*ಗೋಣಿಕೊಪ್ಪ, ಏ. ೯: ಅಂರ‍್ರಾಷ್ಟಿçÃಯ ಕೃಷ್ಣ ಪ್ರಜ್ಞಾ ಸಂಘ ಇಸ್ಕಾನ್ ಆಯೋಜನೆಯಲ್ಲಿ ಶ್ರೀ ರಾಮ ವಿಜಯ ರಥೋತ್ಸವ ತಾ. ೧೦ರಂದು (ಇಂದು) ಗೋಣಿಕೊಪ್ಪದಲ್ಲಿ ನಡೆಯಲಿದೆ ಎಂದು ರಥೋತ್ಸವ ಕಾರ್ಯಕ್ರಮದ ಸಂಚಾಲಕ ಇಸ್ಕಾನ್ ಸಂಸ್ಥೆಯ ವಟು ಗಿರಿಧರಿ ಶ್ಯಾಮ್ ದಾಸ್ ಮಾಹಿತಿ ನೀಡಿದರು.

ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಸಂಜೆ ೪ ಗಂಟೆಗೆ ರಥೋತ್ಸವ ಹೊರಡಲಿದ್ದು, ಬೈಪಾಸ್ ರಸ್ತೆಯ ಮೂಲಕ ಪೊನ್ನಂಪೇಟೆ ರಸ್ತೆಯ ಮೂಲಕ ಹಾದು ಮುಖ್ಯ ಬೀದಿಯಲ್ಲಿ ರಥ ಸಂಚಾರ ನಡೆಯಲಿದೆ ಎಂದು ತಿಳಿಸಿದರು.

ನಂತರ ದೇವಸ್ಥಾನದ ಸಭಾಂಗಣದಲ್ಲಿ ರಾಮಚಂದ್ರ ಕಥಾ, ಸಾಂಸ್ಕöÈತಿಕ ಕಾರ್ಯಕ್ರಮಗಳು ಮತ್ತು ಶ್ರೀ ಕೃಷ್ಣ ಭಕ್ತ ವೃಂದದವರಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ಇಸ್ಕಾನ್ ಸಂಸ್ಥೆಯ ಅಕ್ಷಯ ಯೋಜನೆಯಂತೆ ಭಕ್ತಾಧಿಗಳಿಗೆ ಅಂದು ಅನ್ನ ಪ್ರಸಾದ ವನ್ನು ನೀಡಲಾಗುವುದು. ಇಸ್ಕಾನ್ ಸಂಸ್ಥೆಯ ೨೫೦ಕ್ಕೂ ಹೆಚ್ಚು ಹಿರಿಯ ಮತ್ತು ಕಿರಿಯ ಸನ್ಯಾಸಿಗಳು ಭಾಗವಹಿ ಸಲಿದ್ದಾರೆ. ಅಲ್ಲದೇ ಪ್ರಮುಖವಾಗಿ ಹಿರಿಯ ಅಧ್ಯಾತ್ಮಿಕ ಜ್ಞಾನಿಗಳಿಂದ ಭಕ್ತಾಧಿಗಳಿಗೆ ಕೃಷ್ಣಪ್ರಜ್ಞಾ ಪ್ರವಚನಗಳು ನಡೆಯಲಿವೆ ಎಂದು ಹೇಳಿದರು.

ಭಗವದ್ಗೀತಾ, ರಾಮಾಯಣ, ಮಹಾಭಾರತಗಳ ಅಧ್ಯಯನದಿಂದ ಲೋಕ ಶಾಂತಿಯೆಡೆಗೆ ಸಾಗಲಿದೆ. ಧ್ಯಾನ, ಪ್ರಾರ್ಥನೆ, ತೀರ್ಥ ಪ್ರಸಾದ ಸೇವನೆಗಳಿಂದ ಮನಸ್ಸಿನ ನೆಮ್ಮದಿ ಮತ್ತು ಮನುಷ್ಯ ಪ್ರಜ್ಞಾ ಜೀವನದ ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ಪರಿಪೂರ್ಣ ಬದುಕು ನಡೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಸ್ಕಾನ್ ಸಂಸ್ಥೆ ಭಗವದ್ಗೀತಾ ಪಾರಾಯಣದ ಮೂಲಕ ಲೋಕವನ್ನು ಸುಭೀಕ್ಷೆಯೆಡೆಗೆ ಕರೆದೊಯ್ಯುವ ದಿಟ್ಟ ಧ್ಯೇಯ ಮತ್ತು ನಿಲುವಿನೊಂದಿಗೆ ಕಾರ್ಯಪ್ರವೃತ್ತ ವಾಗಿದೆ. ಈ ಉದ್ದೇಶದೊಂದಿಗೆ ರಾಮ ನವಮಿಯಂದು ಶ್ರೀ ರಾಮ ವಿಜಯ ರಥೋತ್ಸವ ಇಸ್ಕಾನ್ ಸಂಸ್ಥೆ ನಡೆಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಥೋತ್ಸವದ ಸದಸ್ಯ ಕೊಲ್ಲಿರ ಗೋಪಿ ಚಿಣ್ಣಪ್ಪ ಉಪಸ್ಥಿತರಿದ್ದರು.