ಮಡಿಕೇರಿ, ಏ. ೧೩: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ವೀಕ್ಷಣೆಗೆ ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ ವ್ಯವಹರಿಸುವುದಾಗಿ ಎಂ.ಎಲ್.ಸಿ ವೀಣಾ ಅಚ್ಚಯ್ಯ ಅವರು ತಿಳಿಸಿದ್ದಾರೆ.
ಕೊಡಗು ಸೈನಿಕ ಪರಂಪರೆಗೆ ಹೆಸರಾಗಿದ್ದು ಜನರಲ್ ತಿಮ್ಮಯ್ಯ ಅವರಂತಹ ವೀರ ಸೇನಾನಿಗಳು ಮಕ್ಕಳಿಗೆ ಪ್ರೇರಣೆಯಾಗಲಿದ್ದಾರೆ. ಇದಕ್ಕೆ ಪೂರಕವಾಗುವಂತೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮ್ಯೂಸಿಯಂಗೆ ಉಚಿತವಾಗಿ ಪ್ರವೇಶ ಕಲ್ಪಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಶುಲ್ಕ ಪಾವತಿಸ ಬೇಕಾಗಿದೆ.
ಇಂದು ಮ್ಯೂಸಿಯಂಗೆ ವೀಣಾ ಅವರು ಪರಿಶೀಲನೆಗೆ ತೆರಳಿದ ಸಂದರ್ಭ ಮಡಿಕೇರಿಯ ಸಂತ ಮೈಕಲರ ಶಾಲೆಯ ಸುಮಾರು ೨೫೦ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಅಚಾನಕ್ ಆಗಿ ವಿದ್ಯಾರ್ಥಿಗಳು ಹಾಗೂ ಶಾಸಕಿ ಇಲ್ಲಿ ಭೇಟಿಯಾಗಿದ್ದು ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ತಲಾ ರೂ.೧೫ ರಂತೆ
(ಮೊದಲ ಪುಟದಿಂದ) ತಾವೇ ಪಾವತಿಸಿದ ಅವರು ಬಳಿಕ ಈ ಬಗ್ಗೆ (ಮೊದಲ ಪುಟದಿಂದ) ತಾವೇ ಪಾವತಿಸಿದ ಅವರು ಬಳಿಕ ಈ ಬಗ್ಗೆ ಪ್ರೇರಣಾತ್ಮಕ ಸ್ಥಳವಾಗಿದೆ. ಇದನ್ನು ವೀಕ್ಷಿಸಿದರೆ ವಿದ್ಯಾರ್ಥಿಗಳಿಗೆ ಸಣ್ಣ ಪ್ರಾಯದಲ್ಲಿಯೇ ಸೇನೆ-ದೇಶಭಕ್ತಿಯ ಬಗ್ಗೆ ಆಸಕ್ತಿ ಮೂಡಲಿದೆ. ಈ ನಿಟ್ಟಿನಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಅವಕಾಶ ನೀಡುವಂತೆ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸುವದಾಗಿ ವೀಣಾ ‘ಶಕ್ತಿ’ಗೆ ತಿಳಿಸಿದರು.