ಮಡಿಕೇರಿ, ಏ. ೧೨: ಕೇರಳ ರಾಜ್ಯಕ್ಕೆ ಅಕ್ರಮವಾಗಿ ಯೂರಿಯ ರಸಗೊಬ್ಬರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೃಷಿ ಇಲಾಖೆ ಅಧಿಕಾರಿ ಪತ್ತೆ ಹಚ್ಚಿದ್ದು, ಈ ಸಂಬAಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕ ರಫೀಕ್ ಎಂಬಾತ ಬಂಧಿತ ಆರೋಪಿ, ಕುಶಾಲನಗರದ ಹೆಬ್ಬಾಲೆ ಗ್ರಾಮದ ನಟರಾಜು ಎಂಬವರ ಮಾಲೀಕತ್ವರ ಬನಶಂಕರಿ ಆಗ್ರೋ ಟ್ರೇರ‍್ಸ್ ಗೋದಾಮಿನಿಂದ ರಾತ್ರಿ ಗೂಡ್ಸ್ ವಾಹನಗಳಲ್ಲಿ ಯೂರಿಯ ಗೊಬ್ಬರ ತುಂಬುತ್ತಿದ್ದ ಬಗ್ಗೆ ಸಹಾಯಕ ಕೃಷಿ ಅಧಿಕಾರಿ ಅಹಮ್ಮದ್ ಷರೀಫ್ ಅವರಿಗೆ ಖಚಿತ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ತೆರಳಿ ಗಮನಿಸಿದಾಗ ಕುಶಾಲನಗರದ ಕೈಗಾರಿಕ ಬಡಾವಣೆಯಲ್ಲಿರುವ ಮರದ ಮಿಲ್ಲಿನ ಒಳಗಡೆ ನಿಲ್ಲಿಸಿದ್ದ ಲಾರಿಗೆ ಗೂಡ್ಸ್ ವಾಹನದಲ್ಲಿದ್ದ ಯೂರಿಯ ಗೊಬ್ಬರವನ್ನು ಲೋಡ್ ಮಾಡುತ್ತಿರುವುದು ತಿಳಿದು ಬಂದಿದೆ. ನಂತರ ಲಾರಿಯನ್ನು ಕುಶಾಲನಗರದಿಂದ ಹಿಂಬಾಲಿಸಿಕೊAಡು ಬಂದು ಮಡಿಕೇರಿಯ ಸುದರ್ಶನ ವೃತ್ತದಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ೩೦೦ ಚೀಲಗಳಷ್ಟು ಅಕ್ರಮವಾಗಿ ಯೂರಿಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೃಷಿ ಇಲಾಖೆ ಅಧಿಕಾರಿ ಅಹಮ್ಮದ್ ಷರೀಫ್ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಲಾರಿ ಹಾಗೂ ಗೊಬ್ಬರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣವನ್ನು ಕುಶಾಲನಗರ ಠಾಣೆಗೆ ವರ್ಗಾಹಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.