*ಗೋಣಿಕೊಪ್ಪ, ಏ. ೯: ಯುಗಾದಿ ಹಬ್ಬದ ಪ್ರಯುಕ್ತ ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯ ವಾರ್ಷಿಕೋತ್ಸವ ಐದು ದಿನಗಳ ಕಾಲ ನಡೆಯಿತು.
ಪಾರ್ವತಿ ದೇವಿಯ ಉತ್ಸವದಲ್ಲಿ ದೇವಿಯ ನೃತ್ಯ ಪ್ರದಕ್ಷಣೆ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಮಹಾಮಂಗಳಾರತಿ, ದೀಪರಾಧನೆ, ತೂಚಂಬಲಿ, ಮಹಾಮಂಗಳಾರತಿ, ಇರುಬಳಕು, ದುರ್ಗಾಹೋಮ, ಮಹಾಪೂಜೆ, ಅನ್ನದಾನ, ದೇವರ ನೃತ್ಯ ಪ್ರದಕ್ಷಿಣೆ, ಸಾಮೂಹಿಕ ವಸಂತ ಪೂಜೆ, ಪಂಚಾಮೃತಾಭಿಷೇಕ, ಮಳೆಗಾಗಿ ವಿಶೇಷ ಪ್ರಾರ್ಥನೆ, ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮೇಜರ್ ಮನೆಯಪಂಡ ಬೋಪಣ್ಣ, ಪದಾಧಿಕಾರಿಗಳಾದ ವಿ.ಟಿ. ವಾಸು, ಜಪ್ಪೆಕೊಡಿ ರಾಜ ಉತ್ತಪ್ಪ, ಕೊಪ್ಪಿರ ಸನ್ನಿ ಸೋಮಯ್ಯ, ಶೋಬಿತ್ ಪಿ.ವಿ., ಪ್ರಮೋದ್ ಗಣಪತಿ, ವ್ಯವಸ್ಥಾಪಕ ಮದು, ಪ್ರಧಾನ ಅರ್ಚಕ ಸೀತಾರಾಮ್ ಇದ್ದರು.