ಶನಿವಾರಸಂತೆ, ಏ. ೧೦: ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಳಿ ಗ್ರಾಮದ ರೈತ ವಿವಾಹಿತ ಮೋಹನ್ (೩೮) ಶನಿವಾರ ತಮ್ಮ ಹೊಲಕ್ಕೆ ಸ್ಪಿçಂಕ್ಲರ್ ಪೈಪನ್ನು ಜೋಡಿಸಲು ತೆರಳಿದ್ದ ವೇಳೆ ಅವರಿಗೆ ವಿಷದ ಹಾವು ಕಚ್ಚಿದ್ದು, ತಕ್ಷಣ ಅವರನ್ನು ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಅವರ ಕಾರಿನಲ್ಲಿ ಚಿಕಿತ್ಸೆಗೆ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗದೆ ಕೊನೆಯುಸಿರೆಳೆದಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.