ಶನಿವಾರಸಂತೆ, ಏ. ೯: ಸಮೀಪದ ಕೊಡ್ಲಿಪೇಟೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ - ಲಿಂಗಾಯಿತ ಸಮುದಾಯದ ಸಭೆಯಲ್ಲಿ ಪಾಲ್ಗೊಂಡ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ತಂಡ ಲಿಂಗಾಯಿತ ಪಂಚಮಸಾಲಿಗಳನ್ನು ಹಿಂದುಳಿದ ವರ್ಗ-೨ ಅ ಗೆ ಸೇರಿಸುವ ಒತ್ತಾಯದ ಹಿನ್ನೆಲೆ ಸಮುದಾಯದ ಪ್ರಮುಖರ ಅಭಿಪ್ರಾಯ, ಮಾಹಿತಿ ಪಡೆದರು. ವೀರಶೈವ - ಲಿಂಗಾಯಿತರೆಲ್ಲ ಒಂದೇ ೨-ಅ ಗೆ ಎಲ್ಲರನ್ನು ಸೇರಿಸಿ, ಇಲ್ಲವಾದರೆ ಬೇಡ ಎಂದು ಸಮುದಾಯದ ಮುಖಂಡರು ವೀರಶೈವ - ಲಿಂಗಾಯಿತ ಬೇರ್ಪಡಿಸದಂತೆ ಆಗ್ರಹಿಸಿದರು.ಆಯೋಗದ ಸದಸ್ಯರಾದ ಕಲ್ಯಾಣಕುಮಾರ್, ರಾಜಶೇಖರ್ ಸುವರ್ಣ, ಅರುಣ್ಕುಮಾರ್, ಶಾರದಾನಾಯಕ್, ದಯಾನಂದ್, ಜಗದೀಶ್, ಜಿಲ್ಲಾ ಹಿಂದುಳಿದ ವರ್ಗ ಇಲಾಖೆಯ ಅಧಿಕಾರಿಗಳಾದ ಕವಿತಾ ಹಾಗೂ ಮಂಜುನಾಥ್ ಮಾಹಿತಿ ಸಂಗ್ರಹಿಸಿದರು.
ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ವರಪ್ರಸಾದ್, ಮಾಜಿ ಅಧ್ಯಕ್ಷ ಯತೀಶ್, ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಮುಖಂಡರಾದ ಶಂಭು ಲಿಂಗಪ್ಪ, ಮಳಲಿ ನಾಗೇಶ್, ನಾಗರಾಜ್, ನಾಗೇಶ್ ಇತರರು ಹಾಜರಿದ್ದರು.