ಮಡಿಕೇರಿ, ಏ.೯: ಮಡಿಕೇರಿಯ ಲೀಡ್ ಬ್ಯಾಂಕ್ ಪ್ರಬಂಧಕರಾಗಿರುವ ಲೇಖಕ ಆರ್.ಕೆ.ಬಾಲಚಂದ್ರ ಅವರಿಗೆ ಈ ಸಾಲಿನ ಪ್ರತಿಷ್ಟಿತ ಪ್ರೊ.ಎಚ್ ಎಸ್ ಕೆ ಶತಮಾನೋತ್ಸವ ಪ್ರಶಸ್ತಿ ಲಭಿಸಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಪ್ರಗತಿಪರ ಪ್ರಕಾಶನ ಮತ್ತು ಭಾರತೀಯ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ವತಿಯಿಂದ ಈ ಪ್ರಶಸ್ತಿಯನ್ನು ಬಾಲಚಂದ್ರ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ತಾ. ೧೭ ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿತವಾಗಿದೆ.
ಶಿರಸಿ ಮೂಲದ ಆರ್.ಕೆ. ಬಾಲಚಂದ್ರ ೩೮ ವರ್ಷಗಳಿಂದ ಬ್ಯಾಂಕಿAಗ್ ಸೇವೆಯಲ್ಲಿದ್ದು ಪ್ರಸ್ತುತ ಮಡಿಕೇರಿಯ ಲೀಡ್ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಕನ್ನಡದಲ್ಲಿ ಹಾಗೂ ಬಡ ಮಕ್ಕಳ ಉದ್ಯೋಗಕ್ಕೆ ಸಂಬAಧಿಸಿದAತೆ ವಿಶೇಷ ಆಸಕ್ತಿ ವಹಿಸಿ ರಾಜ್ಯಾದ್ಯಂತ ಉಚಿತ ತರಬೇತಿಯ ಸಂಘಟನೆ ಮಾಡಿರುವ ಬಾಲಚಂದ್ರ ಈವರೆಗೆ ೯ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದ ಜೊತೆಗೆ ಗ್ರಾಮೀಣ ಅಭಿವೃದ್ಧಿ, ಕೃಷಿ, ಮಹಿಳಾ ಸಬಲೀಕರಣ, ಸಂಶೋಧನೆ, ನಿರುದ್ಯೋಗ ನಿವಾರಣೆ, ಅಕ್ಷರ ಕಲಿಕೆ, ಬರಹದ ಮೂಲಕ ಬ್ಯಾಂಕಿAಗ್ ಜಾಗೃತಿ, ಚಟುವಟಿಕೆಗಳನ್ನೂ ಹಮ್ಮಿಕೊಂಡಿದ್ದಾರೆ.