ. ೧೩: ಹಾರಂಗಿ ಯಿಂದ ಗೊಂದಿಬಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಗೊಂದಿಬಸವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಗೊಂದಿಬಸವನಹಳ್ಳಿ ಗ್ರಾಮದ ವಾರ್ಡ್ ಸದಸ್ಯ ಜಿ.ಬಿ. ಜಗದೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಡಿವ ನೀರಿಗಾಗಿ ಪ್ರತಿಭಟನಾ ಕಾರರು ಒತ್ತಾಯಿಸಿದರು. ಕಾವೇರಿ ನೀರನ್ನು ಮೈಸೂರು, ಬೆಂಗಳೂರಿಗರು ಕುಡಿಯುತ್ತಿದ್ದಾರೆ. ಕಣಿವೆ, ಏ. ೧೩: ಹಾರಂಗಿ ಯಿಂದ ಗೊಂದಿಬಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಗೊಂದಿಬಸವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಗೊಂದಿಬಸವನಹಳ್ಳಿ ಗ್ರಾಮದ ವಾರ್ಡ್ ಸದಸ್ಯ ಜಿ.ಬಿ. ಜಗದೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಡಿವ ನೀರಿಗಾಗಿ ಪ್ರತಿಭಟನಾ ಕಾರರು ಒತ್ತಾಯಿಸಿದರು. ಕಾವೇರಿ ನೀರನ್ನು ಮೈಸೂರು, ಬೆಂಗಳೂರಿಗರು ಕುಡಿಯುತ್ತಿದ್ದಾರೆ. ಟ್ಯಾಂಕ್ ನಿರ್ಮಿಸಲಾಗಿದೆ. ಗೊಂದಿಬಸವನಹಳ್ಳಿ ವ್ಯಾಪ್ತಿಯಲ್ಲಿ ೩ ಸಾವಿರ ಮೀ ವ್ಯಾಪ್ತಿಯವರೆಗೆ ಪೈಪ್‌ಲೈನ್ ಕೆಲಸ ಮಾಡಲಾಗಿದೆ. ಆದರೆ ಹಾರಂಗಿಯಿAದ ನೀರಿನ ಸಂಪರ್ಕವನ್ನು ಪಡೆಯಲು ಮುಂದಾದಾಗ ಅತ್ತೂರು ಗ್ರಾಮದ ನಿವಾಸಿಗಳು ವಿರೋಧ ವ್ಯಕ್ತಪಡಿಸು ತ್ತಿದ್ದಾರೆ. ಗೊಂದಿಬಸವನ ಹಳ್ಳಿ ಈಗಾಗಲೇ ನೀರಿಗಾಗಿ ಹಾಹಾಕರ ವಿದ್ದು, ಆದಷ್ಟು ಬೇಗನೇ ಗೊಂದಿಬಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ.ಪಂ ಮಾಜಿ ಸದಸ್ಯೆಯೂ ಆದ ಗ್ರಾಮದ ನಿವಾಸಿ ನಂಜಮ್ಮ ಮಾತನಾಡಿ, ಗೊಂದಿ ಬಸವನಹಳ್ಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆಯಿದೆ. ಟ್ಯಾಂಕರ್‌ನಲ್ಲಿ ನೀರನ್ನು ಹಿಡಿಯಬೇಕಾಗಿದೆ. ಆದ್ದರಿಂದ ಹಾರಂಗಿಯಿAದ ಕುಡಿಯುವ ನೀರು ಒದಗಿಸಿಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭ ಮುಳ್ಳುಸೋಗೆ ಗ್ರಾ.ಪಂ ಸದಸ್ಯರಾದ ಕುಮಾರ್ ಹಾಗೂ ಮಲ್ಲಿಗೆ ಅವರು ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗೊಂದಿ ಬಸವನಹಳ್ಳಿ ಗ್ರಾಮದ ೫೦ ಕ್ಕೂ ಹೆಚ್ಚು ಜನರು ಇದ್ದರು.