ಮಡಿಕೇರಿ, ಏ. ೧೦: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿ ೨೦೨೨-೨೩ನೇ ಸಾಲಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು/ಜೀಪು) ಹಾಗೂ ಭಾರೀ ವಾಹನ (ಬಸ್ಸು) ಚಾಲನ ತರಬೇತಿ ಜೊತೆಗೆ ವಾಹನ ಚಾಲನಾ ಪರವಾನಗಿ ನೀಡುವ ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ನೀಡುವ ಸಲುವಾಗಿ ಆಸಕ್ತ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ ಮತ್ತು ಆಪ್ಲೈನ್ ಅರ್ಜಿ ಸಲ್ಲಿಸಲು ತಾ. ೨೦ ಕೊನೆಯ ದಿನವಾಗಿದೆ. ವಾಹನ ತರಬೇತಿಯನ್ನು ಪಡೆಯಲು ಕೆಲವೊಂದು ಮಾಹಿತಿ ನೀಡಲಾಗಿದ್ದು, ಲಘು ವಾಹನ ಚಾಲನಾ ತರಬೇತಿ (ಕಾರ್/ಜೀಪ್) ಪಡೆಯಲು ಕನಿಷ್ಟ ೧೮ ವರ್ಷ ವಯಸ್ಸಾಗಿರಬೇಕು. ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಶಾಲಾ ವರ್ಗವಣಾ ಪ್ರಮಾಣಪತ್ರ ಅಥವಾ ನೋಟರಿಯಿಂದ ಪ್ರಮಾಣಪತ್ರ ಇರಬೇಕು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ-೫ ಇರಬೇಕು.
ಭಾರೀ ವಾಹನ ಚಾಲನಾ ತರಬೇತಿ ಪಡೆಯಲು ಕನಿಷ್ಟ ೨೦ ವರ್ಷ ಆಗಿರಬೇಕು. ಲಘು ವಾಹನಾ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರೈಸಿರಬೇಕು. ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣಪತ್ರ(ಟಿ.ಸಿ) ಅಥವಾ ನೋಟರಿಯಿಂದ ಪ್ರಮಾಣಪತ್ರ, ಆಧಾರ್ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ-೫ ನ್ನು ಲಗತ್ತಿಸಬೇಕು.
ತರಬೇತಿಯನ್ನು ಬೆಂ.ಮ.ಸಾ.ಸA. ತರಬೇತಿ ಕೇಂದ್ರ, ವಡ್ಡರಹಳ್ಳಿ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ-೫೬೨೧೩ ಇಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು/ ಭಾರೀ ವಾಹನ ತರಬೇತಿ (೩೦ ದಿನಗಳು) ಮತ್ತು ತರಬೇತಿಯ ಅವಧಿಯಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಕಚೇರಿಯಿಂದ ಹಾಗೂ ನಿಗಮದ ವೆಬ್ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ. gov.iಟಿ/ಞmvsಣಜಛಿಟ. ನಿಂದ ಪಡೆಯಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.