ಮಡಿಕೇರಿ, ಏ. ೧೩: ಭಾಗಮಂಡಲ ಬಳಿಯ ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ನಿಶಾನೆಮೊಟ್ಟೆಯಲ್ಲಿ ನಡೆಯುತ್ತಿದ್ದ ಹರಳುಕಲ್ಲು ದಂಧೆ ಬೆಳಕಿಗೆ ಬಂದು ಅರಣ್ಯ ಇಲಾಖೆ ವತಿಯಿಂದ ಕ್ರಮ ಜರುಗುತ್ತಿರುವಾಗಲೇ ದಂಧೆಕೋರರು ಇತ್ತ ಕೊಡಗು-ದ.ಕನ್ನಡ ಗಡಿಭಾಗವಾದ ಸುಟ್ಟತ್ ಮಲೆಯಲ್ಲಿ ಅಕ್ರಮ ಗಣಿಗಾರಿಕೆ ಆರಂಭಿಸಿದ್ದಾರೆ. ದಟ್ಟಾರಣ್ಯದ ನಡುವೆ ೮ ಕಡೆಗಳಲ್ಲಿ ಹೊಂಡಗಳನ್ನು ಕೊರೆದು ಲಕ್ಷಾಂತರ ಮೌಲ್ಯದ ಹರಳು ಕಲ್ಲುಗಳನ್ನು ದೋಚಲಾಗಿದೆ.

ಮಡಿಕೇರಿ ವನ್ಯಜೀವಿ ಉಪವಿಭಾಗದ ಪುಷ್ಪಗಿರಿ ಅಭಯಾರಣ್ಯದ ಸರಹದ್ದು, ದ. ಕನ್ನಡ ಉಪ ಅರಣ್ಯ ಸುಬ್ರಹ್ಮಣ್ಯ ವಲಯದ ಗಡಿ ಪ್ರದೇಶದ ಕೊಲ್ಲಿಮೊಗರು ಸೆಕ್ಷನ್‌ಗೆ ಒಳಪಡುವ ಸುಟ್ಟತ್ ಮಲೆಯಲ್ಲಿ ಮತ್ತೆ ಹರಳುಕಲ್ಲು ದಂಧೆ ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ೧೫ ವರ್ಷಗಳಿಂದ ಸುಟ್ಟತ್ ಮಲೆ ಹಾಗೂ ಸನಿಹದ ಕೂಜಿಮಲೆಯಲ್ಲಿ ಹರಳುಕಲ್ಲು ದಂಧೆ ನಡೆಯುತ್ತಿದ್ದು, ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿದೆ.

(ಮೊದಲ ಪುಟದಿಂದ)

೮ ಕಡೆಗಳಲ್ಲಿ ಹೊಂಡ

ನಿಶಾನಿಮೊಟ್ಟೆಯಿAದ ನಂತರದ ಗಡಿ ಪ್ರದೇಶದಲ್ಲಿರುವ ಸುಟ್ಟತ್ ಮಲೆ ಬೆಟ್ಟಪ್ರದೇಶದಲ್ಲಿ ಹರಳು ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ದಟ್ಟಾರಣ್ಯದ ನಡುವೆ ನಿಕ್ಷೇಪ ಇರುವ ಸ್ಥಳದಲ್ಲಿ ಎಂಟು ಹೊಂಡಗಳನ್ನು ಕೊರೆದು ಹರಳು ಕಲ್ಲು ದೋಚಲಾಗಿದೆ. ಇಲ್ಲಿನ ಎರಡು ಎಕರೆ ಪ್ರದೇಶದಲ್ಲಿ ಸುಮಾರು ೬೦ಕ್ಕೂ ಅಧಿಕ ಹೊಂಡಗಳಿದ್ದು, ಈ ಹಿಂದೆ ನಡೆದಂತಹ ಅಕ್ರಮ ಗಣಿಗಾರಿಕೆಗೆ ಸಾಕ್ಷಿಯಾಗಿವೆ.

ಆರೋಪಿಗಳು ಪರಾರಿ

ಅರಣ್ಯದಲ್ಲಿ ಹರಳುಕಲ್ಲು ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ವಯ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಸುಳಿವರಿತ ದಂಧೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿ ಗಣಿಗಾರಿಕೆಗೆ ಬಳಸಲಾದ ಪರಿಕರಗಳು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.

ಜಿಲ್ಲೆಯ ದಂಧೆಕೋರರು ಭಾಗಿ

ಗಡಿ ಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವವರೇ ಭಾಗಿಯಾಗಿರುವ ಬಗ್ಗೆ ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ನಿಶಾನೆಮೊಟ್ಟೆಯಲ್ಲಿ ನಡೆದ ದಂಧೆಗೆ ಸಂಬAಧಿಸಿದAತೆ ಇಲಾಖಾಧಿಕಾರಿಗಳು ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ದಂಧೆಕೋರರು ಸದ್ದಿಲ್ಲದೆ ಸುಟ್ಟತ್‌ಮಲೆ ಏರಿರುವುದಾಗಿ ಹೇಳಲಾಗುತ್ತಿದೆ..!

ದ.ಕನ್ನಡ-ಕೊಡಗು ಅಧಿಕಾರಿಗಳ ಸಭೆ

ಹರಳು ಕಲ್ಲು ದಂಧೆ ನಡೆದಿರುವ ಬಗ್ಗೆ ವಿಷಯ ತಿಳಿದ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅರಣ್ಯ ಇಲಾಖಾಧಿಕಾರಿಗಳು, ಪೊಲೀಸರು, ಸಾರ್ವಜನಿಕರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಅಕ್ರಮ ಹರಳುಕಲ್ಲು ದಂಧೆ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಹಿರಿಯ ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿ ಕ್ರಮಕೈಗೊಳ್ಳಲು ಒತ್ತಾಯ ಮಾಡಲಾಗುವುದು. ನಿಕ್ಷೇಪ ಇರುವ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ಮೂಲಭೂತ ವ್ಯವಸ್ಥೆ, ಆಧುನಿಕ ಶಸ್ತಾçಸ್ತç, ಸೂಕ್ತ ವೇತನ ನೀಡಬೇಕೆಂದು ಕೋರಲಾಗುವುದು. ಅಲ್ಲದೆ ಶೀಘ್ರದಲ್ಲೇ ಕೊಡಗು ಮತ್ತು ದ. ಕನ್ನಡ ಜಿಲ್ಲಾ ಅರಣ್ಯ ಅಧಿಕಾರಿಗಳ ಸಭೆ ಕರೆದು ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ?ಸಂತೋಷ್, ಸುಧೀರ್ ಹೊದ್ದೆಟ್ಟಿ