ಕೋವರ್ ಕೊಲ್ಲಿ ಇಂದ್ರೇಶ್ ಮಡಿಕೇರಿ, ಏ. ೧೩: ಕೋವಿಡ್ ಸಂಕಷ್ಟದಿAದ ಜಿಲ್ಲೆಯಲ್ಲಿ ಕಳೆದ ವರ್ಷ ಲಾಕ್‌ಡೌನ್ ಘೋಷಿಸ ಲಾಗಿತ್ತು. ಬಹುತೇಕ ವ್ಯಾಪಾರ ವಹಿವಾಟು ಕುಂಠಿತಗೊAಡಿತ್ತು. ಪ್ರವಾಸಿಗರ ಆಗಮನವಿಲ್ಲದೆ ಹೊಟೇಲ್, ಹೋಂ ಸ್ಟೇ ಗಳೂ ಕೋವರ್ ಕೊಲ್ಲಿ ಇಂದ್ರೇಶ್

ಮಡಿಕೇರಿ, ಏ. ೧೩: ಕೋವಿಡ್ ಸಂಕಷ್ಟದಿAದ ಜಿಲ್ಲೆಯಲ್ಲಿ ಕಳೆದ ವರ್ಷ ಲಾಕ್‌ಡೌನ್ ಘೋಷಿಸ ಲಾಗಿತ್ತು. ಬಹುತೇಕ ವ್ಯಾಪಾರ ವಹಿವಾಟು ಕುಂಠಿತಗೊAಡಿತ್ತು. ಪ್ರವಾಸಿಗರ ಆಗಮನವಿಲ್ಲದೆ ಹೊಟೇಲ್, ಹೋಂ ಸ್ಟೇ ಗಳೂ ಸಾಧಿಸಲಾಗಿದೆ. ೨೦೧೯ -೨೦ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೯,೯೭,೦೪೧ ಪೆಟ್ಟಿಗೆಗಳಷ್ಟು ಮದ್ಯ ಮಾರಾಟ ವಾಗಿದ್ದು ೩,೫೪,೫೫೨ ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿತ್ತು. ೨೦೨೦-೨೧ ನೇ ಹಣಕಾಸು ವರ್ಷದಲ್ಲಿ ಒಟ್ಟು ೮,೮೪,೭೮೦ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು ೩,೧೨,೭೮೯ ಪೆಟ್ಟಿಗೆ ಗಳಷ್ಟು ಬಿಯರ್ ಮಾರಾಟ ಆಗಿತ್ತು. ಇದು ಹಿಂದಿನ ಸಾಲಿಗೆ ಹೋಲಿಸಿದರೆ ಶೇ. ೧೨ ರಷ್ಟು ಕುಸಿತ ಆಗಿದೆ. ಆದರೆ ಕಳೆದ ಮಾರ್ಚ್ ೩೧ ಕ್ಕೆ ಕೊನೆಗೊಂಡ ೨೦೨೧-೨೨ ನೇ ಹಣಕಾಸು ವರ್ಷದಲ್ಲಿ ಒಟ್ಟು ೯,೮೦,೨೬೨ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು ೩,೪೮,೫೨೬ ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿ ಹಿಂದಿನ ವರ್ಷಕ್ಕಿಂತ ಶೇ. ೧೦ ರಷ್ಟು ಏರಿಕೆ ದಾಖಲಾಗಿದೆ.ಜಿಲ್ಲೆಯ ಆರ್ಥಿಕತೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನಬಹುದು. ಕಳೆದ ಹಣಕಾಸು ವರ್ಷದ ಒಟ್ಟು ಮಾರಾಟದಲ್ಲಿ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೨,೨೩,೨೫೨ ಪೆಟ್ಟಿಗೆ ಮದ್ಯ ಮತ್ತು ೯೫,೪೪೭ ಪೆಟ್ಟಿಗೆ ಗಳಷ್ಟು ಬಿಯರ್ ಮಾರಾಟವಾಗಿದೆ. ಇದು ಹಿಂದಿನ ವರ್ಷಕ್ಕಿಂತ ೨೮೮೮೨ ಪೆಟ್ಟಿಗೆ ಮದ್ಯ ಮತ್ತು ೯೯೮೫ ಪೆಟ್ಟಿಗೆಗಳಷ್ಟು ಬಿಯರ್ ಹೆಚ್ಚು ಮಾರಾಟವಾಗಿದೆ. ಅವಿಭಜಿತ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೩,೮೮,೩೦೮ ಪೆಟ್ಟಿಗೆ ಮದ್ಯ ಹಾಗೂ ೧,೧೮,೯೨೬ ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ ೩೧,೦೮೫ಪೆಟ್ಟಿಗೆ ಮದ್ಯ ಮತ್ತು ೧೦,೯೯೩ ಪೆಟ್ಟಿಗೆ ಬಿಯರ್ ಹೆಚ್ಚಾಗಿ ಮಾರಾಟ ವಾಗಿದೆ. ಅವಿಭಜಿತ ಸೋಮವಾರ ಪೇಟೆ ತಾಲೂಕಿನಲ್ಲಿ ೩,೬೮,೭೦೨ ಪೆಟ್ಟಿಗೆಗಳಷ್ಟು ಮದ್ಯ ಹಾಗೂ ೧,೩೪,೧೫೬ ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ ೩೫,೫೧೫ ಪೆಟ್ಟಿಗೆ ಮದ್ಯ ಮತ್ತು ೧೪,೭೫೯ ಪೆಟ್ಟಿಗೆ ಬಿಯರ್ ಹೆಚ್ಚಾಗಿ ಮಾರಾಟವಾಗಿದೆ.

ಕೊಡಗು ಜಿಲ್ಲೆಯಲ್ಲಿ ವಿವಿಧ ಪರವಾನಗಿ ಹೊಂದಿರುವ ಒಟ್ಟು ೨೩೧ ಮದ್ಯ ಮಾರಾಟ ಸ್ಥಳಗಳಿವೆ. ಇದರಲ್ಲಿ ೬೬ ಬಾರ್ ಮತ್ತು ರೆಸ್ಟೋರೆಂಟ್, ೮೭ ವೈನ್ ಶಾಪ್‌ಗಳು, ಎಂಎಸ್‌ಐಎಲ್ ನ ೧೦ ಮಾರಾಟ ಮಳಿಗೆಗಳು, ೨೦ ರಿಕ್ರಿಯೇಷನ್ ಕ್ಲಬ್‌ಗಳು, ೪೦ ಮದ್ಯ ಪರವಾನಗಿ ಹೊಂದಿರುವ ವಸತಿ ಸೌಕರ್ಯದ ಹೊಟೇಲ್‌ಗಳು ಇವೆ.